Sandalwood NewsBangalore News

ದರ್ಶನ್ ಎಮೊಷನಲ್ ಸಂದೇಶ, ಅಭಿಮಾನಿಗಳಿಗೆ ಕ್ಷಮೆ ಕೇಳಿದ ಚಾಲೆಂಜಿಂಗ್ ಸ್ಟಾರ್!

ನಟ ದರ್ಶನ್, ಜೈಲಿನಿಂದ ಬಿಡುಗಡೆಯಾದ ಬಳಿಕ ಅಭಿಮಾನಿಗಳಿಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹುಟ್ಟುಹಬ್ಬದಂದು ಭೇಟಿಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ದರ್ಶನ್‌ ಮೊದಲ ಪ್ರತಿಕ್ರಿಯೆ!
  • ಹುಟ್ಟುಹಬ್ಬದಂದು ಭೇಟಿಯಾಗಲು ಸಾಧ್ಯವಿಲ್ಲ ಎಂದ ಚಾಲೆಂಜಿಂಗ್ ಸ್ಟಾರ್
  • ಆರೋಗ್ಯ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದೇನೆ ಎಂದ ನಟ!

Actor Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದ ನಂತರ, ಜಾಮೀನಿನ ಮೇಲೆ ಬಿಡುಗಡೆಯಾದರು. ಜೈಲಿನಿಂದ ಬಂದ ಬಳಿಕ ಮಾಧ್ಯಮ ಅಥವಾ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡದೆ ಇದ್ದ ಅವರು, ಈಗ ತಮ್ಮ ಎಲ್ಲ ಅಭಿಮಾನಿಗಳಿಗೆ ಎಮೊಷನಲ್ ವಿಡಿಯೋ ಸಂದೇಶವನ್ನು (Video Message) ರವಾನಿಸಿದ್ದಾರೆ.

ದರ್ಶನ್ ಮಾತನಾಡುತ್ತ, “ನಾನು ಏನೇ ಹೇಳಿದರೂ ಸಾಕಾಗದು. ನೀವು ತೋರಿಸಿರುವ ಪ್ರೀತಿ, ಅಭಿಮಾನ ಮರೆಯಲು ಸಾಧ್ಯವಿಲ್ಲ. ಈ ವರ್ಷ ಜನ್ಮದಿನದಂದು (Darshan Birthday) ಭೇಟಿಯಾಗಲು ಸಾಧ್ಯವಿಲ್ಲ. ದಯವಿಟ್ಟು ಕ್ಷಮಿಸಿ” ಎಂದು ಮನವಿ ಮಾಡಿದರು.

ದರ್ಶನ್ ಎಮೊಷನಲ್ ಸಂದೇಶ, ಅಭಿಮಾನಿಗಳಿಗೆ ಕ್ಷಮೆ ಕೇಳಿದ ಚಾಲೆಂಜಿಂಗ್ ಸ್ಟಾರ್!

ಆರೋಗ್ಯದ ಸಮಸ್ಯೆ

“ನಾನು ಆರೋಗ್ಯ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದೇನೆ. ನನ್ನ ಕಾಲು ನೋವು, ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ನಿಲ್ಲೋಕೆ ಆಗುತ್ತಿಲ್ಲ. ಈ ಬಾರಿ ಹುಟ್ಟುಹಬ್ಬದ ಸಂಭ್ರಮಕ್ಕೆ ದೂರವೇ ಉಳಿಯಬೇಕಾಗಿದೆ” ಎಂದು ದರ್ಶನ್ ಅಭಿಮಾನಿಗಳಿಗೆ ತಿಳಿಸಿದರು.

ಹುಟ್ಟುಹಬ್ಬದಂದು ಪ್ರತೀ ವರ್ಷ ಅಭಿಮಾನಿಗಳೊಂದಿಗೆ ಸಂಭ್ರಮಿಸುವ ದರ್ಶನ್, ಈ ಬಾರಿ ವೈದ್ಯಕೀಯ ಕಾರಣಗಳಿಂದ ಅವರೊಂದಿಗೆ ಭೇಟಿಯಾಗಲು ಸಾಧ್ಯವಿಲ್ಲ ಎಂದು ವಿಷಾದಿಸಿದರು.

ನಟ ದರ್ಶನ್‌

ಅಭಿಮಾನಿಗಳಿಗೆ ಕೃತಜ್ಞತೆ, ಭವಿಷ್ಯದಲ್ಲಿ ಭೇಟಿಯ ಭರವಸೆ!

“ನಾನು ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ನನ್ನ ನಿರ್ಮಾಪಕರಿಗೂ ಅನ್ಯಾಯ ಮಾಡಬಾರದು. ಆದ್ದರಿಂದ ಚಿತ್ರೀಕರಣದ ಮೇಲೆ ಗಮನ ಹರಿಸುತ್ತಿದ್ದೇನೆ. ಆದರೆ, ನಾನು ಶೀಘ್ರದಲ್ಲೇ ನಿಮ್ಮೆಲ್ಲರನ್ನ ಭೇಟಿ ಮಾಡುತ್ತೇನೆ” ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

ಅಭಿಮಾನಿಗಳ ಪ್ರೋತ್ಸಾಹ ಸದಾ ಹೀಗೆಯೇ ಇರಲಿ ಎಂದು ಕೋರಿದ ದರ್ಶನ್, “ನಿಮ್ಮ ಪ್ರೀತಿ ನನಗೆ ದೊಡ್ಡ ಬಲ. ದಯವಿಟ್ಟು ಕ್ಷಮಿಸಿ, ಇದೊಂದು ಸಲ ಹೊಟ್ಟೆಗೆ ಹಾಕಿಕೊಳ್ಳಿ” ಎಂದು ಮನವಿ ಮಾಡಿದರು.

Actor Darshan Emotional Video, Apologizes to Fans

English Summary

Our Whatsapp Channel is Live Now 👇

Whatsapp Channel

Related Stories