ಇಂತಹ ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 4,000 ರೂಪಾಯಿ ಎಂದ ಸಂಸದ ಡಿಕೆ ಸುರೇಶ್!

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಶಕ್ತಿ ಯೋಜನೆ (Shakti scheme) ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಈ ಮೂರು ಯೋಜನೆಗಳು ಕೂಡ ಮಹಿಳೆಯರ ಸಬಲೀಕರಣ (women empowerment) ಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಬಹುದು.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಉಚಿತವಾಗಿ 2,000ಗಳನ್ನು ಪಡೆದುಕೊಂಡು ಮಹಿಳೆಯರು ಮನೆಯ ಖರ್ಚು ವೆಚ್ಚಗಳನ್ನು ಸ್ವಲ್ಪ ಮಟ್ಟಿಗಾದರೂ ವಿಭಾಯಿಸಲು ಸಾಧ್ಯವಿದೆ. ಅದೇ ರೀತಿ ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣ ಮಾಡಿ ಅದರಲ್ಲಿಯೂ ಹಣ ಉಳಿತಾಯ ಮಾಡಬಹುದು

6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಹೊಸ ರೂಲ್ಸ್! ತಪ್ಪದೆ ತಿಳಿಯಿರಿ

ಇನ್ನು ಮೂರನೆಯದಾಗಿ ಅನ್ನ ಭಾಗ್ಯ ಯೋಜನೆ ಮಹಿಳೆಯರಿಗೆ ಉಚಿತ ಅಕ್ಕಿ ವಿತರಣೆ ಮಾಡುವ ಯೋಜನೆ ಆಗಿದ್ದು ಇದರಿಂದಲೂ ಕೂಡ ಸಾಕಷ್ಟು ಕುಟುಂಬಗಳು ದುಡಿಮೆ ಇಲ್ಲದೆ ಇದ್ದರೂ ತುತ್ತು ಅನ್ನಕ್ಕೆ ಸಮಸ್ಯೆ ಇಲ್ಲದೆ ಜೀವನ ನಡೆಸುವಂತೆ ಆಗಿದೆ.

ಇಷ್ಟೆಲ್ಲಾ ರಾಜ್ಯ ಸರ್ಕಾರ (State government) ಕೊಟ್ಟಿದೆ. ಆದರೆ ರಾಜ್ಯ ಸರ್ಕಾರದ ತೆರಿಗೆ ಹಣ ಮಾತ್ರ ರಾಜ್ಯಕ್ಕೆ ಸರಿಯಾಗಿ ಸಂದಾಯ ಆಗುತ್ತಿಲ್ಲ ಎನ್ನುವುದು ಸಂಸದ ಡಿಕೆ ಸುರೇಶ್ (DK Suresh) ಅವರ ವಾದ.

DK Sureshಇತ್ತೀಚಿಗೆ ಗೃಹಲಕ್ಷ್ಮಿ ಫಲಾನುಭವಿಗಳ ಯಶಸ್ಸಿನ ಸಮಾವೇಶ ಒಂದರಲ್ಲಿ ಭಾಗವಹಿಸಿದ್ದ ಸಂಸದ ಡಿಕೆ ಸುರೇಶ್ ಅವರು, ರಾಜ್ಯಕ್ಕೆ ಸಮುದಾಯವಾಗಬೇಕಾಗಿರುವ ರಾಜ್ಯದ ತೆರಿಗೆ ಹಣವನ್ನು ಹಿಂತಿರುಗಿಸಿ ಕೊಡಿ ಮಹಿಳೆಯರಿಗೆ 2000 ಅಲ್ಲ ಬದಲಿಗೆ ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿಗಳನ್ನು ಕೊಡುತ್ತೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯದ ತೆರಿಗೆ ರಾಜ್ಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಅದರ ಬದಲು ಉತ್ತರ ಭಾರತದ ರಾಜ್ಯಗಳಾದ ಒರಿಸ್ಸಾ, ಬಿಹಾರ್ ಮೊದಲಾದ ರಾಜ್ಯಗಳಿಗೆ ಸಮುದಾಯವಾಗುತ್ತಿದೆ. ಅದರ ಬದಲು ರಾಜ್ಯಕ್ಕೆ ಸಲ್ಲ ಬೇಕಾಗಿರುವ ತೆರಿಗೆ ಹಣವನ್ನು ರಾಜ್ಯಕ್ಕೆ ನೀಡಿದರೆ ಹಣದ ಸಮಸ್ಯೆ ಆಗುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯ ದ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಡಿಕೆ ಸುರೇಶ ಟೀಕೆಸಿದ್ದಾರೆ.

ಈ ದಾಖಲೆ ಇದ್ರೆ ಆನ್ಲೈನ್ ಮೂಲಕವೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು!

ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆ!

ಇಂದು ಶಕ್ತಿ ಯೋಜನೆಯ ಮೂಲಕ 200 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಪ್ರತಿದಿನ ಸುಮಾರು 30 ಲಕ್ಷ ಮಹಿಳೆಯರು ಉಚಿತವಾಗಿ ರಾಜ್ಯ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣ ಬಿಡುಗಡೆಯಾಗಿ ಮಹಿಳೆಯರು 10,000ಗಳನ್ನು ತಮ್ಮ ಖಾತೆಯಲ್ಲಿ ಹೊಂದಲು ಸಾಧ್ಯವಾಗಿದೆ. ಗ್ಯಾರಂಟಿ ಯೋಜನೆಯ ಮೂಲಕ ಮಹಿಳೆಯರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾದ ಸಹಾಯ ನೀಡಿದರೆ ಮಹಿಳೆಯರಿಗೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.

Such women will get Rs 4,000 Says DK Suresh

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories