Video, ನಾಯಿಗೆ ಚಿತ್ರಹಿಂಸೆ ಕೊಟ್ಟವನಿಗೆ ಏನಾಯ್ತು ನೋಡಿ.. ವೈರಲ್ ವಿಡಿಯೋ
Viral Video : ಇದು ಕಲಿಯುಗ ಸ್ನೇಹಿತರ, ಇಲ್ಲೇ ಡ್ರಾ ಇಲ್ಲೇ ಬಹುಮಾನ.., ಮಾಡಿದುಣ್ಣೋ ಮಹರಾಯ.. ನಾವು ಮಾಡಿದ ಪಾಪ ನಮ್ಮನ್ನೇ ಸುತ್ತುತ್ತದೆ…. ಈ ಎಲ್ಲಾ ಮಾತುಗಳು ನಮಗೆ ಹಿರಿಯರು ಆಗಾಗ ಹೇಳಿಯೇ ಇರುತ್ತಾರೆ.
ಅಂದರೆ .. ಈಗ ನಾವು ಪಾಪ ಮಾಡಿದರೆ ತಕ್ಷಣದ ಫಲವನ್ನು ಅನುಭವಿಸುತ್ತೇವೆ, ಕಾಲ ರೊಟ್ಟಿ ತಿರುವಿದ ಹಾಗೆ… ಅದಕ್ಕೇ .. ಯಾರಿಗೂ ಆಪತ್ತು ಕೊಡದೆ ಸ್ನೇಹ ಜೀವಿಯಾಗಿ ವರ್ತಿಸಬೇಕು.
ಅದರಲ್ಲೂ ಮನುಷ್ಯರ ವಿಷಯ ಆಗಿರಲಿ.. ಪ್ರಾಣಿಗಳನ್ನು ಹಿಂಸಿಸಬಾರದು. ಮೂಕ ಜೀವಿಗಳಿಗೆ ಹಿಂಸೆ ನೀಡಿದರೆ ಆಗುವ ಪರಿಣಾಮ ಅಂತಿದ್ದಲ್ಲ..
ಬೀದಿ ನಾಯಿಯ ಮೇಲೆ ವಿಕೃತ ಮೆರದ ವ್ಯಕ್ತಿಯೊಬ್ಬ ನಾಯಿ ಕಿವಿಗಳನ್ನು ಹಿಡಿದು ಮೇಲಕ್ಕೆ ಎಳೆದು ಹಿಂಸಿಸಿದ್ದಾನೆ .. ಆ ಘಟನೆಯನ್ನು ವ್ಯಕ್ತಿಯೊಬ್ಬ ಚಿತ್ರಿಸಿದ್ದಾನೆ. ಅಲ್ಲಿದ್ದವರೆಲ್ಲರನ್ನೂ ವೀಡಿಯೋ ಚಿತ್ರೀಕರಣ ಮಾಡುವುದರಲ್ಲಿ ಬ್ಯುಸಿ, ಯಾರೂ ಆ ವ್ಯಕ್ತಿಯನ್ನು ತಡೆಯಲಿಲ್ಲ.
ಆದರೆ ಒಂದು ಮೂಕ ಜೀವಿಯಿಂದ ಇನ್ನೊಂದು ಮೂಕ ಜೀವಿ ನರಳುತ್ತಿರುವುದು ಸಹಿಸಲಾಗಲಿಲ್ಲವೇನೋ… ಒಂದು ಗೋವು ಕೊಂಬುಗಳಿಂದ ದಾಳಿ ಮಾಡಿ ಆತನಿಂದ ನಾಯಿಯನ್ನು ಬಿಡಿಸಿದೆ.
ಅದರೊಂದಿಗೆ ಅವನು ನಾಯಿಯನ್ನು ಬಿಟ್ಟನು… ನಾಯಿ ಬದುಕಿತು ಬಡ ಜೀವ ಅಂತ ಸ್ಥಳದಿಂದ ಪರಾರಿಯಾಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
Karma 🙏🙏 pic.twitter.com/AzduZTqXH6
— Susanta Nanda (@susantananda3) October 31, 2021