ಫೋಟೋ ತೆಗೆಯೋ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ! ವೈರಲ್ ಸುದ್ದಿ

ರಾಯಚೂರಿನಲ್ಲಿ ಪತ್ನಿ ಗಂಡನನ್ನು ನದಿಗೆ ತಳ್ಳಿದ ಘಟನೆ ವೈರಲ್, ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿ ಪ್ರಾಣ ಉಳಿಸಿದರು.

ರಾಯಚೂರು (Raichur) ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ಬಳಿಯ ನದಿ ಬದಿಯಲ್ಲಿ ನಡೆದ ಈ ವಿಚಿತ್ರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ತೀವ್ರ ವೈರಲ್ ಆಗುತ್ತಿದೆ.

ಕೆಲವೇ ಸೆಕೆಂಡುಗಳಲ್ಲಿ ನದಿಗೆ ತಳ್ಳುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸಾಕ್ಷಿಯಾಗಿವೆ. ಪತ್ನಿಯಿಂದ ಗಂಡನಿಗೆ ನದಿಗೆ ತಳ್ಳುವ ಘಟನೆ ಕಣ್ಣಾರೆ ನೋಡಿದ ಸ್ಥಳೀಯರು ಕೂಡಲೇ ಹರಸಾಹಸ ಪಟ್ಟು ಹಗ್ಗಗಳ ಮೂಲಕ ಗಂಡನನ್ನು ರಕ್ಷಿಸಿದ್ದಾರೆ.

ಘಟನೆ ನಡೆದಿದ್ದು ಶಕ್ತಿನಗರದ (Shakthinagara) ನಿವಾಸಿಗಳಾದ ತಾತಪ್ಪ ಮತ್ತು ಗದ್ದೆಮ್ಮ ನಡುವೆ. ಇಬ್ಬರೂ ಏಪ್ರಿಲ್ 10ರಂದು ಮದುವೆಯಾದ ದಂಪತಿಗಳು. ಮದುವೆಯಾಗಿ ಮೂರೇ ತಿಂಗಳಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಜಗಳವೂ ಆಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಠಾಣೆಯಲ್ಲಿ ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಎಫ್‌ಐಆರ್

ಈ ಜಗಳವೇ ಘಟನೆಗೆ ಕಾರಣ ಎಂದು ತಾತಪ್ಪ ಹೇಳುತ್ತಿದ್ದಾರೆ. ತಾತಪ್ಪ ಹೇಳಿಕೆಯಲ್ಲಿ ಅವರು ‘ಪತ್ನಿಯನ್ನು ನಂಬಿ ಫೋಟೋಗೆ ನಿಂತಿದ್ದೆ, ಆದರೆ ಆಕೆ ನನ್ನನ್ನು ನದಿಗೆ ತಳ್ಳಿದಾಳೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು, ಕೆಬಿಜೆಎನ್‌ಎಲ್ (KBLNL) ಸಿಬ್ಬಂದಿ ಹಾಗೂ ಇತರರು ತಕ್ಷಣವೇ ನದಿಗೆ ಹಗ್ಗ ಎಸೆದು ತಾತಪ್ಪನನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ತಾತಪ್ಪ ತಕ್ಷಣವೇ ಸಂಬಂಧಿಕರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆ ಎರಡು ದಿನಗಳ ಹಿಂದೆ ನಡೆದಿದ್ದರೂ ಈಗ ಆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಆದರೆ ಪತ್ನಿ ಗದ್ದೆಮ್ಮ ಮಾತ್ರ ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ‘ಅವರು ಕಾಲು ಜಾರಿ ನದಿಗೆ ಬಿದ್ದಿದ್ದಾರೆ, ನಾನು ತಳ್ಳಿಲ್ಲ’ ಎಂಬಿದ್ದಾರೆ. ಘಟನೆ ಬಳಿಕ ಪತಿ-ಪತ್ನಿ ಇಬ್ಬರೂ ಮತ್ತೆ ಒಂದೇ ಬೈಕ್‌ನಲ್ಲಿ ಸ್ಥಳದಿಂದ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ 3 ತಿಂಗಳಿಗೊಮ್ಮೆ ಜಮೆ! ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ

ಪತ್ನಿ ನದಿಗೆ ತಳ್ಳಿದ ಘಟನೆಯ ಈ ವಿಡಿಯೋ ಆಘಾತಕಾರಿಯಾಗಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಘಟನೆಯ ಹಿನ್ನೆಲೆ ಮತ್ತು ಉದ್ದೇಶ ಇನ್ನೂ ತನಿಖೆಯಲ್ಲಿದೆ.

Wife Pushes Husband into River in the Name of Photoshoot

======== Story End ========

Writer of This Story

Author of the Story
About Author:

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ ಮಟ್ಟದ ಸುದ್ದಿ ಅಪ್‌ಡೇಟುಗಳನ್ನು ನಿಖರವಾಗಿ, ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ ತಲುಪಿಸುವ ಶೈಲಿ ಅವರದು... ಇನ್ನಷ್ಟು ಓದಿ

✉︎ Feedback: editor@kannadanews.today

For Article Corrections/Report Issues Click here

Related Stories