Kannada CornerKannada News Videos
Viral Video, ದಿಡೀರ್ ರಸ್ತೆಗೆ ನುಗ್ಗಿದ ಹಸು.. ಆಮೇಲೆ ಏನಾಯ್ತು ?
ಸಾಮಾನ್ಯವಾಗಿ ಹಸುಗಳು, ಮಕ್ಕಳು ಇನ್ನಾವುದೇ ಪ್ರಾಣಿಗಳು ತಮಗೆ ಅರಿವಿಲ್ಲದೆ ದಿಡೀರ್ ರಸ್ತೆಗೆ ಬಂದಾಗ, ಗಾಬರಿಯಿಂದಾಗಿ ಮುಂದಕ್ಕೂ ಹೋಗಲಾಗದೆ ಹಿಂದಕ್ಕೂ ಹೋಗಲಾಗದೆ ಕೊನೆಗೆ ಅಲ್ಲಿ ಅಪಘಾತ ಸಂಭವಿಸುತ್ತದೆ, ಇಂತಹದೇ ವೈರಲ್ ವಿಡಿಯೋ (viral video) ಇದು.
ಬ್ರೆಜಿಲ್ ನಲ್ಲಿ ಈ ಘಟನೆ ನಡೆದಿದೆ. ಅದೆಲ್ಲಿಂದಲೋ ದಿಡೀರ್ ಬಂದ ಹಸು, ರಸ್ತೆಗೆ ನುಗ್ಗಿದೆ, ಅದಕ್ಕೂ ಮೊದಲು ದಾರಿ ಹೋಕನೊಬ್ಬ ಹಸುವನ್ನು ನೋಡಿ ಗಾಬರಿಯಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಹಸು ತಕ್ಷಣ ರಸ್ತೆಗೆ ಹಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಈ ಘಟನೆಯನ್ನು ಅಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಶೂಟ್ ಮಾಡಿದ್ದಾನೆ. ಹಸು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್‌ನಲ್ಲಿದ್ದ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ. ನಂತರ ಹಸು ರಸ್ತೆ ದಾಟಿ ಇನ್ನೊಂದು ಬದಿಗೆ ಹೋಯಿತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.