ಜಿಮ್ನಾಸ್ಟಿಕ್ ಮಾಡಲು ಕಾಲುಗಳು ಬೇಕಿಲ್ಲ, ವೈರಲ್ Video
ವೈರಲ್ Video: ನಮ್ಮೆಲ್ಲ ಅಂಗಾಂಗಗಳು ಕ್ಷೇಮವಾಗಿದ್ದರೂ ಸಣ್ಣಪುಟ್ಟ ಸಬೂಬು ಹೇಳಿಕೊಂಡು ಯಾವುದೇ ಸಾಧನೆಗೆ ಇಷ್ಟಪಡುವುದಿಲ್ಲ. ಆದರೆ ಇಲ್ಲೊಬ್ಬ ಹತ್ತು ವರ್ಷದ ಬಾಲಕಿ ಕಾಲಿಲ್ಲದೇ ಹೋದರು ಜಿಮ್ನಾಸ್ಟಿಕ್ ಕೌಶಲ್ಯದಿಂದ ಎಲ್ಲರ ಮನ ಗೆದ್ದಿದ್ದಾಳೆ.
ನಮ್ಮೆಲ್ಲ ಅಂಗಾಂಗಗಳು ಕ್ಷೇಮವಾಗಿದ್ದರೂ ಸಣ್ಣಪುಟ್ಟ ಸಬೂಬು ಹೇಳಿಕೊಂಡು ಯಾವುದೇ ಸಾಧನೆಗೆ ಇಷ್ಟಪಡುವುದಿಲ್ಲ. ಆದರೆ ಇಲ್ಲೊಬ್ಬ ಹತ್ತು ವರ್ಷದ ಬಾಲಕಿ ಕಾಲಿಲ್ಲದೇ ಹೋದರು ಜಿಮ್ನಾಸ್ಟಿಕ್ ಕೌಶಲ್ಯದಿಂದ ಎಲ್ಲರ ಮನ ಗೆದ್ದಿದ್ದಾಳೆ.
ವಿವರಗಳಿಗೆ ಹೋಗುವುದಾದರೆ… ಓಹಿಯೋ ಮೂಲದ ಪೈಜ್ ಕ್ಯಾಲೆಂಡೈನ್‌ಗೆ ಕಾಲುಗಳಿಲ್ಲ. ಆದರೂ ಆಕೆ ತಮ್ಮ ಜಿಮ್ನಾಸ್ಟಿಕ್ ಕೌಶಲ್ಯವನ್ನು ಅತ್ಯಂತ ಅದ್ಭುತವಾಗಿ ಪ್ರದರ್ಶಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ತನ್ನ ಜಿಮ್ನಾಸ್ಟಿಕ್ ಅಭ್ಯಾಸದ ಭಾಗವಾಗಿ ತನ್ನ ದೈನಂದಿನ ಅಭ್ಯಾಸದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಸದ್ಯ ವಿಡಿಯೋ ವೈರಲ್ ಆಗಿದೆ . ಇದಲ್ಲದೆ, ನೆಟಿಜನ್‌ಗಳು ಆಕೆಯ ಕೌಶಲ್ಯಕ್ಕೆ ಬೆರಗಾಗಿದ್ದಾರೆ ಮತ್ತು ಆಕೆಯ ಬಗ್ಗೆ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ.
10-year-old Paige Calendine of Ohio is a force!🌟🏅🏆.
(🎥:heidi.calendine)💪😃💪— GoodNewsCorrespondent (@GoodNewsCorres1) October 25, 2021