Sandalwood News

ಶಂಕರ್ ನಾಗ್ ಹಾಗೂ ಮಾಲಾಶ್ರೀ ಮಾಡಬೇಕಿದ್ದ ಸಿನಿಮಾ ಅರ್ಧಕ್ಕೆ ನಿಂತು ಹೋಗಿದ್ದು ಏಕೆ? ಇಬ್ಬರಲ್ಲಿ ಯಾರು ರಿಜೆಕ್ಟ್ ಮಾಡಿದ್ದು ಗೊತ್ತಾ?

ಸ್ನೇಹಿತರೆ, ಅದೊಂದು ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ತಮ್ಮದೇ ಆದ ಪರ್ವವನ್ನು ಸೃಷ್ಟಿಸಿಕೊಂಡಂತಹ ಕನಸಿನ ರಾಣಿ ಮಾಲಾಶ್ರೀ (Actress Malashree) ಅವರು ವರ್ಷ ಒಂದರಲ್ಲಿ 16ಕ್ಕೂ ಹೆಚ್ಚು ಚಿತ್ರಗಳಲ್ಲಿ(Kannada Cinema) ಅಭಿನಯಿಸುತ್ತ ಪೀಕ್ನಲ್ಲಿ ಇದ್ದಂತಹ ನಟಿ.

ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ ಅಲ್ಪಾವಧಿಯಲ್ಲಿಯೇ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡಿ ಕನ್ನಡಿಗರ ಮನೆಮಗಳಾಗಿ ಹೋದರು.

Why Kannada Actor Shankar Nag and Malashree Not Did movie together

ಹೀಗೆ ಅಂಬರೀಶ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಶಶಿಕುಮಾರ್, ಸುನಿಲ್ರಂತಹ ನಟರೊಂದಿಗೆ ಅಭಿನಯಿಸಿ ಉತ್ತುಂಗದ ಶಿಖರದಲ್ಲಿದಂತಹ ಮಾಲಾಶ್ರೀ ಅವರಿಗೆ ಶಂಕ್ರಣ್ಣನೊಂದಿಗೆ (Actor Shankar Nag) ಅಭಿನಯಿಸುವಂತಹ ಅವಕಾಶ ದೊರಕಿತ್ತಂತೆ.

ಅಪ್ಪು ತಮ್ಮ ಹೆಂಡತಿ ಮಕ್ಕಳಿಗಾಗಿ ಎಷ್ಟು ಕೋಟಿ ಆಸ್ತಿ ಬಿಟ್ಟು ಹೋಗಿದ್ದಾರೆ ಗೊತ್ತಾ? ಪಾಪ ಅವರೇ ಇಲ್ಲದ ಮೇಲೆ ಆಸ್ತಿ ಯಾಕೆ ಅಂತೀರಾ!

ಹೌದು ಗೆಳೆಯರೇ ಹಲವರು ಸಂದರ್ಶನಗಳಲ್ಲಿ ಸ್ವತಹ ಮಾಲಾಶ್ರೀ ಅವರೇ ನಾನು ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದೇನೆ ಆದರೆ ಇಂದಿಗೂ ನನಗೆ ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅವರೊಂದಿಗೆ ಅಭಿನಯಿಸಲಾಗಲಿಲ್ಲವಲ್ಲ ಎಂಬ ಕೊರಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಹೀಗೆ ಮೂಲವೊಂದರ ಮಾಹಿತಿಯ ಪ್ರಕಾರ ಮಾಲಾಶ್ರೀ ಅವರಿಗೆ ಶಂಕರ್ ನಾಗ್ ಅವರೊಂದಿಗೆ ಅಭಿನಯಿಸುವಂತಹ ಅವಕಾಶ ದೊರಕಿತ್ತಂತೆ. ಹೌದು ಗೆಳೆಯರೇ ರಾಘವೇಂದ್ರ ರಾಜ್ ಕುಮಾರ್ ಅವರೊಡನೆ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ಅಭಿನಯಿಸಿ ಉತ್ತುಂಗದ ಶಿಖರವನ್ನು ಏರಿದ್ದಂತಹ ಮಾಲಾಶ್ರೀ ಅವರಿಗೆ ಎಲ್ಲಾ ಸಿನಿಮಾದ ನಿರ್ದೇಶಕ ನಿರ್ಮಾಪಕರು ಚಿತ್ರಕಥೆ ಹೇಳಲು ಮುಂದಾಗಿರುತ್ತಾರೆ.

