Karnataka NewsBangalore News

ಈ ದಾಖಲೆ ಕೊಟ್ರೆ ಸಾಕು, ಸ್ವಂತ ವ್ಯಾಪಾರ ಮಾಡಿಕೊಳ್ಳೋಕೆ ಸಿಗುತ್ತೆ ಒಂದು ಲಕ್ಷ ಸಬ್ಸಿಡಿ ಸಾಲ

ನೀವು ನಿಮ್ಮದೇ ಆಗಿರುವ ಸ್ವಂತ ಉದ್ಯಮ (own business) ಆರಂಭಿಸಬೇಕಾ? ನೀವು ಆರ್ಥಿಕವಾಗಿ ಸಬಲರಾಗಬೇಕಾ? ಹಾಗಾದ್ರೆ ಈ ಲೇಖನ ನಿಮಗಾಗಿ. ಹಲವರಿಗೆ ಸ್ವಂತ ಉದ್ಯೋಗ ಮಾಡುವ ಕನಸು ಇರುತ್ತೆ, ಆದರೆ ಬಂಡವಾಳದ ಕೊರತೆಯಿಂದಾಗಿ ಆ ಕನಸು ಹಾಗೆ ಉಳಿದು ಹೋಗುವ ಸಾಧ್ಯತೆ ಹೆಚ್ಚು

ಆದರೆ ಇನ್ನು ಮುಂದೆ ಬಂಡವಾಳಕ್ಕಾಗಿ (interest) ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಲ್ಲ, ಸಣ್ಣ ಪುಟ್ಟ ಉದ್ಯೋಗ ಆರಂಭಿಸುವುದಕ್ಕೆ ಸರ್ಕಾರ ನೇರ ಸಾಲ ಸೌಲಭ್ಯ (direct loan facility) ಒದಗಿಸುತ್ತಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

One lakh subsidy loan is available from the government to start Your own business

ಅನ್ನಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿ

ನೇರ ಸಾಲ ಸೌಲಭ್ಯ ಯೋಜನೆ – Loan

ಸಾಂಪ್ರದಾಯಿಕ ವೃತ್ತಿಗಳು ಮಾತ್ರವಲ್ಲದೆ ಹಣ್ಣು ತರಕಾರಿಗಳ ಮಾರಾಟ, ಕುರಿ ಮೇಕೆ ಮೊದಲಾದ ಸಾಕು ಪ್ರಾಣಿಗಳ ಉದ್ಯಮ ಎಲ್ಲದಕ್ಕೂ ಅನುಕೂಲವಾಗಲು ಸರ್ಕಾರ ಸಬ್ಸಿಡಿ ಸಾಲ (Subsidy Loan) ಸೌಲಭ್ಯವನ್ನು ಒದಗಿಸುತ್ತಿದೆ, ನಿಗಮಗಳ ಮೂಲಕ ನೇರ ಸಾಲ ಸೌಲಭ್ಯಗಳನ್ನು ನೀಡುತ್ತವೆ.

ಸ್ವಯಂ ಉದ್ಯೋಗ ನೇರ ಸಾಲವಾಗಿ ಘಟಕ ವೆಚ್ಚ ರೂ. 1 ಲಕ್ಷಗಳನ್ನು ಪಡೆದುಕೊಳ್ಳಬಹುದು, ಇಲ್ಲಿ 50,000 ಸಿಗುವ ಸಹಾಯಧನವಾಗಿದ್ದರೆ ಇನ್ನೂ ಐವತ್ತು ಸಾವಿರ ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಳ್ಳಬೇಕು. 21 ರಿಂದ 50 ವರ್ಷ ವಯಸ್ಸಿನವರು ಈ ಸಾಲ ಸೌಲಭ್ಯ ಪಡೆದುಕೊಳ್ಳಲು ಅರ್ಹರು.

ಸ್ವಯಂ ಉದ್ಯೋಗ ನೇರ ಸಾಲ ಸೌಲಭ್ಯದ ಬೆನಿಫಿಟ್!

ನಿರುದ್ಯೋಗಿ ಪುರುಷರು ಅಥವಾ ಮಹಿಳೆಯರು (employed men and women) ತಮ್ಮದೇ ಆಗಿರುವ ಸ್ವಯಂ ಉದ್ಯೋಗ ಮಾಡಲು ಸ್ವಯಂ ಉದ್ಯೋಗ ನೇರ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ರೂ. 1,00,000ಗಳನ್ನು ನೀಡಲಾಗುತ್ತದೆ ಆದರೆ ಕೇವಲ 50,000ಗಳನ್ನು ಮಾತ್ರ ನೀವು ಮರುಪಾವತಿ (Loan Re Payment) ಮಾಡಬೇಕು. ಶೇಕಡ 4% ಬಡ್ಡಿ ದರದಲ್ಲಿ 30 ತಿಂಗಳ ಕಾಲಾವಕಾಶವನ್ನು ಮರುಪಾವತಿಗಾಗಿ ನೀಡಲಾಗುತ್ತದೆ.

ದೀಪಾವಳಿಗೆ ಗೃಹಲಕ್ಷ್ಮಿ 3ನೇ ಕಂತಿನ ಹಣ ಬಿಡುಗಡೆ! ಹಣ ಜಮಾ ಆಗಲು ದಿನಾಂಕ ನಿಗದಿ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents)

Subsidy Loanಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್
ಇಷ್ಟು ಒದಗಿಸಿದರೆ ನೀವು ನೇರ ಸಾಲ ಸೌಲಭ್ಯ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಹಣ ಸಿಗದವರು ಈ ನಂಬರ್ ಗೆ ಕಾಲ್ ಮಾಡಿ, ಮಾಹಿತಿ ನೀಡಿ! ಹಣ ಬರುತ್ತೆ

ಯಾರಿಗೆ ಸಿಗಲಿದೆ ಸಾಲ ಸೌಲಭ್ಯ?

ಈ ಕೆಳಗಿನ ನಿಗಮದ ಅಡಿಯಲ್ಲಿ ಬರುವ ಸಮುದಾಯಗಳು ಸ್ವಯಂ ಉದ್ಯೋಗ ನೇರ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು!

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಸಮುದಾಯ ಅಭಿವೃದ್ಧಿ ನಿಗಮ, ಆದಿವಾಸಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮ. ಈ ನಿಗಮಗಳ ಅಡಿಯಲ್ಲಿ ಬರುವ ಪಂಗಡಗಳಿಗೆ ನೇರ ಸಾಲ ಸೌಲಭ್ಯ (Subsidy Loan) ನೀಡಲಾಗುವುದು.

ಸ್ವಯಂ ಉದ್ಯೋಗ ನೇರ ಸಾಲ ಸೌಲಭ್ಯ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 29, 2023 ಕೊನೆಯ ದಿನಾಂಕವಾಗಿದೆ. ಕರ್ನಾಟಕ ಸೇವಾ ಸಿಂಧು ಅಧಿಕೃತ ವೆಬ್ಸೈಟ್ (Seva Sindhu website) ಮೂಲಕ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

One lakh subsidy loan is available from the government to start Your own business

Our Whatsapp Channel is Live Now 👇

Whatsapp Channel

Related Stories