ಭಾಗ್ಯಲಕ್ಷ್ಮಿ ಬಾಂಡ್ ಹಣ ಬಿಡುಗಡೆ! ಲಿಸ್ಟ್ ಪ್ರಕಟ, ನಿಮ್ಮ ಮಗುವಿನ ಹೆಸರು ಇದ್ಯಾ ನೋಡಿ?
ಅರ್ಹ ಹೆಣ್ಣು ಮಗುವಿನ ಹೆಸರಿನಲ್ಲಿ 10,000ಗಳನ್ನ ಸಂಬಂಧಪಟ್ಟ ಬ್ಯಾಂಕ್ ಗಳಲ್ಲಿ (Banks) ಸರ್ಕಾರವೇ ಡಿಪಾಸಿಟ್ (deposit) ಇಡುತ್ತದೆ.
ಬಡವರ ಪಾಲಿಗೆ ಸರ್ಕಾರ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಜಾರಿಗೆ ತಂದು ಅವರ ಆರ್ಥಿಕ ಸಬಲೀಕರಣಕ್ಕೂ ಕೂಡ ಸಹಾಯ ಮಾಡುತ್ತದೆ ಹಿಂದಿರುವ ಬಿಜೆಪಿ ಸರ್ಕಾರವು ಬಡವರಿಗಾಗಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಗು ಜನನವಾದ ನಂತರ ಆ ಮಗುವಿಗೆ ಭವಿಷ್ಯಕ್ಕೆ ಸಹಾಯಕವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಬಹಳ ಸಮಯದ ನಂತರ ಈಗ ಒಂದು ಯೋಜನೆಗೆ ಮರು ಚಾಲನೆ ಸಿಕ್ಕಿದ್ದು ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳಲು ಬಯಸಿದರೆ ಈ ಲೇಖನ ಸಂಪೂರ್ಣವಾಗಿ ಓದಿ.
ಮಹಿಳೆಯರಿಗೆ ಸಿಗುತ್ತೆ 2 ಲಕ್ಷ ಸಾಲ ಸೌಲಭ್ಯ, ಯಾವುದೇ ಬಡ್ಡಿ ಇಲ್ಲ! ಕೂಡಲೇ ಅಪ್ಲೈ ಮಾಡಿ
ಭಾಗ್ಯಲಕ್ಷ್ಮಿ ಬಾಂಡ್! (Bhagyalakshmi bond)
ಒಂದು ಮನೆಯಲ್ಲಿ ಹೆಣ್ಣು ಮಗು (girl child) ಜನಿಸಿತು ಅಂದ್ರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಹೆಚ್ಚು, ಖರ್ಚು ವೆಚ್ಚ ಹೆಣ್ಣು ಮಕ್ಕಳಿಗೆ ಜಾಸ್ತಿ ಎನ್ನುವ ಮನೋಭಾವ ಸಾಕಷ್ಟು ಜನರಲ್ಲಿ ಇರುತ್ತದೆ.
ಅದರಲ್ಲೂ ಬಡವರು ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿ, ದೊಡ್ಡವರನ್ನಾಗಿ ಮಾಡಲು ಕಷ್ಟ ಪಡುತ್ತಾರೆ, ನಿಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ತಕ್ಷಣ ಸರ್ಕಾರದಿಂದ ಲಭ್ಯ ಇರುವ ಭಾಗ್ಯ ಲಕ್ಷ್ಮಿ ಬಾಂಡ್ ತಕ್ಷಣ ಮಾಡಿಕೊಂಡರೆ ಅದರ ಪ್ರಯೋಜನವನ್ನು ಪಡೆದು ಕೊಳ್ಳಬಹುದು.
