ಬಿಪಿಎಲ್, ಎಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ! ಸಿಗಲಿದೆ ಮತ್ತೊಂದು ಯೋಜನೆ ಬೆನಿಫಿಟ್

ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಹಾಗೂ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಜನರ ಖಾತೆಗೆ (Bank Account) ಸಂಪೂರ್ಣವಾಗಿ ವರ್ಗಾವಣೆ ಆಗಿಲ್ಲ ಎನ್ನುವುದನ್ನು ಹೊರತುಪಡಿಸಿ ಉಳಿದೆರಡು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ

ರಾಜ್ಯ ಸರ್ಕಾರದ (state government) ಪ್ರತಿಯೊಂದು ಯೋಜನೆಗಳು ಕೂಡ ಯಶಸ್ವಿಯಾಗಿ ಜನರ ಕೈ ತಲುಪುತ್ತಿವೆ, ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಹಾಗೂ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಜನರ ಖಾತೆಗೆ (Bank Account) ಸಂಪೂರ್ಣವಾಗಿ ವರ್ಗಾವಣೆ ಆಗಿಲ್ಲ ಎನ್ನುವುದನ್ನು ಹೊರತುಪಡಿಸಿ ಉಳಿದೆರಡು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ.

ಈಗ ರಾಜ್ಯದ ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಮಾತ್ರವಲ್ಲದೆ ಆರೋಗ್ಯ ಪರಿಸ್ಥಿತಿಯನ್ನು (Health Condition) ಕೂಡ ಮನಸ್ಸಿನಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆ ಆರಂಭವಾಗಲಿದ್ದು ಸಾಕಷ್ಟು ಜನರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಗೃಹಲಕ್ಷ್ಮಿ 3ನೇ ಕಂತಿನ ಹಣ ಈ ದಿನ ಬಿಡುಗಡೆ! ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳಿ

ಬಿಪಿಎಲ್, ಎಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ! ಸಿಗಲಿದೆ ಮತ್ತೊಂದು ಯೋಜನೆ ಬೆನಿಫಿಟ್ - Kannada News

ಆರೋಗ್ಯಕ್ಕಾಗಿ ಪುನೀತ್ ಹೃದಯ ಜ್ಯೋತಿ ಯೋಜನೆ (Puneet Hrudaya Jyothi Yojana)

ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುವ ಅದ್ಭುತ ಕಲಾವಿದ. ಇದೀಗ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇನ್ನಷ್ಟು ಬೆಳಗಿಸಲು ಸರ್ಕಾರ ಒಂದು ಹೊಸ ಯೋಜನೆ ಜಾರಿಗೆ ತಂದಿದ್ದು ಅದುವೇ ಪುನೀತ್ ಹೃದಯ ಜ್ಯೋತಿ ಯೋಜನೆ!

ಯೋಜನೆಯ ಬಗ್ಗೆ ಹೇಳುವುದಾದರೆ ಯಾರಿಗೆ ಹೃದಯದ ಸಮಸ್ಯೆ ಇರುತ್ತದೆಯೋ ಅಥವಾ ಹಠಾತ್ ಹೃದಾಯಾಘಾತ, ಎದೆ ನೋವು ಕಾಣಿಸಿಕೊಂಡರೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡುವ ಹೊಸ ಯೋಜನೆ ಸರ್ಕಾರದಿಂದ ಆರಂಭವಾಗಲಿದೆ.

ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ದೀಪಾವಳಿ ಗಿಫ್ಟ್; ರೈತರ ಬಡ್ಡಿ ಮನ್ನಾ ಚಿಂತನೆ

Another statewide scheme in the name of Puneeth Rajkumarಇದಕ್ಕಾಗಿ ರಾಜ್ಯ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ. ರಾಜ್ಯದಲ್ಲಿರುವ 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ಪೋಕ್ ಹಬ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ.

85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ಪೋಕ್ ಗಳನ್ನು ಹಾಗೂ ಹದಿನಾರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (multi speciality hospital) ಯಲ್ಲಿ ಹಬ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.

ರಾಜ್ಯದ ಜನರು ಖುಷಿ ಪಡೋ ಸುದ್ದಿ; ಡಿಸೆಂಬರ್ ವೇಳೆಗೆ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯ ಪ್ರಯೋಜನ ಏನು?

ಪುನೀತ್ ಅವರ ಹೆಸರಿನಲ್ಲಿ ಆರಂಭಿಸಲಾಗುವ ಹೃದಯ ಜ್ಯೋತಿ ಯೋಜನೆಯ ಅಡಿಯಲ್ಲಿ ಯಾವುದೇ ವ್ಯಕ್ತಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಉಚಿತವಾಗಿ ಇಸಿಜಿ ಮಾಡಲಾಗುವುದು.

ಸಮಸ್ಯೆ ತೀವ್ರವಾಗಿದ್ದರೆ ಅವರನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ (Near By Hospital) ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುವುದು. ವ್ಯಕ್ತಿ ಹೆಚ್ಚು ನೋವಿನಿಂದ ಬಳಲುತ್ತಿದ್ದರೆ ಇಸಿಜಿ (ECG) ಆಧಾರದ ಮೇಲೆ ವ್ಯಕ್ತಿಗೆ ಬೇಕಾಗಿರುವ ಅಗತ್ಯ ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ನೀಡಲಾಗುವುದು, ಇದಕ್ಕೆ 30 ರಿಂದ 40 ಸಾವಿರ ರೂಪಾಯಿಗಳ ವೆಚ್ಚ ಇದ್ದು ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

ಸ್ಪೋಕ್ ಕೇಂದ್ರಗಳಲ್ಲಿ ಚಿಕಿತ್ಸೆಯನ್ನು ಉಚಿತವಾಗಿ ಹೃದ್ರೋಗಿಗಳಿಗೆ ನೀಡಲಾಗುವುದು. ಇಂಜೆಕ್ಷನ್ (injection) ಹಾಗೂ ಇಸಿಜಿ ಪ್ರಥಮ ಚಿಕಿತ್ಸೆ ಎಲ್ಲವೂ ಕೂಡ ಉಚಿತವಾಗಿ ಇರುತ್ತದೆ, ಇನ್ನು ಮುಖ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರವಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು ಕೂಡ ಹಠಾತ್ ಎದೆ ನೋವು ಅಥವಾ ಹೃದಯ ಸಂಬಂಧಿ ಕಾಯಿಲೆಯನ್ನು ಅನುಭವಿಸುತ್ತಿದ್ದರೆ ಅಂತಹವರಿಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ರಾಜ್ಯ ಸರ್ಕಾರ ಜಾರಿಗೆ ತಂತು ಮಾಂಗಲ್ಯ ಭಾಗ್ಯ ಯೋಜನೆ! ಮದುವೆಯಾಗುವವರಿಗೆ ಸ್ಕೀಮ್

Another scheme benefit for APL Card and BPL Ration Card Holders

Follow us On

FaceBook Google News

Another scheme benefit for APL Card and BPL Ration Card Holders