ಸಿ.ಸಿ. ಕ್ಯಾಮರಾ ಎದುರು ಡ್ಯಾನ್ಸ್ ಮಾಡಿದ ಕಳ್ಳ, ಶಾಕಿಂಗ್ Video

Story Highlights

Thief Dancing in front of CCTV camera in Delhi, watch Video

ವೀಡಿಯೋ ನ್ಯೂಸ್ : ಸಿ.ಸಿ ಕಾಮಾರಗಳು ಇಲ್ಲದೇ ಹೋಗಿದ್ರೆ, ಕೆಲವು ಘಟನೆಗಳು ನಮಗೆ ನೋಡುವುದಕ್ಕೂ ಅಥವಾ ನಂಬುವುದಕ್ಕೂ ಸ್ವಲ್ಪ ಕಷ್ಟವಾಗುತ್ತಿತ್ತು. ಸಿ.ಸಿ.ಟಿವಿ ಇದ್ರೂ ಉಪಯೋಗವಿಲ್ಲದ ಹಲವಾರು ಪ್ರಕರಣಗಳಿವೆ ಬಿಡಿ, ಕಳ್ಳತನ ಆದ ಮೇಲೆ ತಾನೇ ನಾವು ಸಿಸಿ ಟಿವಿ ನೋಡ್ತಿವಿ, ಅದ್ರಿಂದ ಏನ್ ಪ್ರಯೋಜನ ? ಕಳ್ಳ ಹೇಗೆ ಬಂದ ಹೇಗೆ ಕದ್ದ, ನೋಡಬಹುದಷ್ಟೆ.

ಈ ವೀಡಿಯೊ ನೋಡಿ , ದೆಹಲಿಯಲ್ಲಿ ಇತ್ತೀಚಿಗೆ ನಡೆದ, ಖತರ್ನಾಕ್ ದರೋಡೆ ಇದು, ಕಳ್ಳರಿಗೆ ಅಲ್ಲಿ ಸಿಸಿಟಿವಿ ಇರುವುದೂ ಗೊತ್ತು, ಆದ್ರೆ ಯಾರಿಗೂ ಅದರ ಭಯವೇ ಇಲ್ಲ. ಕ್ಯಾಮಾರ ಮುಂದೆಯೇ ಡಾನ್ಸ್ ಮಾಡಿ ಜಾಲಿಯಾಗಿ ಕಳ್ಳತನ ಮಾಡ್ತಾರೆ ಐನಾತಿಗಳು.

ಗುಂಪು ಗುಂಪಾಗಿ ಬಂದ ಡಕಾಯಿತರು, ಅಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಲಗ್ಗೆ ಇಡುತ್ತಾರೆ, ರಸ್ತೆಯ ಎರಡು ಬದಿ ಇವರ ತಂಡದ ಸದಸ್ಯರು ಕಾವಲು ಕಾಯುತ್ತಾರೆ, ಮಿಕ್ಕವರು ಅಂಗಡಿಗಳಿಗೆ ಲಗ್ಗೆ ಇಟ್ಟು, ಇರೋದನ್ನ ದೋಚಿ ಬರ್ತಾರೆ.

ಅಷ್ಟಕ್ಕೇ ಮುಗಿಯುವುದಿಲ್ಲ, ಒಂದಾದರಂತೆ ಇನ್ನೊಂದು ಅಂಗಡಿಗಳಿಗೆ ನುಗ್ಗಿ ದೋಚುತ್ತಾರೆ. ಸುಮಾರು ಘಂಟೆಗಳ ಕಾಲ ಅಲ್ಲಿಯೇ ದೋಚುವ ಖದೀಮರು ಸಿಕ್ಕಿದ್ದನ್ನು ದೋಚಿ ಎಸ್ಕೇಪ್ ಆಗ್ತಾರೆ.

ಕಳ್ಳತನ ಆಗಿರೋದನ್ನು ತಿಳಿದ ಅಂಗಡಿ ಮಾಲೀಕರು, ಸಿಸಿಟಿವಿ ನೋಡಿದ್ರೆ, ಕಳ್ಳರು ಕ್ಯಾಮಾರ ಮುಂದೆಯೇ ಡ್ಯಾನ್ಸ್  ಮಾಡಿರೋದನ್ನು ನೋಡಿ ಇಡಬಾರದ ಕಡೆ ಮೆಣಸಿನಕಾಯಿ ಇಟ್ಟಂತಾಗಿ, ಈ ನನ್ನ ಮಕ್ಳು ಕೈಗೆ ಸಿಗಬೇಕು ಇದೆ ಮಾರಿ ಹಬ್ಬ ಅಂತ ಕೈ ಕೈ ಹಿಸುಕಿಕೊಂಡಿರುವುದಂತೂ ಸತ್ಯ.

https://www.youtube.com/watch?v=Tmwmse9Jks8

Related Stories