ಅಗಲಿದ ಮುದ್ದಿನ ಹೆಂಡತಿ ನೆನೆದು ಭಾವನಾತ್ಮಕ ಪತ್ರ ಬರೆದ ವಿಜಯ್ ರಾಘವೇಂದ್ರ! ಭಾವುಕರಾದ ಫ್ಯಾನ್ಸ್

ಹೆಂಡತಿಗೆ ಭಾವನಾತ್ಮಕ ಪತ್ರವನ್ನು ವಿಜಯ್ ರಾಘವೇಂದ್ರ ಬರೆದಿದ್ದು, ಆ ಕುರಿತಾದ ಕೆಲ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Bengaluru, Karnataka, India
Edited By: Satish Raj Goravigere

ಸ್ನೇಹಿತರೆ, ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ (Actor Vijay Raghavendra) ಅವರ ಧರ್ಮಪತ್ನಿ ಸ್ಪಂದನ ವಿಜಯ್ ರಾಘವೇಂದ್ರ (Spandana) ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಥೈಲ್ಯಾಂಡ್ ಹೋಗಿದ್ದಾಗ ಅಲ್ಲಿನ ಬ್ಯಾಂಕಾಕ್ನಲ್ಲಿ ಶಾಪಿಂಗ್ ಮುಗಿಸಿ ಬಂದು ಸುಸ್ತಾಗಿ ಮಲಗಿದವರು ಮತ್ತೆ ಮೇಲೇಳಲೆ ಇಲ್ಲ. ಹೌದು ಗೆಳೆಯರೇ ಮಲಗಿದ್ದಂತಹ ಸಂದರ್ಭದಲ್ಲಿ ಸ್ಪಂದನವರಿಗೆ ಲಘು ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Actor Puneeth Rajkumar) ಅವರ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಂತಹ ದೊಡ್ಮನೆಗೆ ಮತ್ತೊಂದು ದುಃಖದ ಛಾಯೆ ಮೂಡಿದ್ದು, ದೊಡ್ಮನೆಯ ಪ್ರತಿಯೊಬ್ಬರು ಸಹ ಕಣ್ಣೀರಿನ ಕೋಡಿಯಲ್ಲಿ ದಿನ ಕಳೆಯುತ್ತಿದ್ದಾರೆ.

Kannada Actor Vijay Raghavendra wrote an emotional words remembering his wife Spandana

ಹೀಗಿರುವಾಗ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ದೊರಕುವವರೆಗೂ ಕಾದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ ರಾಘವೇಂದ್ರ ಅವರ ಪರಿಸ್ಥಿತಿ ಹಾಗೂ ತನ್ನ ತಾಯಿಯೇ ಸರ್ವಸ್ವವೆಂದು ತನಗಿಂತ ಹೆಚ್ಚಾಗಿ ಅಮ್ಮನನ್ನು ಪ್ರೀತಿಸುತ್ತಿದ್ದ ಶೌರ್ಯವರ ಮನಸ್ಥಿತಿ ಹೇಗಿರಬಹುದು ಎಂದು ನೀವೇ ಯೋಚಿಸಿ.

ಕನ್ನಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಲಿಸ್ಟ್! ಈ ಬಾರಿ ದೊಡ್ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ?

ಹೌದು ಸ್ನೇಹಿತರೆ, ಮಲ್ಲೇಶ್ವರಂ ನ ಕಾಫಿ ಡೇ (Café Coffee Day) ಒಂದರಲ್ಲಿ ಮೊದಲ ಬಾರಿಗೆ ವಿಜಯ್ ರಾಘವೇಂದ್ರ ಸ್ಪಂದನವರನ್ನು ನೋಡುತ್ತಾರೆ. ಮೊದಲ ನೋಟದಲ್ಲಿ ಪ್ರೇಮಾಂಕರವಾಗಿ ಅನಂತರ ಮನೆಯ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮತ್ತೆ ಸ್ಪಂದನ ಅವರನ್ನು ನೋಡಿ ಮದುವೆಯಾದರೆ ಈಕೆಯನ್ನೇ ಎಂದು ನಿರ್ಧಾರ ಮಾಡಿದ್ದರು, ತಮ್ಮ ಪ್ರೇಮ ನಿವೇದನೆಯನ್ನು ಮಾಡಿದರು

ಸ್ಪಂದನರವರಿಗೂ ಕೂಡ ವಿಜಯ್ ರಾಘವೇಂದ್ರ ಅವರ ಮೇಲೆ ಮನಸ್ಸಾದ ಕಾರಣ ಇಬ್ಬರೂ ಹಲವು ತಿಂಗಳುಗಳ ಕಾಲ ಪ್ರೀತಿಸಿ 26 ಆಗಸ್ಟ್ 2007 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ಗೆಳೆಯರೇ ಜೀವನ್ಪರಿಯಂತ ಜೊತೆಗಿರಬೇಕೆಂದು ನಿರ್ಧಾರ ಮಾಡಿ ತಮ್ಮ ಬದುಕಿನ ಪಯಣವನ್ನು ಶುರುಮಾಡಿದ್ದ ವಿಜಯ್ ರಾಘವೇಂದ್ರ ಅವರನ್ನು ಒಬ್ಬಂಟಿಯನ್ನಾಗಿಸಿ ಸ್ಪಂದನ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

