ವೈರಲ್ ವಿಡಿಯೋ: ಮನುಷ್ಯನಂತೆ ಎರಡು ಕಾಲುಗಳ ಮೇಲೆ ನಡೆಯುವ ಕೋತಿ
ನವದೆಹಲಿ: ಮಂಗವೊಂದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ತೇಟ್ ಮನುಷ್ಯನಂತೆ ಎರಡೂ ಕಾಲುಗಳಿಂದ ನಡೆದಿದೆ. ನೇಚರ್‌ಲೈಫ್ ಓಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ ಕೋತಿಯು ಮನುಷ್ಯನಂತೆ ರಸ್ತೆಯ ಬದಿಯಲ್ಲಿ ಎರಡೂ ಕಾಲುಗಳಿಂದ ನಡೆಯುತ್ತದೆ. ರೇಲಿಂಗ್ ಸಿಮೆಂಟ್ ಬ್ಲಾಕ್‌ಗಳ ಮೇಲೆ ಎರಡೂ ಕಾಲುಗಳನ್ನು ಒಂದರ ಮೇಲೊಂದು ಇರಿಸಿಕೊಂಡು ಮಗುವಿನಂತೆ ಜಿಗಿಯುತ್ತದೆ. ಈ ವೇಳೆ ಅಲ್ಲಿದ್ದವರು ಇದನ್ನು ಕಂಡು ಆಶ್ಚರ್ಯಗೊಂಡರು.
ಇದೇ ತಿಂಗಳ 3ರಂದು ಪೋಸ್ಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದುವರೆಗೆ ಸುಮಾರು 50,000 ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕ ನೆಟಿಜನ್‌ಗಳು ಎಮೋಜಿಗಳೊಂದಿಗೆ ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.
View this post on Instagram
Monkey Walks On Two Legs Then Jumps In The Funniest Way
TRENDING ARTICLES1 / 4







