ಈ ಯೋಜನೆ ಅಡಿ ಮಹಿಳೆಯರಿಗೆ ಸಿಗುತ್ತೆ 6,000 ರೂಪಾಯಿ ಉಚಿತ! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
ಪ್ರಧಾನಮಂತ್ರಿ ಮಾತ್ರ ವಂದನಾ ಯೋಜನೆಯ ಬಗ್ಗೆ ಮಹಿಳೆಯರು ಯಾವುದೇ ಮಾಹಿತಿ ಪಡೆದುಕೊಳ್ಳಲು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಬಹುದು
ಮಹಿಳಾ ಸಬಲೀಕರಣ (women empowerment) ಎನ್ನುವ ಅತ್ಯಂತ ವ್ಯಾಪಕವಾಗಿರುವ ವಿಷಯದ ಬಗ್ಗೆ ಸರ್ಕಾರ ಹೆಚ್ಚು ಗಮನ ವಹಿಸುತ್ತದೆ, ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳು ಇಲ್ಲಿಯವರೆಗೆ ಜಾರಿಗೆ ಬಂದಿವೆ.
ಒಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಆ ಮಗು ದೊಡ್ಡವಳಾಗಿ ಮದುವೆ ಆದ ನಂತರ ಮಗುವನ್ನು ಪಡೆದು ಜವಾಬ್ದಾರಿ ಮುಗಿಸಿ ವೃದ್ಧಾಪ್ಯ ಹಂತಕ್ಕೆ ತಲುಪಿದಾಗಲು ಹೆಣ್ಣು ಮಕ್ಕಳಿಗೆ ಅನುಕೂಲವಾದ ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ (government schemes) ತಂದಿದೆ
ಇತ್ತೀಚಿಗೆ ಜಾರಿಗೆ ಬಂದಿರುವ ಈ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತವಾಗಿ 6 ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ಪಡೆದುಕೊಳ್ಳಬಹುದು.
ಭಾಗ್ಯಲಕ್ಷ್ಮಿ ಬಾಂಡ್ ಹಣ ಬಿಡುಗಡೆ! ಲಿಸ್ಟ್ ಪ್ರಕಟ, ನಿಮ್ಮ ಮಗುವಿನ ಹೆಸರು ಇದ್ಯಾ ನೋಡಿ?
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (Pradhanmantri Matra Vandana Yojana)
ಒಬ್ಬ ಹೆಣ್ಣು ಮಗಳು ಗರ್ಭಿಣಿ (pregnant women) ಆದ ನಂತರ ತನ್ನ ಮಗುವನ್ನು ಹೊಟ್ಟೆಯಲ್ಲಿ ಇಟ್ಟು ಸಾಕಲು ಹಾಗೂ ಹೆರಿಗೆ ಆದ ನಂತರ ಮಗುವನ್ನು ಬೆಳೆಸಲು ಬಹಳ ಕಷ್ಟ ಪಡುತ್ತಾಳೆ. ಅದರಲ್ಲೂ ಬಡ ಕುಟುಂಬಗಳಲ್ಲಿ ಮಕ್ಕಳನ್ನು ಸಾಕೋದು ಅಷ್ಟು ಸುಲಭವಲ್ಲ
ಮಕ್ಕಳಿಗೆ ಹುಟ್ಟುವಾಗಲೇ ಸಿಗಬೇಕಾಗಿರುವ ಪೋಷಕಾಂಶಗಳನ್ನು (nutrient food) ಒದಗಿಸಲು ಕೂಡ ಸಾಕಷ್ಟು ಜನರಿಗೆ ಸಾಧ್ಯವಾಗುವುದಿಲ್ಲ, ಇದನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ ಮಾತೃವಂದನಾ ಯೋಜನೆಯ ಜಾರಿಗೆ ತಂದಿದೆ.
