ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು, ಶವ ನದಿಗೆ ಎಸೆದ ಪತ್ನಿ
ಅನೈತಿಕ ಸಂಬಂಧ (illicit affair) ಅಡಚಣೆಯಾಗಿದ್ದ ಗಂಡನನ್ನು ಪತ್ನಿ ಪ್ರಿಯಕರನೊಂದಿಗೆ ಸೇರಿ ಹತ್ಯೆ (murder) ಮಾಡಿದ ಘಟನೆ ಬೆಳಕಿಗೆ ಬಂದಿದೆ.
- ಗಂಡನನ್ನು ಕೊಂದು, ಶವವನ್ನು ನದಿಗೆ ಎಸೆದ ಪತ್ನಿ
- ಗಂಡನನ್ನು ಪುಸಲಾಯಿಸಿ ಕರೆದುಕೊಂಡು ಬಂದು ಹತ್ಯೆಗೈದ ಪತ್ನಿ, ಪ್ರಿಯಕರ
- ತನಿಖೆ ಬಳಿಕ ಪತ್ನಿ ಹಾಗೂ ಪ್ರಿಯಕರನ ಬಂಧನ
ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ಗಂಡನನ್ನು ಪತ್ನಿ ತನ್ನ ಪ್ರಿಯಕರನ (lover) ಸಹಾಯದಿಂದ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಕೃತ್ಯದಲ್ಲಿ ಬಸ್ತವಾಡ ಗ್ರಾಮದ 45 ವರ್ಷದ ಮಚ್ಚೇಂದ್ರ ಓಲೇಕಾರ್ ಕೊಲೆಯಾಗಿದ್ದು, ಆರೋಪಿಗಳಾದ ಪತ್ನಿ ಸಿದ್ದವ್ವ ಓಲೇಕಾರ್ ಮತ್ತು ಪ್ರಿಯಕರ ಗಣಪತಿ ಕಾಂಬಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ! ಪ್ರಕರಣಕ್ಕೆ ಹೊಸ ತಿರುವು
ಜನವರಿ 5ರಂದು ಸುಗಂಧಾದೇವಿ ದರ್ಶನಕ್ಕೆ (temple visit) ಹೋಗೋಣವೆಂದು ಮಚ್ಚೇಂದ್ರನನ್ನು ಕರೆದುಕೊಂಡು ಬಂದ ಸಿದ್ದವ್ವ ಮತ್ತು ಗಣಪತಿ, ಕೃಷ್ಣಾ ನದಿಯ ದಂಡೆಯಲ್ಲಿ ಸ್ನಾನ ಮಾಡುವ ಸಮಯದಲ್ಲಿ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದರು. ಹತ್ಯೆಯ ಬಳಿಕ ಶವವನ್ನು ನದಿಗೆ ಎಸೆಯಲಾಗಿತ್ತು.
ಕೆಲವು ದಿನಗಳ ನಂತರ ನದಿಯಲ್ಲಿ ಶವ ಪತ್ತೆಯಾದ ಬಳಿಕ, ರಾಯಬಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ಶಂಕಿತ ದೃಷ್ಟಿಯಿಂದ ಪತ್ನಿ ಮತ್ತು ಪ್ರಿಯಕರನನ್ನು ವಿಚಾರಣೆ ನಡೆಸಿದಾಗ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಂದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
Wife and Her Lover Kill Husband, Dump Body in River