Karnataka News

ಭಾರೀ ಮಳೆ, ಕೊಡಗು ಜಿಲ್ಲೆಗೆ ರೆಡ್ ಅಲರ್ಟ್! 2 ದಿನ ಶಾಲಾ-ಕಾಲೇಜುಗಳಿಗೆ ರಜೆ

ಕೊಡಗು ಜಿಲ್ಲೆಯ ಮಳೆಯ ಭೀತಿಯಿಂದ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಎಲ್ಲಾ ಅಂಗನವಾಡಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರವಾಹ ಆತಂಕದ ಹಿನ್ನೆಲೆ ಕ್ರಮ.

Publisher: Kannada News Today (Digital Media)

  • ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿ
  • ಶಾಲಾ-ಕಾಲೇಜುಗಳಿಗೆ ಎರಡು ದಿನ ರಜೆ
  • ಎನ್‌ಡಿಆರ್‌ಎಫ್ ತಂಡ ಕೊಡಗು ಜಿಲ್ಲೆಯಲ್ಲಿ ಸಜ್ಜು

ಕೊಡಗು ಜಿಲ್ಲೆಯಲ್ಲಿ (Karnataka Kodagu District) ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಉಲ್ಬಣವಾಗಿದ್ದು, ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಬೇಂಗೂರು ಗ್ರಾಮದ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ, ದೋಣಿ ಕಡವು ಎಂಬಲ್ಲಿ ಮುಖ್ಯ ರಸ್ತೆಯ ಮೇಲೆ ನೀರು ಹರಿಯತೊಡಗಿದೆ. ಮಳೆ (rain) ಇನ್ನಷ್ಟು ಜಾಸ್ತಿಯಾದರೆ ಸಂಪರ್ಕ ಕಡಿತವಾಗುವ ಭೀತಿಯಿದೆ.

ಜಿಲ್ಲೆಯಲ್ಲಿ ಜಲ ದಿಗ್ಬಂಧನದ ಭೀತಿಯಿಂದ ಅನೇಕ ಗ್ರಾಮಗಳು ಆತಂಕದಲ್ಲಿವೆ. ಕೂಡಕಂಡಿ ಪೈಸಾರಿ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ಬದುಕು ನಡಿಸುತ್ತಿದ್ದು, 300ಕ್ಕೂ ಅಧಿಕ ಮಂದಿ ಜಲದ ಪ್ರವಾಹಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುವ ಭೀತಿ ಕಾಡುತ್ತಿದೆ. ಇಲ್ಲಿಗೆ ಶಾಶ್ವತ ಸೇತುವೆ (bridge) ನಿರ್ಮಿಸುವಂತೆ ಜನತೆ ಆಗ್ರಹಿಸಿದ್ದಾರೆ.

ಭಾರೀ ಮಳೆ, ಕೊಡಗು ಜಿಲ್ಲೆಗೆ ರೆಡ್ ಅಲರ್ಟ್! 2 ದಿನ ಶಾಲಾ-ಕಾಲೇಜುಗಳಿಗೆ ರಜೆ

ಇದನ್ನೂ ಓದಿ: ಕರ್ನಾಟಕ ಕರಾವಳಿ ಭಾಗಗಳಲ್ಲಿ ಮಳೆ ಆರ್ಭಟ: ನಾಲ್ವರು ಸಾವು, ಶಾಲೆಗಳಿಗೆ ರಜೆ

ಮಡಿಕೇರಿಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಚೆಸ್ಕಾಂ ಸಿಬ್ಬಂದಿ ತೀವ್ರ ಕಷ್ಟಪಟ್ಟು ವಿದ್ಯುತ್ ವ್ಯವಸ್ಥೆ ಪುನಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಜನಜೀವನ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಕನಿಷ್ಟ ಮೂರ್ನಾಲ್ಕು ದಿನಗಳಾಗಬಹುದು.

ಮಳೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟರಾಜು ಅವರು ಇಂದು (ಗುರುವಾರ) ಮತ್ತು ನಾಳೆ (ಶುಕ್ರವಾರ) ಅಂಗನವಾಡಿ, ಸರ್ಕಾರಿ, ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ಎರಡು ದಿನ ರಜೆ (holiday) ಘೋಷಿಸಿ ಆದೇಶ ಹೊರಡಿಸಿದ್ದಾರೆ.

Karnataka Rain

ಮಳೆ ಮುಂದುವರಿಯುವ ಸಾಧ್ಯತೆ ಇರುವ ಕಾರಣದಿಂದಲೇ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ. ಜಿಲ್ಲಾಡಳಿತದ ಅಗತ್ಯ ಕ್ರಮಗಳೊಂದಿಗೆ ಎನ್‌ಡಿಆರ್‌ಎಫ್ (NDRF) ತಂಡ ಈಗಾಗಲೇ ಜಿಲ್ಲೆಯೊಳಗೆ ಪ್ರವೇಶಿಸಿದ್ದು, ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜಾಗಿದೆ.

ಇದನ್ನೂ ಓದಿ: ಜುಲೈನಿಂದ ಅನರ್ಹರಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಕ್ಯಾನ್ಸಲ್

ಬೆಂಗಳೂರಿನ 10ನೇ ಬೆಟಾಲಿಯನ್‌ನ 30 ಯೋಧರನ್ನೊಳಗೊಂಡ ಎನ್‌ಡಿಆರ್‌ಎಫ್ ತಂಡ ಮಡಿಕೇರಿಗೆ ಬಂದು, ಈಗಾಗಲೇ ಅಪಾಯ ಪ್ರದೇಶಗಳ ಮ್ಯಾಪಿಂಗ್ (mapping) ನಡೆಸಿ, ಮುಂದಿನ ತುರ್ತು ಕಾರ್ಯಾಚರಣೆಗೆ ಸಜ್ಜಾಗಿದೆ. ಇನ್ಸ್‌ಪೆಕ್ಟರ್ ಹರೀಶ್ ಪಾಂಡೆ ನೇತೃತ್ವದ ತಂಡ “ಏನೇ ಆದರೂ ನಾವಿದ್ದೇವೆ” ಎಂದು ಭರವಸೆ ನೀಡಿದೆ.

Two-Day Holiday for Schools in Kodagu Due to Heavy Rain

English Summary

Our Whatsapp Channel is Live Now 👇

Whatsapp Channel

Related Stories