ಗೃಹಲಕ್ಷ್ಮಿ ಹಣ ಸಿಗದವರು ಈ ನಂಬರ್ ಗೆ ಕಾಲ್ ಮಾಡಿ, ಮಾಹಿತಿ ನೀಡಿ! ಹಣ ಬರುತ್ತೆ
ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಪ್ರತಿಯೊಬ್ಬ ಮಹಿಳೆಯರ ಖಾತೆಗೂ (Bank Account) ಜಮಾ ಆಗಬೇಕು ಎಂದು ಸರ್ಕಾರ (government) ಶತಾಯಗತಾಯ ಪ್ರಯತ್ನಿಸುತ್ತಿದೆ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಪ್ರತಿಯೊಬ್ಬ ಮಹಿಳೆಯರ ಖಾತೆಗೂ (Bank Account) ಜಮಾ ಆಗಬೇಕು ಎಂದು ಸರ್ಕಾರ (government) ಶತಾಯಗತಾಯ ಪ್ರಯತ್ನಿಸುತ್ತಿದೆ
ಯಾಕೆಂದರೆ ಇಲ್ಲಿಯವರೆಗೆ 70% ಮಹಿಳೆಯರ ಖಾತೆಗೆ ಹಣ ಜಮಾ (Money Transfer) ಆಗಿದ್ದರು ಬೇರೆ ಬೇರೆ ಕಾರಣಗಳಿಂದ 30% ಮಹಿಳೆಯರ ಖಾತೆಗೆ ಹಣ ಬಂದಿಲ್ಲ.
ಇದರಿಂದ ಬಡ ಮಹಿಳೆಯರಿಗೆ ಆರ್ಥಿಕ ಸಮಸ್ಯೆ (financial problem) ಕೂಡ ಉಂಟಾಗುತ್ತದೆ. ಹೀಗಾಗಿ ಪ್ರತಿಯೊಂದು ಮಹಿಳೆಯರು ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಲು ಸರಕಾರ ಮತ್ತೊಂದು ಅವಕಾಶ ನೀಡುತ್ತಿದೆ.
ರೈತರಿಗೆ ಕೃಷಿಭಾಗ್ಯ, ಸರ್ಕಾರದಿಂದ ದೀಪಾವಳಿ ಗಿಫ್ಟ್ ! ಇನ್ಮುಂದೆ ಈ ಸೌಲಭ್ಯಗಳು ಉಚಿತ
ಇನ್ನೂ ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? (Aadhaar Card link)
ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಮುಖ್ಯವಾಗಿರುವ ಆಧಾರ ಅಂದರೆ, ಮಹಿಳೆಯರು ಅರ್ಜಿ (application) ಸಲ್ಲಿಸಿದ ನಂತರ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.
ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ಅಂತವರ ಖಾತೆಗೆ ಹಣ ಜಮ ಆಗುವುದಿಲ್ಲ (DBT) ಹಾಗೂ ಈಗಾಗಲೇ ಬಿಡುಗಡೆ ಆಗಿರುವ ಎರಡು ಕಂತಿನ ಹಣವು (two installment) ಅಂತಹ ಮಹಿಳೆಯರ ಖಾತೆಗೆ ಬಂದು ಸೇರಿಲ್ಲ.
ಮಾನ್ಯ ಸಚಿವೆ ಹೇಳುವಂತೆ ಇದೀಗ ಪ್ರತಿದಿನ ಸಿಡಿಪಿಓ ಅಧಿಕಾರಿಗಳ (CDPO officers) ಜೊತೆಗೆ ಸ್ಥಳೀಯ ಚರ್ಚೆ ಕೂಡ ನಡೆಸಲಾಗುತ್ತಿದೆ. ಇದರಿಂದಾಗಿ ಎಲ್ಲಿ ಯಾವ ರೀತಿಯ ಲೋಪದೋಷ (technical error) ಉಂಟಾಗಿದೆ ಎಂಬುದನ್ನ ತಿಳಿದು ಅದನ್ನ ಪತ್ತೆ ಹಚ್ಚಿ ಮಹಿಳೆಯರ ಖಾತೆಗೆ ಹಣ ಜಮಾ ಆಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಿಪಿಎಲ್, ಎಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ! ಸಿಗಲಿದೆ ಮತ್ತೊಂದು ಯೋಜನೆ ಬೆನಿಫಿಟ್
ಅಷ್ಟೇ ಅಲ್ಲ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು ಈವರೆಗೆ ಆಧಾರ್ ಲಿಂಕ್ ಆಗದೆ ಸುಮಾರು 12 ಲಕ್ಷ ಮಹಿಳೆಯರು ಹಣ ಸ್ವೀಕರಿಸಿಲ್ಲ. ಆದ್ದರಿಂದ ಇಂಥವರ ಖಾತೆಗೆ ಮುಂದಿನ ತಿಂಗಳಿನಿಂದ ಆಧಾರ್ ಕಾರ್ಡ್ ಲಿಂಕ್ ಆಗದೆ (Aadhaar link not compulsory) ಇದ್ದರೂ ಕೂಡ ಹಣ ಜಮಾ ಆಗಲಿದೆ.
