ಕೇರಳ ಪ್ರವಾಹ: ಕೇರಳದ ಮನೆ ಕುಸಿತದ ವಿಡಿಯೋ
ಕೇರಳದ ಮನೆ ಕುಸಿತದ ವಿಡಿಯೋ: ಕೆಲ ದಿನಗಳಿಂದ ಪ್ರಕೃತಿ ಕೇರಳದಲ್ಲಿ ವಿನಾಶವನ್ನು ಉಂಟುಮಾಡುತ್ತಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಕೇರಳ ಮನೆ ಕುಸಿತದ ವಿಡಿಯೋ: ಕೆಲ ದಿನಗಳಿಂದ ಪ್ರಕೃತಿ ಕೇರಳದಲ್ಲಿ ವಿನಾಶವನ್ನು ಉಂಟುಮಾಡುತ್ತಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಕೇರಳದಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇರಳ ಪ್ರವಾಹದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆರೋಡಾಡುತ್ತಿವೆ.
ಅಂತಹ ಒಂದು ವಿಡಿಯೋವನ್ನು ಸುದ್ದಿ ಸಂಸ್ಥೆ ANI ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ, ಸುಂದರವಾದ ಮನೆಯೊಂದು ಪ್ರವಾಹದಿಂದಾಗಿ ಕುಸಿಯುತ್ತಿರುವ ದೃಶ್ಯವನ್ನು ಕಾಣಬಹುದು. ಸುಂದರವಾದ ಎರಡು ಅಂತಸ್ತಿನ ಮನೆ ವೀಡಿಯೋದಲ್ಲಿ ಗೋಚರಿಸುತ್ತದೆ. ಉಕ್ಕಿ ಹರಿಯುತ್ತಿರುವ ನದಿ ಮನೆಯ ಹಿಂದೆ ಗೋಚರಿಸುತ್ತದೆ.
#WATCH | Kerala: A house got washed away by strong water currents of a river in Kottayam's Mundakayam yesterday following heavy rainfall. pic.twitter.com/YYBFd9HQSp
— ANI (@ANI) October 18, 2021
ವೀಡಿಯೊದಲ್ಲಿ, ಮನೆಯ ಮುಂದೆ ನೆಲದಲ್ಲಿ ಬಿರುಕುಗಳು ಗೋಚರಿಸುತ್ತವೆ. ಅನೇಕ ಜನರು ಅದರ ಸುತ್ತಲೂ ನಿಂತು ವೀಡಿಯೊಗಳನ್ನು ಮಾಡುತ್ತಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ, ಸುಂದರವಾದ ಎರಡು ಅಂತಸ್ತಿನ ಮನೆ ತನ್ನ ನೆಲಮಹಡಿಯೊಂದಿಗೆ ಬಾಗುತ್ತದೆ ಮತ್ತು ಹರಿಯುವ ನದಿಗೆ ಕುಸಿದಿರುವ ಬಗ್ಗೆ ವೀಡಿಯೊದಲ್ಲಿ ಕಾಣಬಹುದು. ಕೆಲವೇ ಕ್ಷಣಗಳಲ್ಲಿ, ಮನೆಯ ಯಾವುದೇ ಕುರುಹು ಉಳಿಯುದಿಲ್ಲ.