Actor Shankar Nagದೊಡ್ಡ ದೊಡ್ಡ ಸ್ಟಾರ್ ನಟರು ಇರುವಂತಹ ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶ ಕೂಡ ಒದಗಿ ಬರುತ್ತದೆ. ಆದರೆ ಮಾಲಾಶ್ರೀ ಒಪ್ಪಿದ್ದು ಕರಾಟೆ ಕಿಂಗ್ ಶಂಕರ್ ನಾಗ್ ಅವರ ಚಿತ್ರವನ್ನು. ಅವರ ಅದ್ಭುತ ನಿರ್ದೇಶನದ ಶೈಲಿಗೆ ಮನಸ್ಸೋತು ಹೋಗಿದ್ದಂತಹ ಮಾಲಾಶ್ರೀ ಅವರು ಅವರೊಂದಿಗೆ ಕೆಲಸ ಮಾಡಬೇಕೆಂಬ ಹಿಂಗಿತವನ್ನು ವ್ಯಕ್ತಪಡಿಸುತ್ತಾರೆ. ಅದರಂತೆ ಭಾರ್ಗವ ಅವರ ನಿರ್ದೇಶನದಲ್ಲಿ ಸಿನಿಮಾ ಸೆಟ್ಟೆರಲು ತಯಾರಾಗಿರುತ್ತದೆ.

ಕೇವಲ 200 ರೂಪಾಯಿಗೆ ಸ್ಟಂಟ್ ಮಾಡ್ತಾಯಿದ್ದ ದುನಿಯಾ ವಿಜಯ್, ಹೀರೋ ಆಗಿ ಬೆಳೆದದ್ದು ಹೇಗೆ ಗೊತ್ತಾ?

ಸಿನಿಮಾದ ಚರ್ಚೆ ಎಲ್ಲ ಮುಗಿದು ಇನ್ನೇನು ಚಿತ್ರದ ಶೂಟಿಂಗ್ ಕೆಲಸಗಳು ಪ್ರಾರಂಭವಾಗಬೇಕು ಎನ್ನುವಂತಿದ್ದ ಸಂದರ್ಭದಲ್ಲಿ ದಾವಣಗೆರೆಯಿಂದ ಬರುತ್ತಿದ್ದಂತಹ ಶಂಕರ್ ನಾಗ್ ಅವರ ಕಾರು ಅಪಘಾತಕ್ಕೆ ಈಡಾಗುತ್ತದೆ.

ಆ ಅವಧಿಯಲ್ಲಿ ಶಂಕರ್ ನಾಗ್ ಅವರು ಮಾಲಾಶ್ರೀ ಅವರೊಂದಿಗೆ ಎಂಪಿ ಶಂಕರ್ ಅವರ ನಿರ್ಮಾಣದಲ್ಲಿ ಭಾರ್ಗವ ಅವರ ನಿರ್ದೇಶನದಲ್ಲಿ ಚಿತ್ರವೊಂದು ತಯಾರಾಗಬೇಕಿರುತ್ತದೆ.

Actress Malashreeಆದರೆ ಶಂಕರ್ ನಾಗ್ ಈ ಸಿನಿಮಾಗೆ ಡೇಟ್ಸ್ ನೀಡಿದಂತಹ ದಿನವೇ ಇಹಲೋಕ ತ್ಯಜಿಸಿದ ಕಾರಣ ಸಿನಿಮಾ ಸೆಟ್ಟೆರಲಿಲ್ಲ. ಈ ಕಾರಣದಿಂದ ಸಾಕಷ್ಟು ಸಂದರ್ಶನಗಳಲ್ಲಿ ಮಾಲಾಶ್ರೀ ಅವರು ಶಂಕರ್ ನಾಗ್ ಅವರೊಂದಿಗೆ ಅಭಿನಯಿಸದೆ ಇರುವುದು ನನ್ನ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು. ಅದರಂತೆ ವಿಷ್ಣುವರ್ಧನ್ ಸಿನಿಮಾಗಳಲ್ಲಿ ನಟಿಸುವಂತಹ ಆಸೆಯನ್ನು ಮಾಲಾಶ್ರೀ ಅವರು ಹೊಂದಿದ್ದರು.

ಕನ್ನಡ ಸಿನಿಮಾದಿಂದಲೇ ಈ ಮಟ್ಟಕ್ಕೆ ಬೆಳೆದ ರಶ್ಮಿಕಾ ಮಂದಣ್ಣ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದು ಹೇಗೆ ಗೊತ್ತಾ?

ಆದರೆ ಈ ಅವಕಾಶ ಮಾಲಾಶ್ರೀ ಅವರನ್ನು ಹರಸಿ ಬರುತ್ತಿದ್ದಂತಹ ಸಂದರ್ಭದಲ್ಲಿ ಮಾಲಾಶ್ರೀ ನನ್ನೊಂದಿಗೆ ಯಾವ ನಟ ಅಭಿನಯಿಸಿದರು ಆತ ಹಿಟ್ ಆಗುತ್ತಾನೆ ಎಂಬ ಹೇಳಿಕೆ ನೀಡಿಬಿಟ್ಟಿದ್ದರು. ಇದು ವಿಷ್ಣು ದಾದಾನಿಗೆ ಇಷ್ಟವಾಗದೆ ನಟಿ ಮಾಲಾಶ್ರೀ ಅವರೊಂದಿಗೆ ಅಭಿನಯಿಸುವಂತಹ ಮನಸ್ಸನ್ನೆ ಮಾಡಲಿಲ್ಲ ಎಂಬ ವರದಿ ಇದೆ.

Why Kannada Actor Shankar Nag and Malashree Not Did movie together

Our Whatsapp Channel is Live Now 👇

Whatsapp Channel

Related Stories