ನವೆಂಬರ್ ತಿಂಗಳ ಅಂತ್ಯದ ಒಳಗೆ ಅರ್ಜಿ ಸಲ್ಲಿಕೆ ಮಾಡಿದ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಪ್ರತಿಶತ ನೂರರಷ್ಟು ಮೂರು ತಿಂಗಳ ಹಣವನ್ನು ಪಾವತಿ ಮಾಡಲು ಸರ್ಕಾರ ನಿರ್ಧರಿಸಿದೆ ಅಂದರೆ ಎರಡು ಕಂತು ಸ್ವೀಕರಿಸಿದವರು ಮೂರನೇ ಕಂತನ್ನು ಕೂಡ ಪಡೆಯುತ್ತಾರೆ. ಜೊತೆಗೆ ಈವರೆಗೆ ಒಂದು ಕಂತನ್ನು ಕೂಡ ಸ್ವೀಕರಿಸಿದ ಇರುವ ಮಹಿಳೆಯರು ಮೂರು ಕಂತಿನ ಹಣವನ್ನು ಒಟ್ಟಿಗೆ ಪಡೆಯುತ್ತಾರೆ.
ಗೃಹಲಕ್ಷ್ಮಿ 3ನೇ ಕಂತಿನ ಹಣ ಈ ದಿನ ಬಿಡುಗಡೆ! ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳಿ
ಅಂಗನವಾಡಿ ಸಹಾಯಕಿಯರು ಮನೆಗೆ
ಇನ್ನು ಮಹಿಳೆಯರು ತಮ್ಮ ಖಾತೆಗೆ ಹಣ ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸುವ ಅಗತ್ಯ ಇಲ್ಲ, ಯಾರ ಖಾತೆಗೆ ಹಣ ಬಂದಿಲ್ಲವೂ ಅಂಥವರ ಲಿಸ್ಟ್ ಅನ್ನು ಅಂಗನವಾಡಿ ಸಹಾಯಕಿಯರಿಗೆ ಕಳುಹಿಸಲಾಗಿದ್ದು ಅಂಗನವಾಡಿ ಶಿಕ್ಷಕಿ ಅಥವಾ ಸಹಾಯಕಿ ನಿಮ್ಮ ಮನೆ ಬಾಗಿಲಿಗೆ ಬಂದು ಗೃಹಲಕ್ಷ್ಮಿ ಯೋಜನೆಯ ಅರ್ಜಿಯಲ್ಲಿ ಆಗಿರುವ ವ್ಯತ್ಯಾಸ ಹಾಗೂ ಯಾವ ಕಾರಣಕ್ಕೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದನ್ನು ಪರಿಶೀಲಿಸಿ ನಿಮಗೆ ಪರಿಹಾರ ಸೂಚಿಸುತ್ತಾರೆ. ಇದರ ಜೊತೆಗೆ ನೀವು ಗೃಹಲಕ್ಷ್ಮಿ ಸಹಾಯವಾಣಿಗೂ ಕೂಡ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ನಿಮ್ಮ ಇನ್ನಿತರ ಪ್ರಶ್ನೆಗಳಿಗೆ ಈ ಲಿಂಕ್ ಕ್ಲಿಕ್ಕಿಸುವ ಮೂಲಕ ತಿಳಿಯಬಹುದು https://ipgrs.karnataka.gov.in/Content/GruhaLakshmiFAQs.pdf
Those who do not get Gruha lakshmi money, call this Helpline number and give information