 

View this post on Instagram

 

A post shared by Vijay Raghavendra (@raagu.vijay)

ಈ ಒಂದು ನೋವು ವಿಜಯ್ ರಾಘವೇಂದ್ರ ಅವರನ್ನು ಅಘಾದವಾಗಿ ಕಾಡುತ್ತಿದ್ದು ಇದೆಲ್ಲದರ ನಡುವೆಯೂ ನಡೆಯಬೇಕಿದ್ದಂತಹ ಅಂತಿಮ ಕಾರ್ಯಗಳಲ್ಲಿ ತೊಡಗಿಕೊಂಡು ಹೆಂಡತಿಗೆ ವಿಜಯ್ ಪ್ರೀತಿಯ ನಮನ ಸಲ್ಲಿಸುತ್ತಿದ್ದಾರೆ. ಪ್ರತಿಬಾರಿಯೂ ಹೆಂಡತಿಯನ್ನು ನೆನೆದು ವಿಜಯ್ ರಾಘವೇಂದ್ರ ಅಳುತ್ತಿರುವುದನ್ನು ಅಭಿಮಾನಿಗಳಿಂದ ನೋಡಲು ಸಾಧ್ಯವಾಗುತ್ತಿಲ್ಲ.

ಹೀಗಿರುವಾಗ ಹೆಂಡತಿಗೆ ಭಾವನಾತ್ಮಕ ಪತ್ರವನ್ನು ವಿಜಯ್ ರಾಘವೇಂದ್ರ ಬರೆದಿದ್ದು, ಆ ಕುರಿತಾದ ಕೆಲ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಬಾರಿ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ವಿಜಯ್ ರಾಘವೇಂದ್ರ ಅವರು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಭಾವನಾತ್ಮಕ ಪತ್ರ (Emotional Letter) ಒಂದನ್ನು ಬರೆದು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಹಾಗೂ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ (Facebook Post) ಮಾಡಿದ್ದಾರೆ.

Kannada Actor Vijay Raghavendra with wife Spandana
Image Source: News18 Kannada

ಶಂಕರ್ ನಾಗ್ ಹಾಗೂ ಮಾಲಾಶ್ರೀ ಮಾಡಬೇಕಿದ್ದ ಸಿನಿಮಾ ಅರ್ಧಕ್ಕೆ ನಿಂತು ಹೋಗಿದ್ದು ಏಕೆ? ಇಬ್ಬರಲ್ಲಿ ಯಾರು ರಿಜೆಕ್ಟ್ ಮಾಡಿದ್ದು ಗೊತ್ತಾ?

ಈ ವಿಡಿಯೋದಲ್ಲಿ ನಟ ವಿಜಯ್ ರಾಘವೇಂದ್ರ ಅವರು “ಸ್ಪಂದನ ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ. ನಮಗೆಂದೆ ಮಿಡಿದೆ ನಿನ್ನ ಹೃದಯವ, ನಿಲ್ಲದು ನಿನ್ನೊಂದಿಗಿನಾ ಕಲರವ. ನಾನೆಂದು ನಿನ್ನವ.. ಕೇವಲ ನಿನ್ನವ..” ಎಂಬ ಬರಹಗಳನ್ನು ತಮ್ಮ ಧ್ವನಿಯಲ್ಲಿ ಹೇಳಿ ಸ್ಪಂದನ ಅವರ ಮುದ್ದಾದ ಫೋಟೋ ಒಂದನ್ನು ವಿಡಿಯೋದಲ್ಲಿ ಹಾಕಿ ಬ್ರೀತಿಂಗ್ ಯು ಚಿನ್ನ (Breathing you Chinna) ಎಂಬ ಕ್ಯಾಪ್ಶನ್ ಬರೆದು ಭಾವನಾತ್ಮಕವಾದ ಪೋಸ್ಟ್ ಒಂದನ್ನು ಮಾಡಿದ್ದಾರೆ.

ಇದು ಅಭಿಮಾನಿಗಳ ಮನಕಲುಕುವಂತಿದ್ದು, ಪ್ರತಿಯೊಬ್ಬರು ಕಮೆಂಟ್ಗಳ ಮೂಲಕ ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ನೀಡುವ ಪ್ರಯತ್ನವನ್ನು ಮಾಡ ತೊಡಗಿದ್ದಾರೆ.

Kannada Actor Vijay Raghavendra wrote an emotional words remembering his wife Spandana