ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಕೈಸೇರಲಿದೆ ಪಡಿತರ ಚೀಟಿ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಬಿಪಿಎಲ್ ಕಾರ್ಡ್ ಗಾಗಿ (BPL Ration Card) ಜನರು ಹಾತೊರೆಯುತ್ತಿದ್ದಾರೆ. ಜೊತೆಗೆ ಹೊಸ ರೇಷನ್ ಕಾರ್ಡ್ ಗಾಗಿ ಅಪ್ಲಿಕೇಶನ್ ಹಾಕಲು ಕಾಯುತ್ತಿದ್ದಾರೆ.

ವಿಧಾನಸಭೆ ಸಾರ್ವತ್ರಿಕ ಚುನಾವಣೆಯ (vidhansabha election) ಸಂದರ್ಭದಲ್ಲಿ ರೇಷನ್ ಕಾರ್ಡ್ (Ration Card) ಗೆ ಜನರು ಅರ್ಜಿ ಸಲ್ಲಿಸಿದ್ದರೂ ಅಂತಹ ರೇಷನ್ ಕಾರ್ಡ್ ಅನ್ನು ಫಲಾನುಭವಿಗಳಿಗೆ ನೀಡುವ ಪ್ರಕ್ರಿಯೆಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು.

ಆದರೆ ಕಳೆದ ಎರಡುವರೆ ವರ್ಷದಿಂದ ಪಡಿತರ ಚೀಟಿಯನ್ನು ರಾಜ್ಯದಲ್ಲಿ ವಿತರಣೆ ಮಾಡಿಲ್ಲ. ನೆನೆಗುದಿಗೆ ಬಿದ್ದಿರುವ ಹೊಸ ಪಡಿತರ ವಿತರಣೆ ಚೀಟಿ ಕೆಲಸವನ್ನು ರಾಜ್ಯ ಸಿಎಂ ಸಿದ್ದರಾಮಯ್ಯ (CM siddaramaiah) ಅವರ ನೇತೃತ್ವದ ಸರ್ಕಾರ ಮುಂದುವರಿಸಲು ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ವಿತರಣೆ ಮಾಡುವ ಭರವಸೆ ನೀಡಿದೆ.

ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಕೈಸೇರಲಿದೆ ಪಡಿತರ ಚೀಟಿ - Kannada News

ಈ ದಾಖಲೆ ಕೊಟ್ರೆ ಸಾಕು, ಸ್ವಂತ ವ್ಯಾಪಾರ ಮಾಡಿಕೊಳ್ಳೋಕೆ ಸಿಗುತ್ತೆ ಒಂದು ಲಕ್ಷ ಸಬ್ಸಿಡಿ ಸಾಲ

ಬಿಡುಗಡೆ ಆಗಲಿದೆ ಹೊಸ ರೇಷನ್ ಕಾರ್ಡ್!

ಸದ್ಯದಲ್ಲಿಯೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಆಹಾರ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು ಸಂದಾಯವಾಗಿರುವ ರೇಷನ್ ಕಾರ್ಡ್ ಅರ್ಜಿಗಳು 2.90 ಲಕ್ಷದಷ್ಟು. ಈ ಅರ್ಜಿಗಳನ್ನು ಪರಿಶೀಲನೆ ಮಾಡಿ ಯಾರಿಗೆ ಎಪಿಎಲ್ ಕಾರ್ಡ್ (APL card) ವಿತರಣೆ ಆಗಬೇಕು ಹಾಗೂ ಯಾರಿಗೆ ಈ ಬಿಪಿಎಲ್ ಕಾರ್ಡ್ (BPL card)ವಿತರಣೆ ಆಗಬೇಕು ಎಂಬುದನ್ನು ಪರಿಶೀಲಿಸಿ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ (new ration card) ವಿತರಣೆ ಮಾಡಲಾಗುವುದು.

ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಹೆಚ್ ಮುನಿಯಪ್ಪ (K.H Muniyappa) ಮಾಹಿತಿ ನೀಡಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಉಚಿತ ರೇಷನ್ ನೀಡಲು ಗರೀಬ್ ಕಲ್ಯಾಣ ಯೋಜನೆ (Garib Kalyan Yojana) ಅಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂಥದ್ದು.

ಪ್ರತಿ ರಾಜ್ಯಕ್ಕೂ ಇಂತಿಷ್ಟು ಬಿಪಿಎಲ್ ಕಾರ್ಡ್ ಸಂದಾಯವಾಗಬೇಕು ಎಂದು ಕೇಂದ್ರ ಸರ್ಕಾರ ಅದಕ್ಕೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಆದರೆ ಈಗ ಮತ್ತೆ ಹೊಸ ಬಿಪಿಎಲ್ ಕಾರ್ಡ್ ಗೆ ರಾಜ್ಯದಲ್ಲಿ ಲಕ್ಷಾಂತರ ಅಪ್ಲಿಕೇಶನಗಳು ಹೋಗಿವೆ.

ಅನ್ನಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿ

BPL Ration Cardಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಬಿಪಿಎಲ್ ಕಾರ್ಡ್ ಗಾಗಿ (BPL Ration Card) ಜನರು ಹಾತೊರೆಯುತ್ತಿದ್ದಾರೆ. ಜೊತೆಗೆ ಹೊಸ ರೇಷನ್ ಕಾರ್ಡ್ ಗಾಗಿ ಅಪ್ಲಿಕೇಶನ್ (Apply Ration Card) ಹಾಕಲು ಕಾಯುತ್ತಿದ್ದಾರೆ.

ಆದರೆ ಸರ್ಕಾರದಿಂದ ಬಂದಿರುವ ಮಾಹಿತಿಯ ಪ್ರಕಾರ ಹೊಸ ರೇಷನ್ ಕಾರ್ಡ್ ವಿಲೇವಾರಿ ಆಗುವವರೆಗೂ ಮತ್ತೆ ಅಪ್ಲಿಕೇಶನ್ ಸ್ವೀಕರಿಸುವುದಿಲ್ಲ. ರೇಷನ್ ಕಾರ್ಡ್ ಒಂದು ಹಂತದ ವಿತರಣೆ ಆದ ಬಳಿಕ ಪುನಃ ಅರ್ಜಿ ಸ್ವೀಕರಿಸಲು ಸರ್ಕಾರ ನಿರ್ಧರಿಸಿದೆ.

ದೀಪಾವಳಿಗೆ ಗೃಹಲಕ್ಷ್ಮಿ 3ನೇ ಕಂತಿನ ಹಣ ಬಿಡುಗಡೆ! ಹಣ ಜಮಾ ಆಗಲು ದಿನಾಂಕ ನಿಗದಿ

ಇದರ ಜೊತೆಗೆ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಅಕ್ರಮವಾಗಿ ಹಾಗೂ ನಕಲಿ ಪಡಿತರ ಚೀಟಿ ಹೊಂದಿರುವವರ ಪಡಿತರ ಚೀಟಿಯನ್ನು ರದ್ದುಪಡಿಸಲು ಮುಂದಾಗಿದೆ

ಈಗಾಗಲೇ ಸಾಕಷ್ಟು ನಕಲು ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿವೆ (BPL Ration card cancellation). ಒಟ್ಟಿನಲ್ಲಿ ಕಳೆದ ಎರಡುವರೆ ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರು ಸದ್ಯದಲ್ಲಿಯೇ ಹೊಸ ರೇಷನ್ ಕಾರ್ಡ್ ಸ್ವೀಕರಿಸುವ ನಿರೀಕ್ಷೆ ಇದೆ.

Preparation for new ration card distribution, ration card will reach you soon

Follow us On

FaceBook Google News

Preparation for new ration card distribution, ration card will reach you soon