ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮೊದಲ ಕಂತಿನ ಹಣ ನಿಮ್ಮ ಖಾತೆಗೆ (Bank Account) ಜಮಾ ಆಗಿದ್ಯಾ? ಎರಡನೇ ಕಂತಿನ ಹಣವು (second installment) ಜಮಾ ಆಗಿ 3ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರಾ? ಅಥವಾ ನಿಮ್ಮ ಖಾತೆಗೆ ಇದುವರೆಗೆ ಒಂದು ಕಂತಿನ ಹಣವು ಜಮಾ (Money Transfer) ಆಗಿಲ್ವ?

ಹಾಗಾದ್ರೆ ಚಿಂತೆ ಬೇಡ ಸರ್ಕಾರ ಹಣ ಬಿಡುಗಡೆ ಬಗ್ಗೆ ಮಹತ್ವದ ಅಪ್ಡೇಟ್ (update) ಒಂದನ್ನು ನೀಡಿದೆ. ಪ್ರತಿಯೊಬ್ಬ ಫಲಾನುಭವಿ ಖಾತೆಗೆ (beneficiaries account) ಹಣ ಮಂಜೂರು ಮಾಡುವುದಾಗಿ ತಿಳಿಸಿದೆ.

Gruha Lakshmi Scheme 3rd installment release for Diwali, Set a date for depositing money

ಗೃಹಲಕ್ಷ್ಮಿ ಹಣ ಸಿಗದವರು ಈ ನಂಬರ್ ಗೆ ಕಾಲ್ ಮಾಡಿ, ಮಾಹಿತಿ ನೀಡಿ! ಹಣ ಬರುತ್ತೆ

ನಿಮ್ಮ ಖಾತೆಗೆ ಹಣ ಜಮಾ ಆಗಲು ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯಿರಿ

ಎಲ್ಲರಿಗೂ ಗೊತ್ತಿರುವ ಹಾಗೆ ಬ್ಯಾಂಕ್ ಅಕೌಂಟ್ (bank account) ಇದ್ದರೆ ಸಾಲದು, ಅದಕ್ಕೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಿರಲೇಬೇಕು ಇಲ್ಲವಾದರೆ ಅಂತಹ ಫಲಾನುಭವಿ ಮಹಿಳೆಯರ ಖಾತೆಗೆ ಅರ್ಜಿ ಸಲ್ಲಿಸಿದ್ದರು ಕೂಡ ಹಣ ಜಮಾ ಆಗದೆ ಇರುವ ಸಾಧ್ಯತೆ ಇರುತ್ತದೆ.

ಈಗಾಗಲೇ ಕೆವೈಸಿ ಮಾಡಿಸಿಕೊಳ್ಳಲು ಪ್ರಯತ್ನಿಸಿದರು ಹಲವು ಮಹಿಳೆಯರಿಗೆ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮಹತ್ವದ ಮಾಹಿತಿ ಒಂದನ್ನು ನೀಡಿದ್ದಾರೆ

ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗಿಂತ ಪೋಸ್ಟ್ ಆಫೀಸ್ನಲ್ಲಿ ಖಾತೆ (post office account) ಹೊಂದಿರುವವರಿಗೆ ಯಾವುದೇ ಸಮಸ್ಯೆ ಇಲ್ಲದೆ ಹಣ ಜಮಾ ಆಗಿದೆ, ಹಾಗಾಗಿ ಮಹಿಳೆಯರು ಕೂಡಲೇ ಪೋಸ್ಟ್ ಆಫೀಸ್ ನಲ್ಲಿ ಖಾತೆಯನ್ನು ತೆರೆದು ಅದನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಿದರೆ ನೇರವಾಗಿ ಅವರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ತಿಳಿಸಲಾಗಿದೆ.

ರೈತರಿಗೆ ಕೃಷಿಭಾಗ್ಯ, ಸರ್ಕಾರದಿಂದ ದೀಪಾವಳಿ ಗಿಫ್ಟ್ ! ಇನ್ಮುಂದೆ ಈ ಸೌಲಭ್ಯಗಳು ಉಚಿತ

ನವೆಂಬರ್ 15ರ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ!

GRUHA LAKHMI SCHEMEಮುಖ್ಯವಾಗಿ ಮಹಿಳೆಯರು ಗಮನಿಸಬೇಕಾದ ವಿಷಯ ಏನೆಂದರೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಖಾತೆಗೆ ಜಮಾ ಆಗುತ್ತದೆ ಎಂದು ತಿಂಗಳ ಪೂರ್ತಿ ಕಾಯುವ ಅಗತ್ಯವಿಲ್ಲ, ಪ್ರತಿ ತಿಂಗಳು 15ರಿಂದ 20ನೇ ತಾರೀಖಿನ ಒಳಗೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ.

ಇದೀಗ ಮೂರನೇ ಕಂತಿನ ಹಣ ದೀಪಾವಳಿ ಸಮಯದಲ್ಲಿ ಅಂದರೆ ನವೆಂಬರ್ 15ನೇ ತಾರೀಖಿನಂದು ಬಿಡುಗಡೆ ಆಗಲಿದ್ದು, ಬಿಡುಗಡೆ ಆದ ದಿನದಿಂದ ಕೇವಲ ಆರು ದಿನಗಳಲ್ಲಿ ಫಲಾನುಭವಿ ಗೃಹಿಣಿರ ಖಾತೆಯನ್ನು ತಲುಪಲಿದೆ.

ಮನೆ ಬಾಡಿಗೆಗಳು 30% ರಷ್ಟು ಹೆಚ್ಚಳ, ಅಗ್ರಸ್ಥಾನದಲ್ಲಿ ಬೆಂಗಳೂರು! ಇಲ್ಲಿದೆ ಸಂಶೋಧನಾ ಡೇಟಾ

ಇನ್ನು ಆಧಾರ್ ಸೀಡಿಂಗ್ (Aadhaar seeding) ಆಗದೆ ಇರುವ 12 ಲಕ್ಷ ಮಹಿಳೆಯರನ್ನು ಗುರುತಿಸಿ, ಆಧಾರ್ ಲಿಂಕ್ ಆಗದೆ ಇದ್ದರೂ ಕೂಡ ಅಂಥವರ ಖಾತೆಗೂ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಸಿಡಿಪಿಓ ಅಧಿಕಾರಿಗಳ (CDPO officers) ಸಭೆ ನಡೆಸಿ ಎಲ್ಲಿ ಲೋಪ ದೋಷಗಳು ಇವೆಯೋ ಅದನ್ನು ಸರಿಪಡಿಸಿ ಮಹಿಳೆಯರ ಖಾತೆಗೆ ನವೆಂಬರ್ 15ರ ಒಳಗೆ ಹಣ ಜಮಾ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.

Gruha Lakshmi Scheme 3rd installment release for Diwali, Set a date for depositing money