ತಲೆ ಮೇಲೆ 735 ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡಿ ವಿಶ್ವ ದಾಖಲೆ, ವಿಡಿಯೋ ನೋಡಿ

Man balances 735 eggs Watch video: ಇಲ್ಲೊಬ್ಬ ವ್ಯಕ್ತಿ ತನ್ನ ತಲೆಯ ಮೇಲೆ 735 ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡಿ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ.

ಈ ಅದ್ಭುತ ಬ್ಯಾಲೆನ್ಸ್ (Man balances 735 eggs Watch video) ದಾಖಲೆಗಾಗಿ ಪಶ್ಚಿಮ ಆಫ್ರಿಕಾದ ಬೆನಿನ್‌ನ ಗ್ರೆಗೊರಿ ಮೂರು ದಿನಗಳ ಕಾಲ ಮೊಟ್ಟೆಗಳನ್ನು ತನ್ನ ಟೋಪಿಗೆ ಜೋಡಿಸಿ” ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡುವುದು ಸುಲಭದ ಕೆಲಸವಲ್ಲ ಮತ್ತು ನಾವು ಮಾರುಕಟ್ಟೆಯಿಂದ ಖರೀದಿಸಿ ಮನೆಗೆ ತರೋ ಎರಡೋ ಮೂರೋ ಮೊಟ್ಟೆಗಳನ್ನು ಸ್ವಲ್ಪ ಅಜಾಗರೂಕತೆ ವಹಿಸಿದ್ರೆ ಮೊಟ್ಟೆಗಳು ಹೊಡೆದು ಹೋಗುತ್ತವೆ.

ತಲೆ ಮೇಲೆ 735 ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡಿ ವಿಶ್ವ ದಾಖಲೆ, ವಿಡಿಯೋ ನೋಡಿ

ಅನಂತಹುದರಲ್ಲಿ, ನಾವು ಇಲ್ಲಿ ಒಂದು ಮೊಟ್ಟೆ ಅಥವಾ ಎರಡು ಮೊಟ್ಟೆಗಳ ಬಗ್ಗೆ ಮಾತನಾಡುತ್ತಿಲ್ಲ, ಒಬ್ಬ ವ್ಯಕ್ತಿ ತನ್ನ ಟೋಪಿಯಲ್ಲಿ 735 ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡುತ್ತಾ ಒಯ್ಯುವಲ್ಲಿ ಯಶಸ್ವಿಯಾಗಿದ್ದಾನೆ. ಪಶ್ಚಿಮ ಆಫ್ರಿಕಾದ ಬೆನಿನ್‌ನ ಒಬ್ಬ ವ್ಯಕ್ತಿ ದಾಖಲೆಯನ್ನು ಸೃಷ್ಟಿಸಿದ್ದು, ಇದು 735 ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡಿರುವ ರೆಕಾರ್ಡ್ ಆಗಿದೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ನಲ್ಲಿ ಸ್ಥಾನ ಪಡೆದ ಜನರ ಪಟ್ಟಿಯಲ್ಲಿ ಜಗತ್ತಿನಾದ್ಯಂತ ಅನೇಕ ಪ್ರತಿಭಾವಂತ, ನುರಿತ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ.

ನೀವು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವನ್ನು ಪರಿಶೀಲಿಸಿದರೆ, ಈ ವಿಶಿಷ್ಟ ಸಾಧನೆಗಳ ಒಂದು ನೋಟವನ್ನು ನೀವು ನೋಡಬಹುದು. ಅಚ್ಚರಿ ಚಮತ್ಕಾರಿ, ಸಾಹಸಗಳು ಸೇರಿದಂತೆ ಅನೇಕ ರೀತಿಯ ಸಾದನೆಗಳು ಕಾಣಸಿಗುತ್ತವೆ.  ಈಗ, ಪಶ್ಚಿಮ ಆಫ್ರಿಕಾದ ಈ ವ್ಯಕ್ತಿ ಆ ಪಟ್ಟಿಗೆ ಸೇರಿದ್ದಾರೆ.