Sandalwood News

ರಶ್ಮಿಕಾಗೆ ಗೇಟ್ ಪಾಸ್, ಶ್ರೀಲಿಲಾಗೆ ಚಾನ್ಸ್! ರಶ್ಮಿಕಾ ಮಂದಣ್ಣ ತೆಗುದು ಹಾಕಿ ಬದಲಿಗೆ ನಟಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆ

ಸ್ನೇಹಿತರೆ, ಸದ್ಯ ತೆಲುಗು, ತಮಿಳು ಸೇರಿದಂತೆ ಇತರೆ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿಯು ನಮ್ಮ ಕನ್ನಡತಿಯರದ್ದೆ (Kannada Actress) ಹವಾ ಸೃಷ್ಟಿಯಾಗಿದೆ. ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಮೂಲಕ ನಟನೆ ಕರಿಯರ್ ಶುರು ಮಾಡಿದಂತಹ ರಶ್ಮಿಕಾ ಮಂದಣ್ಣ (Actress Rashmika Mandanna) ಇಂದು ಬಾಲಿವುಡ್ ಅಂಗಳದಲ್ಲಿ ಬಹು ದೊಡ್ಡ ಮಟ್ಟದ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಅದರಂತೆ ಕನ್ನಡ ಚಿತ್ರದ ಮೂಲಕ ಜನಪ್ರಿಯತೆ ಪಡೆದ್ದಂತಹ ಶ್ರೀಲೀಲಾ (actress Sreeleela) ಅವರು ಇಂದು ತಮಿಳು, ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ವೆಂಕಿ ಕುದುಮುಲಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾಗೆ ನಿತಿನ್ ಅವರ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದರು, ಚಿತ್ರದ ಒಂದಿಷ್ಟು ಸೀನ್ಗಳ ಚಿತ್ರೀಕರಣ ನಡೆದ ನಂತರ ರಶ್ಮಿಕಾ ಮಂದಣ್ಣ ಅವರನ್ನು ಸಿನಿಮಾ ತಂಡ ಕೈಬಿಟ್ಟಿದ್ದು, ಶ್ರೀ ಲೀಲಾ ಅವರಿಗೆ ಚಾನ್ಸ್ ನೀಡಿದ್ದಾರೆ.

Actress Rashmika Mandanna and actress Sreeleela

ಪತ್ನಿಗೆ ಡೈವರ್ಸ್ ಕೊಟ್ಟ ಕಿರಿಕ್ ಕೀರ್ತಿ, ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂಬ ಪೋಸ್ಟ್ ವೈರಲ್

ಇತರೆ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿಯೂ ನಮ್ಮ ಕನ್ನಡತಿಯರ (Kannada Actress) ಜಡೆ ಜಗಳ ಶುರುವಾಗ್ತಿದೆ ಎಂದರೆ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ರಶ್ಮಿಕಾ ಮಂದಣ್ಣ ಇಂದು ಕಾಲಿವುಡ್ ಟಾಲಿವುಡ್ ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರ ರಂಗಕ್ಕೂ ಬೇಕಿರುವಂತಹ ಸ್ಟಾರ್ ನಟಿ. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಹೊಸ ಹೊಸ ಸಿನಿಮಾಗಳು ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿ ಬರುತ್ತಿವೆ.

ಹೀಗೆ ದಕ್ಷಿಣ ಭಾರತದ ಚಿತ್ರಗಳ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿಯೂ ಸಕ್ಕತ್ ಬ್ಯುಸಿಯಾಗಿರುವಂತಹ ರಶ್ಮಿಕಾ ಮಂದಣ್ಣ ತೆಲುಗಿನ ಸ್ಟಾರ್ ನಿರ್ದೇಶಕ ವೆಂಕಿ ಕುದುಮೂಲ ಜೊತೆಗೆ ಕೆಲಸ ಮಾಡುತ್ತಿದ್ದರು.‌

ಅಲ್ಲದೆ ಈ ಕುರಿತದ ಸಾಕಷ್ಟು ವರದಿಗಳು ಪ್ರಕಟವಾಗಿತ್ತು, ಹೀಗೆ ಸಿನಿಮಾದ ಕೆಲ ಹಂತದ ಚಿತ್ರೀಕರಣಗಳನ್ನು ಮುಗಿಸಿದ ನಂತರ ರಶ್ಮಿಕಾ ಮಂದಣ್ಣ ಅವರನ್ನು ಸಿನಿಮಾದಿಂದ ತೆಗೆದು ಹಾಕಲಾಗಿದೆ ಎಂಬ ಮಾಹಿತಿ ಸದ್ಯ ಬಹು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Actress Rashmika Mandanna was dropped and actress Sreeleela was chosen for New Movieಹೌದು ಗೆಳೆಯರೇ ರಶ್ಮಿಕಾ ಮಂದಣ್ಣ ಬದಲಿಗೆ ನಟಿ ಶ್ರೀಲೀಲಾ ಅವರನ್ನು ನಾಯಕಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದ್ದು, ಚಿತ್ರದ ಶೀರ್ಷಿಕೆಯನ್ನು ಇನ್ನು ಬಹಿರಂಗಪಡಿಸಿಲ್ಲ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಒಂದರ ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಸದ್ಯ ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

ಕನ್ನಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಲಿಸ್ಟ್! ಈ ಬಾರಿ ದೊಡ್ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ?

ರನ್ವೀರ್ ಕಪೂರ್ ಅವರ ಅನಿಮಲ್ ಸಿನಿಮಾದಲ್ಲಿಯೂ ಭಾಗಿಯಾಗಬೇಕಿದೆ, ಇದೆಲ್ಲದರ ನಡುವೆ ವಿಜಯ್ ದೇವರಕೊಂಡ ಅವರೊಂದಿಗೆ ಗೀತ ಗೋವಿಂದಂ ಪಾರ್ಟ್ ೨ ಚಿತ್ರದಲ್ಲಿಯೂ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ.

ಹೀಗೆ ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿಯು ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರ ಡೇಟ್ಸ್ ಸಮಸ್ಯೆಯಿಂದ ನಿತಿನ್ ಅವರೊಂದಿಗೆ ನಟಿಸಬೇಕಿದ್ದಂತಹ ಸಿನಿಮಾದಿಂದ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಹೀಗಾಗಿ ನಿರ್ದೇಶಕ ಕುದುಮುಲ ರಶ್ಮಿಕಾ ಅವರ ಬದಲಿಗೆ ಶ್ರೀ ಲೀಲಾ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿರುವ ಮಾಹಿತಿಯನ್ನು ಹೊರಹಾಕಿದರು. ಮೊನ್ನೆ ಅಷ್ಟೇ ನಟಿ ಶ್ರೀಲೀಲಾ ಕೂಡ ಸಿನಿಮಾದ ಸೆಟ್ಟಿಗೆ ತೆರಳಿದ್ದು, ಹೈದರಾಬಾದ್ನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ.

Actress Rashmika Mandanna was dropped and actress Sreeleela was chosen for New Movie

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories