ವರಮಹಾಲಕ್ಷ್ಮಿ ಹಬ್ಬದ ವೇಳೆ ಹೊಸ ಗ್ಯಾರಂಟಿ ಕೊಟ್ಟ ರಾಜ್ಯ ಸರ್ಕಾರ! ಫುಲ್ ಖುಷಿಯಲ್ಲಿ ಜನತೆ

ವರಮಹಾಲಕ್ಷ್ಮಿ ಹಬ್ಬ ಬರುವ ವೇಳೆ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದು ಮುಜರಾಯಿ ಇಲಾಖೆಯ ಯೋಜನೆ ಆಗಿದ್ದು, ಈ ಮೂಲಕ ಎಲ್ಲಾ ದೇವಸ್ಥಾನಗಳಲ್ಲಿ ಅರಿಶಿನ ಕುಂಕುಮ ವಿತರಿಸಲು ಸೂಚನೆ ನೀಡಲಾಗಿದೆ..

ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರಿಗೆ ಹೆಚ್ಚು ಭಾಗ್ಯಗಳು ಯೋಜನೆಗಳು (Govt Schemes) ಸಿಗುತ್ತಿದೆ ಎಂದು ಹೇಳಬಹುದು. ಈಗಾಗಲೇ ಸರ್ಕಾರ ಜನರಿಗಾಗಿ ಅದರಲ್ಲಿಯೂ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ನಮ್ಮ ರಾಜ್ಯದಲ್ಲಂತೂ ಮಹಿಳೆಯರಿಗೆ ಸಹಾಯ ಆಗುವ ಹಾಗೆಯೇ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ಕೂಡ ಈಗಾಗಲೇ ಮಹಿಳೆಯರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ನಮ್ಮ ರಾಜ್ಯದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಈಗ 2 ಯೋಜನೆಗಳನ್ನು ಜಾರಿಗೆ ತರಲಾಗಿದೆ. ಒಂದು ಶಕ್ತಿ ಯೋಜನೆ (Shakti Scheme) ಮತ್ತೊಂದು ಗೃಹಲಕ್ಷ್ಮಿ ಯೋಜನೆ (Gruha Lakshmi Scheme) . ಶಕ್ತಿ ಯೋಜನೆಯ ಮೂಲಕ ಹೆಣ್ಣುಮಕ್ಕಳು ರಾಜ್ಯದ ಎಲ್ಲೆಡೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದಲ್ಲಿ ಮನೆ ನಡೆಸುತ್ತಿರುವ ಎಲ್ಲಾ ಗೃಹಲಕ್ಷ್ಮಿಯರಿಗೆ ತಿಂಗಳಿಗೆ ₹2000 ರೂಪಾಯಿ ಸಿಗಲಿದೆ.

ವರಮಹಾಲಕ್ಷ್ಮಿ ಹಬ್ಬದ ವೇಳೆ ಹೊಸ ಗ್ಯಾರಂಟಿ ಕೊಟ್ಟ ರಾಜ್ಯ ಸರ್ಕಾರ! ಫುಲ್ ಖುಷಿಯಲ್ಲಿ ಜನತೆ - Kannada News

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್ ಟಾಪ್! ಈ ರೀತಿ ಅರ್ಜಿ ಸಲ್ಲಿಸಿ

ಈ ಯೋಜನೆಗಳ ಜೊತೆಗೆ ವರಮಹಾಲಕ್ಷ್ಮಿ ಹಬ್ಬ ಬರುವ ವೇಳೆ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆಯನ್ನು (New Schemes) ಜಾರಿಗೆ ತಂದಿದೆ. ಇದು ಮುಜರಾಯಿ ಇಲಾಖೆಯ ಯೋಜನೆ ಆಗಿದ್ದು, ಈ ಮೂಲಕ ಎಲ್ಲಾ ದೇವಸ್ಥಾನಗಳಲ್ಲಿ ಅರಿಶಿನ ಕುಂಕುಮ ವಿತರಿಸಲು ಸೂಚನೆ ನೀಡಲಾಗಿದೆ..

ಈ ಆದೇಶವನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಲಾಗಿದೆ. ಈ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಆಗಸ್ಟ್ 25ರಂದು ವರಮಹಾಲಕ್ಷ್ಮಿ ಹಬ್ಬದ ದಿನ ಹೆಣ್ಣುಮಕ್ಕಳಿಗೆ ಅರಿಶಿನ ಕುಂಕುಮ ನೀಡಬೇಕು ಎಂದು ಸೂಚನೆ ಕೊಡಲಾಗಿದೆ.

