Kannada News Videos

Video, ಬಟ್ಟೆ ಅಂಗಡಿಗೆ ಬಂದ ಸುಂದರ ಹುಡುಗಿ ಕದ್ದದ್ದು ಏನು ಗೊತ್ತಾ ?

ವೀಡಿಯೋ ನ್ಯೂಸ್ : ಕೆಲವೊಮ್ಮೆ ಆಸೆ ಕಳ್ಳತನಕ್ಕೆ ದೂಡುತ್ತದೆ ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿ, ಕೆಲ ದಿನಗಳ ಹಿಂದೆ ಪ್ರಖ್ಯಾತ ಉದ್ಯಮಿಯೊಬ್ಬ ಮಧ್ಯದ ಅಂಗಡಿಯಲ್ಲಿ ಮದ್ಯ ಕದ್ದು ಸಿಕ್ಕಿಬಿದ್ದಿದ್ದ, ಈ ರೀತಿಯ ಘಟನೆಗಳು ಇದೆ ಮೊದಲೇನಲ್ಲ. ಕೆಲವರು ಮಜಕ್ಕೆ ಮಾಡಿದ್ರೆ ಕೆಲವರು ಜೋಬಿನ ತುಂಬಾ ಹಣವಿದ್ದರೂ ಸಹ ಇಂತಹ ಕೆಲಸಗಳನ್ನು ಆಸೆಗಾಗಿ ಮಾಡಿನಿಡ್ತಾರೆ.

ಇದ್ರಲ್ಲಿ ಅವರಿಗೋ ಒಂತರ ತ್ರಿಲ್ ಅನ್ನಿಸುತ್ತೆ. ಈ ವೀಡಿಯೊ ನೋಡಿ, ಈ ಯುವತಿ ನೋಡುವುದಕ್ಕೆ ವಿದ್ಯಾವಂತಳಂತೆ ಕಾಣುತ್ತಾಳೆ, ನೋಡುವುದಕ್ಕೂ ಸುಂದರವಾಗಿದ್ದಾಳೆ ಬಿಡಿ, ಆದರೆ ಆಕೆ ಮಾಡಿದ್ದು ಮಾತ್ರ ಮಣ್ಣು ತಿನ್ನೋ ಕೆಲಸ.

Video of beautiful Girl thief caught on CCTV-Kannada Video News

ಬಟ್ಟೆ ಅಂಗಡಿಗೆ ಬಂದ ಆಕೆ, ಅಂಗಡಿ ಮಾಲೀಕನ ಗಮನ ಬೇರೆಡೆ ಇರುವಾಗ ಮೆಲ್ಲನೆ ಪರ್ಸ್ ಎಗರಿಸಿ ಬಿಡ್ತಾಳೆ, ಯಾರೋದೋ ಪಾರ್ಸ್ ಅಲ್ಲ, ಅದು ಮಾರಾಟಕ್ಕೆ ಇಟ್ಟಿದ್ದ ಪಾರ್ಸ್. ಆಕೆಗೆ ಪಾರ್ಸ್ ಕೊಳ್ಳಲು ದುಡ್ಡಿಲ್ಲ ಅಂದ ಮೇಲೆ ಕದ್ದ ಪಾರ್ಸ್ ನಲ್ಲಿ ಏನು ಕಲ್ಲಾ ಇಡ್ತಾಳೆ.

ಸಧ್ಯ ಅಂಗಡಿ ಮಾಲೀಕ ಸಂಜೆ ಈ ದೃಶ್ಯವನ್ನು ತನ್ನ ಅಂಗಡಿಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಗಮನಿಸಿ , ಯು ಟ್ಯೂಬ್ ಗೆ ಅಪ್ಲೋಡ್ ಮಾಡಿ, ಈಕೆ ಗುರುತು ಸಿಕ್ಕರೆ ದಯವಿಟ್ಟು ತಿಳಿಸಿ ಎಂದು ಮನವಿ ಮಾಡಿದ್ದಾನೆ.

ಸಧ್ಯ ವೀಡಿಯೋ ವೈರಲ್ಆಗಿದ್ದು, ಎಲ್ಲೆಡೆ ಹರಿದಾಡ್ತಿದೆ. ಆಕೆಗೆ ವೀಡಿಯೋ ತಲುಪುವ ತನಕ ಶೇರ್ ಮಾಡೋಕೆ ಅಂಗಡಿ ಮಾಲೀಕ ನಿರ್ದರಿಸಿದ್ದಾನೆ. ಅಕಸ್ಮಾತ್ ಆಕೆ ಸಿಕ್ಕಿ ಬಿದ್ದರೆ, ಅಥವಾ ಅವಳ ಸ್ನೇಹಿತರು ಸಂಬಂದಿಕರು ಇದನ್ನ ನೋಡಿದರೆ ಆಕೆಯ ಮರ್ಯಾದೆ ಮೂರೂ ಕಾಸಿಗೆ ಹರಾಜಾಗೋದು ಗ್ಯಾರಂಟಿ..

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories