ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಬಾಹುಬಲಿ ನಟ ಪ್ರಭಾಸ್ ಆಧಾರ್ ಕಾರ್ಡ್, ನಿಜವಾದ ಹೆಸರು ವಯಸ್ಸು ಎಷ್ಟು ಗೊತ್ತಾ?
Actor Prabhas Aadhaar Card : ನಟ ಪ್ರಭಾಸ್ ಅವರ ಫ್ಯಾನ್ ಪೇಜ್ ಒಂದರಲ್ಲಿ ಆಧಾರ್ ಕಾರ್ಡ್ ಫೋಟೋ ಒಂದು ವೈರಲ್ ಆಗಿದ್ದು, ಅದರಲ್ಲಿ ಪ್ರಭಾಸ್ ಅವರ ಹೆಸರು 'ಉಪ್ಪಾಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್' ಎಂದಿದ್ದು, ಇದನ್ನು ಕಂಡಂತಹ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
Actor Prabhas Aadhaar Card : ಬಾಹುಬಲಿ ಸಿನಿಮಾದ ಮೂಲಕ ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಹೊರಹೊಮ್ಮಿರುವಂತಹ ಪ್ರಭಾಸ್ ಅವರೊಟ್ಟಿಗೆ ಕೆಲಸ ಮಾಡಲು ಕನ್ನಡ ಹಿಂದಿ ತೆಲುಗು ಹಾಗೂ ತಮಿಳು ಸಿನಿಮಾ ನಿರ್ದೇಶಕ ನಿರ್ಮಾಪಕರು ಕ್ಯೂ ನಿಂತಿದ್ದಾರೆ.
ಸದ್ಯ ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಅವರೊಟ್ಟಿಗೆ ಮತ್ತೊಂದು ಪ್ಯಾನ್ ಇಂಡಿಯಾ ಸಲಾರ್ ಚಿತ್ರದ ಕೆಲಸಗಳಲ್ಲಿ ಬಿಜಿಯಾಗಿರುವಂತಹ ಪ್ರಭಾಸ್ ಅವರ ಕುರಿತಾದ ಒಂದಲ್ಲ ಒಂದು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಬಹು ದೊಡ್ಡ ಮಟ್ಟದ ಸುದ್ದಿಗೆ ಒಳಗಾಗುತ್ತಿರುತ್ತದೆ.
ಅದರಂತೆ ಪ್ರಭಾಸ್ ಅವರ ಆಧಾರ್ ಕಾರ್ಡ್ ಫೋಟೋ (Aadhaar Photo) ಒಂದು ನೆಟ್ಟಿಗರ ಗಮನ ಸೆಳೆದಿದ್ದು, ಇವರ ನಿಜವಾದ ಹೆಸರನ್ನು ಕಂಡಂತಹ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಹಾಗಾದ್ರೆ ಪ್ರಭಾಸ್ ಅವರ ನಿಜವಾದ ಹೆಸರೇನು? ಆಧಾರ್ ಕಾರ್ಡ್ನಲ್ಲಿ ಹೇಗೆಲ್ಲಾ ಕಾಣಿಸಿಕೊಂಡಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ 2015ರಲ್ಲಿ ತೆರೆಕಂಡಂತಹ ಎಸ್ ಎಸ್ ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡು ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದಂತಹ ಪ್ರಭಾಸ್ ಅವರು ಹಲವು ವರ್ಷಗಳ ಕಾಲ ಬಾಹುಬಲಿ ಸೀರೀಸ್ಗಾಗಿಯೇ ತಮ್ಮ ಸಿನಿ ಬದುಕನ್ನು ಮುಡಿಪಿಟ್ಟು ಅದ್ಭುತ ಯಶಸ್ಸನ್ನು ಕಂಡರು.
ಅನಂತರ ಆದಿಪುರುಷ ಚಿತ್ರದಲ್ಲಿ ನಟಿಸಿ ಇನ್ನಷ್ಟು ಅಭಿಮಾನಿಗಳನ್ನು ಗಳಿಸಿದಂತಹ ಪ್ರಭಾಸ್ ಅವರು ಸದ್ಯ ಪ್ರಶಾಂತ್ ನೀಲ್ ಅವರೊಟ್ಟಿಗೆ ಸಲಾರ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.
ಈ ನಡುವೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವಂತಹ ಪ್ರಭಾಸ್ ತಮ್ಮ ಮುಂದಿನ ಚಿತ್ರಗಳ ಅಪ್ಡೇಟ್ ಗಳನ್ನು ನೀಡುತ್ತಾ ತಮ್ಮ ಕ್ಯೂಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಅವರಿಗೆ ಎಷ್ಟುದ್ದದ ಹೆಸರಿದೆಯೇ? ಎಂದು ನೆಟ್ಟಿಗರೆಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಇದಲ್ಲದೆ ಪ್ರಭಾಸ್ ಅವರ ನಿಜವಾದ ಜನ್ಮ ದಿನಾಂಕ 23/10/1979 ಎಂಬುದನ್ನು ತಿಳಿದಂತಹ ಇನ್ನೂ ಹಲವು ಮಂದಿ ಪ್ರಭಾಸ್ ಅವರ ವಯಸ್ಸು ಎಷ್ಟಿರಬಹುದು? ಎಂಬುದನ್ನು ಲೆಕ್ಕಾಚಾರ ಹಾಕುತ್ತಿದ್ದಾರೆ.
ಆದಿಪುರುಷ್ ಸಿನಿಮಾ ನಿರೀಕ್ಷಿಸದ ಮಟ್ಟದಲ್ಲಿ ಯಶಸ್ಸನ್ನು ಕಾಣದ ಕಾರಣ ಸಲಾರ್ ಸಿನಿಮಾದ ಮೂಲಕ ಒಂದೊಳ್ಳೆ ಬ್ರೇಕ್ಗಾಗಿ ಎದುರು ನೋಡುತ್ತಿರುವಂತಹ ಪ್ರಭಾಸ್ ಸಕಲ ಪರಿಶ್ರಮದಿಂದ ಚಿತ್ರ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದು, ಕೆಜಿಎಫ್ ಹಾಗೂ ಬಾಹುಬಲಿ ಮಟ್ಟದಲ್ಲಿ ಸಲಾರ್ ಕೂಡ ಯಶಸ್ಸು ಕಾಣಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ.
Actor Prabhas Aadhaar Card Photo Copy Goes Viral on Social Media
Follow us On
Google News |