ಈ ಯೋಜನೆಯ ಮೂಲಕ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಇರುವಾಗ ಹಾಗೂ ಹೆರಿಗೆ ಆದ ನಂತರ ಮಕ್ಕಳ ಪೌಷ್ಟಿಕಾಂಶ ಆಹಾರಕ್ಕಾಗಿ 6,000 ರೂ. ಗಳ ಸಹಾಯಧನವನ್ನು (financial support) ಸರ್ಕಾರ ನೀಡುತ್ತದೆ.
ಮಹಿಳೆಯರಿಗೆ ಸಿಗುತ್ತೆ 2 ಲಕ್ಷ ಸಾಲ ಸೌಲಭ್ಯ, ಯಾವುದೇ ಬಡ್ಡಿ ಇಲ್ಲ! ಕೂಡಲೇ ಅಪ್ಲೈ ಮಾಡಿ
ಮಹಿಳೆಯರಿಗೆ ಉಚಿತ 6,000 ರೂ.!
ಮಾತೃ ವಂದನಾ ಯೋಜನೆಯ ಅಡಿಯಲ್ಲಿ ಮಹಿಳೆಯರು 6,000ಗಳನ್ನ ಉಚಿತವಾಗಿ (free money) ಪಡೆಯಬಹುದು ಈ ಹಣವನ್ನು ಮೂರು ಕಂತುಗಳಲ್ಲಿ (three installment) ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ 2000 ಹಾಗೂ ಮೂರನೇ ಕಂತಿನಲ್ಲಿ ಮಗು ಹುಟ್ಟಿದ ನಂತರ 1,000ಗಳನ್ನು ಪಡೆದುಕೊಳ್ಳಬಹುದು. ಇನ್ನು ಎರಡನೇ ಮಗುವಿನ ಜನನದ ಸಂದರ್ಭದಲ್ಲಿ ಹೆಣ್ಣು ಮಗುವಾಗಿದ್ದರೆ ಪ್ರಸವದ ನಂತರ 6,000ರೂ.ಗಳನ್ನ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
19 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು.
ಜನವರಿ 1, 2017ರ ನಂತರ ಗರ್ಭಿಣಿಯಾಗುವ ಪ್ರತಿಯೊಬ್ಬ ಸ್ತ್ರೀಯರಿಗೂ ಕೂಡ ಈ ಸೌಲಭ್ಯ ದೊರೆಯುತ್ತದೆ.
ಅರ್ಜಿ ಸಲ್ಲಿಸಲು ಆದಾಯ ಪ್ರಮಾಣ ಪತ್ರ (Income Certificate), ಆಧಾರ್ ಕಾರ್ಡ್ (Aadhaar Card), ಜಾತಿ ಪ್ರಮಾಣ ಪತ್ರ, ಪೋಷಕರ ಗುರುತಿನ ಚೀಟಿ ಮಗು ಜನನ ಪ್ರಮಾಣ ಪತ್ರ, ಗರ್ಭಿಣಿ ಸ್ತ್ರೀಯರಿಗೆ ಅಂಗನವಾಡಿ ಕೇಂದ್ರದಲ್ಲಿ ಕೊಡುವ ಸ್ವಯಂ ಘೋಷಣಾ ಪತ್ರವನ್ನು (self declaration) ಕೂಡ ಸಲ್ಲಿಕೆ ಮಾಡಬೇಕು. ಬ್ಯಾಂಕ್ ಖಾತೆಯ (Bank Account Details) ವಿವರ ನೀಡಬೇಕು.
ಇಂತಹ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ರದ್ದು, ಲಿಸ್ಟ್ ಬಿಡುಗಡೆ! ಸರ್ಕಾರದ ಹೊಸ ಆದೇಶ
ಅರ್ಜಿ ಸಲ್ಲಿಸುವುದು ಹೇಗೆ? (how to apply)
*ಮಾತೃ ವಂದನಾ ಯೋಜನೆಯ ಅಧಿಕೃತ ವೆಬ್ಸೈಟ್ (official website) ಆಗಿರುವ https://wcd.nic.in/ ಗೆ ಭೇಟಿ ನೀಡಿ.
