ಅನ್ನಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿ
ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ (bank account) ಸರ್ಕಾರ ಜಮಾ ಮಾಡುತ್ತಿದೆ, ಈಗಾಗಲೇ ಮೂರು ಕಂತಿನ ಹಣವು ಕೂಡ ಜಮಾ ಆಗಿದ್ದು, ನಾಲ್ಕನೇ ಕಂತಿನ ಹಣಕ್ಕಾಗಿ ಜನ ಕಾಯುತ್ತಿದ್ದಾರೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ (Karnataka state guarantee schemes) ಇಂದು ಜನ ಪ್ರತಿ ತಿಂಗಳು ಸರ್ಕಾರದ ಹಣ ಎಣಿಸುವಂತೆ ಆಗಿದೆ. ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ (bank account) ಸರ್ಕಾರ ಜಮಾ ಮಾಡುತ್ತಿದೆ, ಈಗಾಗಲೇ ಮೂರು ಕಂತಿನ ಹಣವು ಕೂಡ ಜಮಾ ಆಗಿದ್ದು, ನಾಲ್ಕನೇ ಕಂತಿನ ಹಣಕ್ಕಾಗಿ ಜನ ಕಾಯುತ್ತಿದ್ದಾರೆ.
ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಸ್ಟೇಟಸ್ ಚೆಕ್ ಮಾಡಿ! (Check DBT status)
ಇತ್ತೀಚಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚು ಆಸಕ್ತಿ ಮೂಡಿದೆ ಇದಕ್ಕೆ ಮುಖ್ಯವಾದ ಕಾರಣ ಸರ್ಕಾರ ಕೇಂದ್ರ ಸರ್ಕಾರದ (central government) ಐದು ಕೆಜಿ ಅಕ್ಕಿಯ ಜೊತೆಗೆ ತಾವು ಕೂಡ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಜನತೆಗೆ ತಿಳಿಸಿದ್ದು ಆದರೆ ಅಕ್ಕಿ ಒದಗಿಸಲು ಸಾಧ್ಯವಾಗದೆ ಇರುವ ಕಾರಣ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಪ್ರತಿ ಐದು ಕೆಜಿ ಅಕ್ಕಿಗೆ 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಿದೆ.
ಮನೆಯ ಯಜಮಾನನ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಗೆ (bank account) ಹಣ ಜಮಾ ಆಗುತ್ತದೆ. ಮನೆಯಲ್ಲಿ ಇರುವ ಎಲ್ಲಾ ಸದಸ್ಯರಿಗೂ ತಲಾ ಐದು ಕೆಜಿ ಅಕ್ಕಿ ಬದಲು ನಿಗದಿಯಾಗಿರುವ ರೂಪಾಯಿಗಳು ಯಜಮಾನನ ಖಾತೆಗೆ ವರ್ಗಾಯಿಸಲಾಗುತ್ತದೆ, ಹೀಗೆ ನಿಮ್ಮ ಖಾತೆಗೆ ಹಣ ಬರಬೇಕಾದರೆ ಈಕೆವೈಸಿ (EKYC) ಕಡ್ಡಾಯ ಎಂಬುದನ್ನು ಗಮನಿಸಿ.
ದೀಪಾವಳಿಗೆ ಗೃಹಲಕ್ಷ್ಮಿ 3ನೇ ಕಂತಿನ ಹಣ ಬಿಡುಗಡೆ! ಹಣ ಜಮಾ ಆಗಲು ದಿನಾಂಕ ನಿಗದಿ
ಆನ್ಲೈನ್ ಮೂಲಕ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! (Online DBT status check)
https://ahara.kar.nic.in/Home/EServices ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಬಲಭಾಗದಲ್ಲಿ ಈ ಸರ್ವಿಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಡಿ ಬಿ ಡಿ ಸ್ಟೇಟಸ್ ಎನ್ನುವ ಮತ್ತೊಂದು ಆಯ್ಕೆ ಕಾಣಿಸುತ್ತದೆ.
DBT ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಈಗ ಮೂರು ಲಿಂಕ್ಗಳು ಕಾಣಿಸುತ್ತವೆ. ಇಲ್ಲಿ ಮೂರು ಲಿಂಕ್ ಗಳನ್ನು ಜಿಲ್ಲಾವಾರು ವಿಂಗಡಿಸಲಾಗಿದ್ದು ನಿಮ್ಮ ಜಿಲ್ಲೆ (district) ಯಾವುದು ಎಂಬುದನ್ನು ನೋಡಿ ಅದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಗೃಹಲಕ್ಷ್ಮಿ ಹಣ ಸಿಗದವರು ಈ ನಂಬರ್ ಗೆ ಕಾಲ್ ಮಾಡಿ, ಮಾಹಿತಿ ನೀಡಿ! ಹಣ ಬರುತ್ತೆ
ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕೊನೆಯಲ್ಲಿ ಇರುವ ನೇರ ವರ್ಗಾವಣೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ ಇನ್ನೊಂದು ಪುಟ (new page) ತೆರೆದುಕೊಳ್ಳುತ್ತದೆ, ಅದರಲ್ಲಿ ನೀವು ವರ್ಷ ತಿಂಗಳು ಆಯ್ಕೆ ಮಾಡಿಕೊಂಡು ನಿಮ್ಮ ರೇಷನ್ ಕಾರ್ಡ್ ನಂಬರ್ (ration card number) ಹಾಕಬೇಕು.
ಬಳಿಕ ಅಲ್ಲಿ ಕೊಡಲಾಗಿರುವ ಕ್ಯಾಪ್ಚ ನಂಬರ್ ಕೂಡ ನಮೂದಿಸಿ ಗೋ ಎಂದು ಕೊಟ್ಟರೆ, ನೀವು ಯಾವ ತಿಂಗಳು ಆಯ್ಕೆ ಮಾಡಿತೀರೋ ಆ ತಿಂಗಳಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ಜಮಾ ಆಗಿದ್ದರೆ ನಿಮ್ಮ ಖಾತೆಯ ವಿವರ, ಸದಸ್ಯರ ಸಂಖ್ಯೆ, ಒಟ್ಟು ಸಂದಾಯವಾಗಿರುವ ಹಣ ಎಲ್ಲದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಅಕ್ಟೋಬರ್ ತಿಂಗಳಿನ ಡಿಬಿಟಿ ಸ್ಟೇಟಸ್ ಚೆಕ್ ಮಾಡಿದಾಗ ಪಾವತಿ ಪ್ರಗತಿಯಲ್ಲಿದೆ ಎಂದು ಕಾಣಿಸಿದರೆ ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ಅರ್ಥ.
ಬಿಪಿಎಲ್, ಎಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ! ಸಿಗಲಿದೆ ಮತ್ತೊಂದು ಯೋಜನೆ ಬೆನಿಫಿಟ್
Another installment of Annabhagya Yojana is released, Check your account status