ನಮ್ಮ ದೇಶದಲ್ಲಿ ನಮ್ಮ ರಾಜ್ಯದಲ್ಲಿ ದೇವತೆಗಳನ್ನು ಹಬ್ಬಗಳ ದಿನ ಪೂಜೆ ಮಾಡಲಾಗುತ್ತದೆ. ಸ್ವರ್ಣಗೌರಿ ವ್ರತ, ನವರಾತ್ರಿ ದಿವಸಗಳಲ್ಲಿ ದೇವತೆಗಳಿಗೆ ಪೂಜೆ ಮಾಡಲಾಗುತ್ತದೆ. ಇನ್ನು ಪ್ರತಿವರ್ಷ ಶ್ರಾವಣ ಮಾಸ ಶುಕ್ಲಪಕ್ಷ ಪೌರ್ಣಮಿ ನಂತರ ಬರುವ ಮೊದಲ ಶುಕ್ರವಾರದ ದಿನದಂದು ವರಮಹಾಲಕ್ಷ್ಮಿ ವ್ರತದ ಆಚರಣೆ ಮಾಡಲಾಗುತ್ತದೆ.

ಈ ದಿನ ಎಲ್ಲಾ ಮಹಿಳೆಯರು ಕೂಡ ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಮಾಡಿ, ವರಮಹಾಲಕ್ಷ್ಮಿಗೆ ವಿಶೇಷವಾಗಿ ಅಲಂಕರಿಸಿ, ಆರಾಧನೆ ಮಾಡಿ, ನೈವೇದ್ಯ ಮಾಡಿ, ಪೂಜೆಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ದೇವಸ್ಥಾನಗಳಿಗೆ ಬರುತ್ತಾರೆ.

ರೇಷನ್ ಕಾರ್ಡ್ ಅಪ್ಲೈ ಮಾಡುವುದಕ್ಕೆ ಇನ್ಮೇಲೆ ಈ ಹೊಸ ರೂಲ್ಸ್ ಪಾಲಿಸಲೇಬೇಕು ಎಂದ ಸರ್ಕಾರ! ಏನದು ಹೊಸ ನಿಯಮಗಳು?

ವಿಶೇಷ ಹಬ್ಬದಂದು ದೇವಸ್ಥಾನಕ್ಕೆ ಬರುವ ಎಲ್ಲಾ ಮಹಿಳೆಯರಿಗೆ ಅರಿಶಿನ, ಕುಂಕುಮ, ಹಸಿರು ಗಾಜಿನ ಬಳೆಗಳು ಇದೆಲ್ಲವನ್ನು ನೀಡಲಾಗುತ್ತದೆ. ಸರ್ಕಾರದ ಈ ವಿಶೇಷ ಸೂಚನೆಯನ್ನು ಎಲ್ಲಾ ದೇವಸ್ಥಾನಗಳು ಪಾಲಿಸಬೇಕಿದ್ದು, ಇದಕ್ಕಾಗಿ ಹಣವನ್ನು ದೇವಸ್ಥಾನಗಳ ನಿಧಿಗಳಿಂದ ಬಳಸಿಕೊಳ್ಳುವ ಸೂಚನೆ ನೀಡಲಾಗಿದೆ. ಈ ಬಗ್ಗೆ ಎಲ್ಲಾ ದೇವಸ್ಥಾನಗಳಿಗೂ ಸರ್ಕಾರದಿಂದ ಅಧಿಕೃತ ಆದೇಶ, ಸುತ್ತೋಲೆ ಕಳಿಸಲಾಗುತ್ತದೆ.

ದೇವಸ್ಥಾನದ ಪ್ರಸಾದದ ರೂಪದಲ್ಲಿರುವ ಅರಿಶಿನ ಕುಂಕುಮ ಈ ಎರಡನ್ನು ಕಾಗದದಿಂದ ಮಾಡಿದ ಲಕೋಟೆಗೆ ಹಾಕಲಾಗುತ್ತದೆ, ಇದರ ಮೇಲೆ ಸರ್ಕಾರದ ಲಾಂಛನ ಮತ್ತು ದೇವರ ಹೆಸರು ಎರಡು ಕೂಡ ಇರಲಿದೆ. ಒಟ್ಟಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನ ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಒಳ್ಳೆಯ ಉಡುಗೊರೆ ಸಿಗಲಿದೆ.

The state government has given a new order for Varalakshmi festival

Follow us On

FaceBook Google News

The state government has given a new order for Varalakshmi festival