Karnataka NewsBangalore News

ಮಹಿಳೆಯರಿಗೆ ಗುಡ್ ನ್ಯೂಸ್! ಇಂಥವರಿಗೆ ಸಿಗುತ್ತೆ ಪ್ರತಿ ತಿಂಗಳು 800 ರೂಪಾಯಿ ಉಚಿತ

ಮಹಿಳಾ ಸಬಲೀಕರಣ (women empowerment) ಕ್ಕಾಗಿ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎನ್ನುವ ಕಾರಣಕ್ಕೆ ಬೇರೆ ಬೇರೆ ಉತ್ತಮ ಯೋಜನೆಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ.

ಇನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರೆದ ಮಹಿಳೆಯರು ಕೆಲವು ಕಾರಣಗಳಿಂದಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿಯಬೇಕಾಗಿದೆ ಇಂಥವರನ್ನು ಗುರುತಿಸಿ ಪಿಂಚಣಿ (Pension) ನೀಡುವ ಮೂಲಕ ಅವರ ಆರ್ಥಿಕ ಜೀವನ ಮತ್ತು ಸಾಮಾಜಿಕ ಭದ್ರತೆ ಕಾಪಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಇದಕ್ಕಾಗಿ ಜಾರಿಗೆ ಬಂದಿರುವ ಯೋಜನೆ ಮನಸ್ವಿನಿ ಯೋಜನೆ.

Under this new scheme of the government, women will get 800 Pension every month

ಇನ್ಮುಂದೆ ಇಂಥವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆಗೋಲ್ಲ! ಇಲ್ಲಿದೆ ಕಾರಣ

ಏನಿದು ಮನಸ್ವಿನಿ ಯೋಜನೆ? (Manaswini scheme)

ರಾಜ್ಯದಲ್ಲಿ ವಾಸಿಸುವ ಅವಿವಾಹಿತ ಮಹಿಳೆಯರು, ವಿಚ್ಛೇದಿತ ಮಹಿಳೆಯರಿಗೆ ಪ್ರತಿ ತಿಂಗಳು 800 ಪಿಂಚಣಿ ನೀಡುವ ಯೋಜನೆಯೇ ಮನಸ್ವಿನಿ ಯೋಜನೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ವರ್ಷದ ಬಜೆಟ್ ನಲ್ಲಿ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಯಾರು ಅರ್ಜಿ ಸಲ್ಲಿಸಬಹುದು?

* ಮನಸ್ವಿನಿ ಯೋಜನೆಯ ಅಡಿಯಲ್ಲಿ ತಿಂಗಳ ಪಿಂಚಣಿ ಪಡೆದುಕೊಳ್ಳಲು ವಿಚ್ಛೇದಿತ ಮತ್ತು ಅವಿವಾಹಿತ ಮಹಿಳೆಯರು ಅರ್ಜಿ ಸಲ್ಲಿಸಬಹುದು
* ಬಡತನ ರೇಖೆಗಿಂತ ಕೆಳಗಿನವರಾಗಿದ್ದು 40 ರಿಂದ 64 ವರ್ಷದ ಒಳಗಿನ ಅವಿವಾಹಿತ ಮಹಿಳೆಯರು ಅರ್ಜಿ ಸಲ್ಲಿಸಬಹುದು.
* ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ವಾರ್ಷಿಕ ವರಮಾನ 32 ಸಾವಿರಕ್ಕಿಂತ ಕಡಿಮೆ ಇರಬೇಕು.
* ಸರ್ಕಾರದಿಂದ ಸಿಗುವ ಬೇರೆ ಯಾವುದೇ ಮಾಸಾಶನ ಪಡೆದುಕೊಳ್ಳುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಹೊಸ ರೇಷನ್ ಕಾರ್ಡ್ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ನೋಡಿಕೊಳ್ಳಿ

Manaswini schemeಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents)

* ಬಿಪಿಎಲ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ವಿಧವೆ ದೃಢೀಕರಣ ಪ್ರಮಾಣ ಪತ್ರ
* ಅವಿವಾಹಿತ ಮಹಿಳೆಯರ ವಯಸ್ಸಿನ ಪ್ರಮಾಣ ಪತ್ರ
* ಬ್ಯಾಂಕ್ ಖಾತೆಯ ವಿವರ (Bank Account Details)
* ಪಾಸ್ ಪೋರ್ಟ್ ಅಳತೆಯ ಫೋಟೋ

ಈ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ರೆ ಅಂಥವರಿಗೆ ಸಿಗಲ್ಲ ಅನ್ನಭಾಗ್ಯ ಯೋಜನೆ ಹಣ!

ಅರ್ಜಿ ಸಲ್ಲಿಸುವುದು ಹೇಗೆ? (How to apply )

ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಅಟಲ್ ಜಿ ಜನಸ್ನೇಹಿ ಕೇಂದ್ರಕ್ಕೆ ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.

Such women will get Rs 800 free every month

Our Whatsapp Channel is Live Now 👇

Whatsapp Channel

Related Stories