ಇದೀಗ ಭಾಗ್ಯಲಕ್ಷ್ಮಿ ಬಾಂಡ್ (what is bhagyalakshmi bond) ಆರಂಭವಾದ 18 ವರ್ಷಗಳ ನಂತರ ಈ ಹಿಂದೆ ಅರ್ಜಿ ಸಲ್ಲಿಸಿದ ಹೆಣ್ಣು ಮಕ್ಕಳಿಗೆ ಈಗ ಒಂದು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುವುದು. ಮಾರ್ಚ್ 31 2006ರ ನಂತರ ಹುಟ್ಟಿದ ಹೆಣ್ಣು ಮಕ್ಕಳಿಗೆ ಯೋಜನೆಯ ಪ್ರಯೋಜನ ಸಿಗಲಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣು ಮಕ್ಕಳಿಗೆ (below poverty line) ಈ ಯೋಜನೆಯ ಪ್ರಯೋಜನ ಸಿಗಲಿದೆ, ಒಂದು ಮನೆಯಲ್ಲಿ ಮೊದಲ ಎರಡು ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಬಹುದು
ಈ ಬಾಂಡ್ ಮಾಡಿಸಿಕೊಂಡಿದ್ದರೆ ಸರ್ಕಾರವೇ ಅದರ ಸಂಪೂರ್ಣ ಹಣವನ್ನು ಭರಿಸುತ್ತದೆ. ಅರ್ಜಿ ಸಲ್ಲಿಸಲು ಪೋಷಕರು ಶಾಶ್ವತ ಕುಟುಂಬ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಿರಬೇಕು ಹಾಗೂ ಒಂದು ಮನೆಯಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳು ಇದ್ದವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಇಂತಹ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ರದ್ದು, ಲಿಸ್ಟ್ ಬಿಡುಗಡೆ! ಸರ್ಕಾರದ ಹೊಸ ಆದೇಶ
ಭಾಗ್ಯಲಕ್ಷ್ಮಿ ಬಾಂಡ್ ಆರ್ಥಿಕ ವಿವರ! (Bhagyalakshmi bond financial details)
ಭಾಗ್ಯಲಕ್ಷ್ಮಿ ಬಾಂಡ್ ಗೆ ಅರ್ಜಿ ಸಲ್ಲಿಸಿದರೆ ಹೆಣ್ಣು ಮಗು ಹುಟ್ಟಿದ ನಂತರ ಅವರ ಹೆಸರಿನಲ್ಲಿ ಬಂದಿರುವ ಅರ್ಜಿ ನಮೂನೆ ಪರಿಶೀಲಿಸಿ ಅರ್ಹ ಹೆಣ್ಣು ಮಗುವಿನ ಹೆಸರಿನಲ್ಲಿ 10,000ಗಳನ್ನ ಸಂಬಂಧಪಟ್ಟ ಬ್ಯಾಂಕ್ ಗಳಲ್ಲಿ (Banks) ಸರ್ಕಾರವೇ ಡಿಪಾಸಿಟ್ (deposit) ಇಡುತ್ತದೆ.
ಮಗುವಿಗೆ 18 ವರ್ಷ ತುಂಬಿದಾಗ ಸರ್ಕಾರ ಡೆಪಾಸಿಟ್ (Deposit) ಮಾಡಿರುವ ಹಣ ಹಾಗೂ 18 ವರ್ಷಗಳ ಬಡ್ಡಿ ಹಣ ಸೇರಿಸಿ ನಿಮ್ಮ ಕೈಗೆ ದೊಡ್ಡ ಮೊತ್ತ ಸಿಗುತ್ತದೆ ಎನ್ನಬಹುದು.
ಮೊದಲು ಇದ್ದ ಹತ್ತು ಸಾವಿರ ರೂಪಾಯಿಗಳ ಠೇವಣಿಯನ್ನು ಎರಡನೇ ಮಗುವಿಗೆ ಡಿಪಾಸಿಟ್ ಸಂದರ್ಭದಲ್ಲಿ 19,300 ಮಾಡಲಾಗಿದೆ. ಹಾಗಾಗಿ ಮಗುವಿಗೆ 18 ವರ್ಷ ತುಂಬಿದಾಗ ಮೊದಲ ಮಗುವಿಗೆ 1,00,052 ರೂಪಾಯಿ ಹಾಗೂ ಎರಡನೇ ಮಗುವಿಗೆ 1,00,097 ರೂಪಾಯಿಗಳು 18 ವರ್ಷಕ್ಕೆ ಸಿಗುತ್ತದೆ.
ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಕೈಸೇರಲಿದೆ ಪಡಿತರ ಚೀಟಿ
ವಿಮಾ ಸೌಲಭ್ಯವು ಸಿಗುತ್ತದೆ!
ಭಾಗ್ಯಲಕ್ಷ್ಮಿ ಬಾಂಡ್ ಅಡಿಯಲ್ಲಿ ಅರ್ಜಿದಾರರಿಗೆ ವಿಮಾ ಸೌಲಭ್ಯವನ್ನು (insurance benefit) ನೀಡಲಾಗುವುದು, ಅಂದರೆ ಹೆಣ್ಣು ಮಗು ಸಹಜ ಸಾವನ್ನು ಕಂಡರೆ 42,500 ವಿಮೆ ನೀಡಲಾಗುವುದು. ಹೆಣ್ಣು ಮಗು ಕಾಯಿಲೆಗೆ ಒಳಗಾದರೆ 25,000 ವರೆಗೆ ಹಾಗೂ ಅದೇ ಮಗು ಆಕ್ಸಿಡೆಂಟ್ ನಲ್ಲಿ ಜೀವ ಕಳೆದುಕೊಂಡರೆ ಒಂದು ಲಕ್ಷ ರೂಪಾಯಿಗಳ ವಿಮೆ (Insurance) ನೀಡಲಾಗುವುದು.
ಯೋಜನೆಯ ಪ್ರಯೋಜನ ಯಾರಿಗೆಲ್ಲ ಸಿಗಲಿದೆ ಗೊತ್ತಾ?
ಮೊದಲನೆಯದಾಗಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ನಿಮ್ಮ ಹೆಣ್ಣು ಮಗು ಹುಟ್ಟುತ್ತಿದ್ದಂತೆ ಅದರ ಜನನ ಪ್ರಮಾಣ ಪತ್ರ (birth certificate) ಮಾಡಿಸಬೇಕು. ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಗು ಹುಟ್ಟಿದ್ದಕ್ಕೆ ದಾಖಲಾತಿ ನೀಡಬೇಕು.
ಹೆಣ್ಣು ಮಗುವಿಗೆ 18 ವರ್ಷ ತುಂಬುವುದರ ಒಳಗೆ ವಿವಾಹ ಮಾಡಬಾರದು. ಮಗು ಶಾಲೆಗೆ ಹೋಗುವ ಸಂದರ್ಭದಲ್ಲಿ ಪ್ರಮಾಣ ಪತ್ರವನ್ನು ಒದಗಿಸಬೇಕು. ಯಾವ ಜಾತಿ, ಇನ್ಕಮ್ ಎಷ್ಟು ಎನ್ನುವ ಮಾಹಿತಿಯನ್ನು ನೀಡಬೇಕು. ಅರ್ಜಿ ಸಲ್ಲಿಸುವಾಗ ಇವೆಲ್ಲ ಮಾಹಿತಿಗಳನ್ನು ಕೂಡ ದಾಖಲೆಯಾಗಿ ಕೊಡುವುದು ಅಗತ್ಯವಾಗಿರುತ್ತದೆ.
ಅನ್ನಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿ
ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ ಭಾಗ್ಯಲಕ್ಷ್ಮಿ ಬಾಂಡ್ ಹಣ!
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಭಾಗ್ಯಲಕ್ಷ್ಮಿ ಬಾಂಡ್ ಆರಂಭಿಸಿದ್ರು, 2006ರಲ್ಲಿ ಆರಂಭವಾಗಿರುವ ಈ ಯೋಜನೆ ಇದೀಗ ಜನರ ಕೈ ಸೇರುವ ಸಮಯ.. 2024, ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಫಲಾನುಭವಿ ಹೆಣ್ಣು ಮಕ್ಕಳು 18 ವರ್ಷ ತುಂಬಿದರೆ ಸರಕಾರದಿಂದ ತಮ್ಮ ಖಾತೆಗೆ (Bank Account) ನೇರವಾಗಿ ಜಮಾ ಮಾಡಿಸಿಕೊಳ್ಳಬಹುದು.
Bhagyalakshmi Bond Scheme Money Release Details