ನಂತರ ನಿಮ್ಮ ಇಮೇಲ್ ಐಡಿ (email id and password) ಹಾಗೂ ಪಾಸ್ವರ್ಡ್ ಕೊಟ್ಟು ಲಾಗಿನ್ ಆಗಬೇಕು ಕ್ಯಾಪ್ಚ ಕೋಡ್ ನಮೋದಿಸಬೇಕು. ಲಾಗಿನ್ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ ಲಾಗಿನ್ (login) ಬಟನ್ ಕ್ಲಿಕ್ ಮಾಡಿದ್ರೆ ನಿಮಗೆ ಹೊಸದೊಂದು ಪುಟ ತೆರೆದುಕೊಳ್ಳುತ್ತದೆ.
*ಹೊಸ ಪುಟದಲ್ಲಿ ನೀವು ಅರ್ಜಿ ಸಲ್ಲಿಸಲು ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕು. ಎಲ್ಲಾ ದಾಖಲೆಗಳು ಸ್ಕ್ಯಾನ್ ಕಾಪಿ ಅಪ್ಲೋಡ್ (upload) ಮಾಡಬೇಕು. ಇಷ್ಟು ಮಾಡಿದ್ರೆ ನೀವು ಯೋಚನೆಗೆ ಅರ್ಜಿ ಸಲ್ಲಿಸಲು ಅರ್ಹರು ಕೊನೆಯಲ್ಲಿ ಸಬ್ಮಿಟ್ ಎನ್ನುವ ಬಟನ್ ಒತ್ತಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.
ಪ್ರಧಾನಮಂತ್ರಿ ಮಾತ್ರ ವಂದನಾ ಯೋಜನೆಯ ಬಗ್ಗೆ ಮಹಿಳೆಯರು ಯಾವುದೇ ಮಾಹಿತಿ ಪಡೆದುಕೊಳ್ಳಲು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಬಹುದು. ಅಥವಾ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕೊಡಲಾಗುವ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬಹುದಾಗಿದೆ.
ಈ ರೀತಿಯಾಗಿ ಮಹಿಳೆಯರು ಗರ್ಭಿಣಿಯಾದ ನಂತರ ತಮ್ಮ ಮಕ್ಕಳ ಪೌಷ್ಟಿಕ ಆಹಾರಕ್ಕಾಗಿ ಹಾಗೂ ಆರೋಗ್ಯವಂತ ಬೆಳವಣಿಗೆಗಾಗಿ ಸರ್ಕಾರದಿಂದ 6,000ರೂ.ಗಳನ್ನು ಸಹಾಯವಾಗಿ ಪಡೆದುಕೊಳ್ಳಬಹುದು
ಇನ್ನು ಒಂದು ಗ್ರಾಮದಲ್ಲಿ ಅಥವಾ ಯಾವುದೇ ಪ್ರದೇಶದಲ್ಲಿ ಹೆಣ್ಣು ಗರ್ಭಿಣಿ ಎನ್ನುವ ವಿಚಾರ ಗೊತ್ತಾದರೆ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಶಿಕ್ಷಕಿ ಅಥವಾ ಸಹಾಯಕರು ತಾವೇ ಖುದ್ದಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅರ್ಜಿ ನಮೂನೆಯನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಬಡತನ ರೇಖೆಗಿಂತ ಕೆಳಗಿನ (below poverty line) ಮಹಿಳೆಯರು ಗರ್ಭಿಣಿ ಆದಾಗ ಸರ್ಕಾರದಿಂದ ಉಚಿತ ಹಣ ಸೌಲಭ್ಯ ಪಡೆದುಕೊಳ್ಳಬಹುದು.
Under this scheme, women will get Rs 6,000, Apply Today