ಪತ್ನಿಗೆ ಡೈವರ್ಸ್ ಕೊಟ್ಟ ಕಿರಿಕ್ ಕೀರ್ತಿ, ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂಬ ಪೋಸ್ಟ್ ವೈರಲ್

Kirik Keerthi : ಕಿರಿಕ್ ಕೀರ್ತಿಯವರು ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂಬ ಬರಹಗಳನ್ನು ಬರೆದು ತಮ್ಮ ಪತ್ನಿಯಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಮಾಹಿತಿಯನ್ನು ಹೊರಹಾಕಿದ್ದಾರೆ.

Kirik Keerthi : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Kannada Bigg Boss Show) ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿದ್ದಂತಹ ಕಿರಿಕ್ ಕೀರ್ತಿ ನ್ಯೂಸ್ ಚಾನೆಲ್ಗಳ ಆಂಕರ್ ಆಗಿ ಕನ್ನಡ ಪರ ಹೋರಾಟಗಾರರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇದ್ದಂತಹ ಕೀರ್ತಿಯವರು ಕಳೆದ ಕೆಲವು ವರ್ಷಗಳ ಹಿಂದಷ್ಟೇ ಅರ್ಪಿತ (Arpitha) ಎಂಬುವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಈ ದಂಪತಿಗಳಿಗೆ ಆವಿಷ್ಕಾರ್ ಎಂಬ ಮುದ್ದು ಮಗನಿದ್ದು, ಬಹಳ ಲವಲವಿಕೆಯಿಂದ ಓಡಾಡಿಕೊಂಡಿದ್ದ ಈ ಜೋಡಿಗಳ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ ಕಿರಿಕ್ ಕೀರ್ತಿ ಹಾಗೂ ಅರ್ಪಿತ ಕೆಲ ತಿಂಗಳುಗಳಿಂದ ಜಗಳ ಮಾಡಿಕೊಂಡು ದೂರಾಗಿದ್ದರು. ಅರ್ಪಿತ ತಮ್ಮ ಮಗನೊಂದಿಗೆ ಕಿರಿಕ್ ಕೀರ್ತಿ ಅವರ ಮನೆ ಬಿಟ್ಟು ತವರು ಮನೆ ಸೇರಿದ್ದರು.

ಪತ್ನಿಗೆ ಡೈವರ್ಸ್ ಕೊಟ್ಟ ಕಿರಿಕ್ ಕೀರ್ತಿ, ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂಬ ಪೋಸ್ಟ್ ವೈರಲ್ - Kannada News

ಅಗಲಿದ ಮುದ್ದಿನ ಹೆಂಡತಿ ನೆನೆದು ಭಾವನಾತ್ಮಕ ಪತ್ರ ಬರೆದ ವಿಜಯ್ ರಾಘವೇಂದ್ರ! ಭಾವುಕರಾದ ಫ್ಯಾನ್ಸ್

ಹೀಗೆ ದಂಪತಿಗಳ ಮಧ್ಯೆ ಏನೋ ಬಿರುಕು ಮೂಡಿರಬಹುದು ಕೆಲವು ದಿನಗಳಲ್ಲಿ ಮತ್ತೆ ಒಂದಾಗುತ್ತಾರೆ ಎಂದು ನಿರೀಕ್ಷೆಯಲ್ಲಿದ್ದಂತಹ ಕುಟುಂಬಸ್ಥರು ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಆಘಾತಕಾರಿಯಾದ ಸುದ್ದಿ ಒಂದನ್ನು ಕೀರ್ತಿ ತಿಳಿಸಿದ್ದಾರೆ.

ಹೌದು ಗೆಳೆಯರೆ ನೆನ್ನೆ ಅಷ್ಟೆ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಕಿರಿಕ್ ಕೀರ್ತಿಯವರು ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂಬ ಬರಹಗಳನ್ನು ಬರೆದು ತಮ್ಮ ಪತ್ನಿಯಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಮಾಹಿತಿಯನ್ನು ಹೊರಹಾಕಿದ್ದಾರೆ.

Kirik Keerthi Post Goes Viralಹೌದು ಗೆಳೆಯರೇ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಬಹಳನೇ ಲವಲವಿಕೆಯಿಂದ ಕಾಣಿಸಿಕೊಂಡಿದಂತಹ ಈ ಜೋಡಿಗಳು ಸದಾ ಕಾಲ ಹೀಗೆ ಇರಲಿ ಎಂದು ಅದೆಷ್ಟೋ ಕನ್ನಡ ಅಭಿಮಾನಿಗಳು ಹಾರೈಸುತ್ತಿದ್ದರು. ಆದರೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಮೂಡಿದಂತಹ ಕೆಲ ಮನಸ್ತಾಪ ಹಾಗೂ ಅಪನಂಬಿಕೆಯಿಂದ ಕೀರ್ತಿ ಮತ್ತು ಅರ್ಪಿತ ಜಗಳವಾಡಿಕೊಂಡು ಅಂತರ ಕಾಯ್ದುಕೊಂಡಿದ್ದರು.

ಶಂಕರ್ ನಾಗ್ ಹಾಗೂ ಮಾಲಾಶ್ರೀ ಮಾಡಬೇಕಿದ್ದ ಸಿನಿಮಾ ಅರ್ಧಕ್ಕೆ ನಿಂತು ಹೋಗಿದ್ದು ಏಕೆ? ಇಬ್ಬರಲ್ಲಿ ಯಾರು ರಿಜೆಕ್ಟ್ ಮಾಡಿದ್ದು ಗೊತ್ತಾ?

ಪ್ರತಿಯೊಬ್ಬರಿಗೂ ಮತ್ತೆ ಈ ಜೋಡಿಗಳು ಮಗನಿಗೋಸ್ಕರವಾದರೂ ಒಂದಾಗುತ್ತಾರೆ, ಎಂಬ ನಂಬಿಕೆ ಇತ್ತು. ಆದರೆ ನೆನ್ನೆ ಕಿರಿಕ್ ಕೀರ್ತಿ ಅವರು “ಕಾನೂನು ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತ ಜೊತೆಗಿನ ಪತಿ ಪತ್ನಿ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ ಹಾಗೂ ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ ಒಂದೊಳ್ಳೆ ಬದುಕು ಅವಳಿಗೂ ಸಿಗಲಿ.

ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ.‌ ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರೆಯಲಿ ಇಂತಿ ನಿಮ್ಮ ಕಿರಿಕ್ ಕೀರ್ತಿ” ಎಂಬ ಪತ್ರವನ್ನು ಹಂಚಿಕೊಂಡಿದ್ದಾರೆ.

ಈ ಒಂದು ಪೋಸ್ಟ್ ಸದ್ಯ ಎಲ್ಲೆಡೆ ಭಾರಿ ವೈರಲ್ (Goes Viral) ಆಗುತ್ತಿದ್ದು, ಹಲವು ವರ್ಷಗಳ ಕಾಲ ಪ್ರೀತಿಸಿ. ಸಾಯುವವರೆಗೂ ಜೊತೆಗಿರಬೇಕೆಂದು ನಿರ್ಧಾರ ಮಾಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಹಕ್ಕಿಗಳು ಬೇರಾಗಿರುವುದು ಕನ್ನಡ ಚಿತ್ರರಂಗಕ್ಕೆ ಬೇಸರವನ್ನು ತರಿಸಿದೆ.

Bigg Boss Kannada fame Kirik Keerthi announces divorce, and Post Goes Viral

Follow us On

FaceBook Google News

Bigg Boss Kannada fame Kirik Keerthi announces divorce, and Post Goes Viral