ವೈರಲ್ ವಿಡಿಯೋ: ಆಟೋದಿಂದ ಜಾರಿ ಬಿದ್ದ ಬಾಲಕ.. ಬಸ್ ಕೆಳಗೆ ಬೀಳುವಷ್ಟರಲ್ಲಿ ರಕ್ಷಿಸಿದ ಟ್ರಾಫಿಕ್ ಪೊಲೀಸ್

ಬಸ್ಸಿನ ಕೆಳಗೆ ಬೀಳಲು ಮುಂದಾದ ಬಾಲಕನನ್ನು ರಕ್ಷಿಸಿದ ಪೊಲೀಸರಿಗೆ ಎಲ್ಲರ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಟ್ರಾಫಿಕ್ ಪೊಲೀಸ್ ಸಕಾಲದಲ್ಲಿ ಸ್ಪಂದಿಸಿದ್ದರಿಂದ ಓರ್ವ ಬಾಲಕನ ಜೀವ ಉಳಿಯಿತು. ಬಸ್ಸಿನ ಕೆಳಗೆ ಬೀಳಲು ಮುಂದಾದ ಬಾಲಕನನ್ನು ರಕ್ಷಿಸಿದ ಪೊಲೀಸರಿಗೆ ಎಲ್ಲರ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ನೆಟಿಜನ್‌ಗಳೆಲ್ಲ ಅವರನ್ನು ಹೀರೋ ಎಂದು ಕೊಂಡಾಡುತ್ತಿದ್ದಾರೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಸರಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಕ್ಷಾ ಯು-ಟರ್ನ್ ತೆಗೆದುಕೊಂಡಾಗ ಒಬ್ಬ ಬಾಲಕ ರಸ್ತೆಯ ಮೇಲೆ ಬಿದ್ದಿದ್ದಾನೆ. ಅದೇ ರಸ್ತೆಯಲ್ಲಿ ಬಸ್ಸು ವೇಗವಾಗಿ ಬರುತ್ತಿತ್ತು… ಕೂಡಲೇ ಎಚ್ಚೆತ್ತ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಪೇದೆ ಸುಂದರ್ ಲಾಲ್ ಕೂಡಲೇ ಸ್ಥಳಕ್ಕೆ ಧಾವಿಸಿ ಬಸ್ ನಿಲ್ಲಿಸುವಂತೆ ಹೇಳಿ ಬಾಲಕನನ್ನು ಮೇಲೆತ್ತಿದ್ದಾರೆ.

ಈ ಮೂಲಕ ಆ ಬಾಲಕನ ಜೀವ ಉಳಿಸಿದ್ದಾರೆ. ನಂತರ ಹುಡುಗನನ್ನು ಅವನ ತಾಯಿಗೆ ಒಪ್ಪಿಸಿದರು. ಈ ವೀಡಿಯೋ ಇಲ್ಲಿಯವರೆಗೆ 1.7 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟಿಜನ್‌ಗಳು ಸುಂದರ್‌ಲಾಲ್ ಅವರ ಸ್ಪಂದನೆಗೆ ಕೊಂಡಾಡುತ್ತಿದ್ದಾರೆ.

ವೈರಲ್ ವಿಡಿಯೋ: ಆಟೋದಿಂದ ಜಾರಿ ಬಿದ್ದ ಬಾಲಕ.. ಬಸ್ ಕೆಳಗೆ ಬೀಳುವಷ್ಟರಲ್ಲಿ ರಕ್ಷಿಸಿದ ಟ್ರಾಫಿಕ್ ಪೊಲೀಸ್ - Kannada News

Viral Video The boy slipped from the auto Saved by the traffic police

Follow us On

FaceBook Google News