Sandalwood News

ಕನ್ನಡ ಸಿನಿಮಾದಿಂದಲೇ ಈ ಮಟ್ಟಕ್ಕೆ ಬೆಳೆದ ರಶ್ಮಿಕಾ ಮಂದಣ್ಣ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದು ಹೇಗೆ ಗೊತ್ತಾ?

Actress Rashmika Mandanna : ನಟಿ ರಶ್ಮಿಕಾ ಮಂದಣ್ಣರವರನ್ನು ಕನ್ನಡ ಸಿನಿಮಾ ರಂಗದಿಂದ (Kannada Film Industry) ಬ್ಯಾನ್ ಮಾಡಬೇಕೆಂಬ ಆಗ್ರಹಗಳು ಅದೆಷ್ಟೋ ಬಾರಿ ಕೇಳಿ ಬಂದಿವೆ. ಜನ ರಶ್ಮಿಕಾ ಮಂದಣ್ಣ ಅವರ ವರ್ತನೆ ಹಾಗೂ ಅವರ ನಡೆ-ನುಡಿಯಿಂದ ಅನೇಕ ಬಾರಿ ಬಹಳಾನೇ ಬೇಸರಗೊಂಡಿದ್ದಾರೆ. ನಟಿ ರಶ್ಮಿಕಾ ತಮ್ಮ ನಾಡು ನುಡಿಯ ಕಡೆಗಿನ ನಿರ್ಲಕ್ಷದಿಂದಾಗಿ ದಿನೇ ದಿನೇ ಕನ್ನಡಿಗರ ವಿರೋಧವನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಹಾಗಾದ್ರೆ ಇದೊಂದೇ ಕಾರಣದಿಂದ ರಶ್ಮಿಕಾ ಮಂದಣ್ಣ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡೋಕೆ ಸಾಧ್ಯನಾ? ಕೇವಲ ವರ್ತನೆಯಿಂದಾಗಿ ಯಾವ ಸೆಲೆಬ್ರಿಟಿಯನ್ನಾದರು ಸಹ ಸಿನಿಮಾರಂಗದಿಂದ ಬ್ಯಾನ್ ಮಾಡಲು ಸಾಧ್ಯವಿಲ್ಲ.

Actress Rashmika Mandanna Kannada To Bollywood Cinema Journey and Reason For Troll

ಹೌದು ಗೆಳೆಯರೇ ಇತ್ತೀಚಿಗಷ್ಟೇ ನಡೆದ ಸಂದರ್ಶನ (Interview) ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ತಾವು ನಡೆದು ಬಂದ ಸಿನಿ ಜರ್ನಿಯ ಕುರಿತು ಹೇಳಿಕೊಂಡಿದ್ದರು. ಆಗ ತಮ್ಮ ನಟನೆಗೆ ಮೊಟ್ಟ ಮೊದಲು ಅವಕಾಶ ಕಲ್ಪಿಸಿ ಕೊಟ್ಟಂತಹ ಪರಂ ಸ್ಟುಡಿಯೋಸ್ನ ಹೆಸರನ್ನು ಹೇಳದೆ ಕೇವಲ ಕೈ ಸನ್ನೆಯನ್ನು ಮಾಡುವ ಮೂಲಕ ಕನ್ನಡಿಗರ ಬೇಸರಕ್ಕೆ ಸಾಕ್ಷಿಯಾಗಿದ್ದರು.

ಬಿಡುಗಡೆಯಾದ ಮೂರೇ ದಿನಕ್ಕೆ ‘ಜೈಲರ್’ ಸಿನಿಮಾ OTT ಬಿಡುಗಡೆ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್

ಇದರಿಂದ ರಶ್ಮಿಕಾ ಮಂದಣ್ಣ ಅವರಿಗೆ ತಮ್ಮ ನೆಲದ ಮೇಲೆ ಪ್ರೀತಿ ವಿಶ್ವಾಸವಿಲ್ಲ, ಮೊದಲು ಚಾನ್ಸ್ ನೀಡಿದಂತಹ ಸಂಸ್ಥೆಯ ಹೆಸರನ್ನು ಹೇಳಲು ಕೂಡ ರಶ್ಮಿಕಾ ಮಂದಣ್ಣ ನಿಯತ್ತಿಲ್ಲ ಎಂದು ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ (Troll) ಮಾಡಿದರು.

ಹಾಗಂತ ನಟಿ ರಶ್ಮಿಕಾ ಮಂದಣ್ಣ ತಮ್ಮ ನಡೆ ನುಡಿಯಲ್ಲಿ ಎಡವಿದ್ದು ಇದೇ ಮೊದಲೆನಲ್ಲ ಈ ಹಿಂದೆ ಸಾಕಷ್ಟು ಬಾರಿ ಈ ರೀತಿಯಾದಂತಹ ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ.

ಹೌದು ಗೆಳೆಯರೇ ಮೂಲತಃ ಕೊಡಗಿನ ವಿರಾಜಪೇಟೆಯವರಾದ ರಶ್ಮಿಕಾ ಮಂದಣ್ಣ 2016ರಲ್ಲಿ ರಕ್ಷಿತ್ ಶೆಟ್ಟಿ ಅವರೊಡನೆ ಕಿರಿಕ್ ಪಾರ್ಟಿ (Kannada Kirik Party Cinema) ಎಂಬ ಸಿನಿಮಾದ ಮೂಲಕ ತಮ್ಮ ನಟನ ವೃತ್ತಿಯನ್ನು ಪ್ರಾರಂಭಿಸಿದರು.

ಆಗ ಅವರಿಗೆ ಕೇವಲ 20 ವರ್ಷ ವಯಸ್ಸು, ನಟಿಸಿದ ಮೊದಲ ಸಿನಿಮಾದಲ್ಲಿಯೇ ಬಿಗ್ ಬ್ರೇಕ್ ಅನ್ನು ರಶ್ಮಿಕಾ ಮಂದಣ್ಣ ಪಡೆದುಕೊಳ್ಳುತ್ತಾರೆ. ಈ ಸಿನಿಮಾದ ನಟನೆಗೆ ಡಬ್ಲ್ಯೂ ನಟಿ ವಿಭಾಗದಲ್ಲಿ ಈಕೆ ತಮ್ಮ ಮೊದಲ ಸೈಮ ಅವಾರ್ಡ್ ಅನ್ನು ಕೂಡ ಪಡೆದುಕೊಳ್ಳುತ್ತಾರೆ.

“ಪ್ಯಾದೆ ಇದ್ದಂಗೆ ಇದ್ದಾನೆ ಇವನೊಬ್ಬ ನಟನಾ” ಅಂದವರು ಇಂದು ಈ ನಟನ ಡೇಟ್ಸ್ ಗಾಗಿ ಕ್ಯೂ ನಿಲ್ತಾರೆ! ನಟ ಧನುಷ್ ಸಿನಿ ಜರ್ನಿ

Actress Rashmika Mandanna ಇಲ್ಲಿವರೆಗೂ ಎಲ್ಲಾ ಸುಗಮವಾಗಿ ಹೋಯಿತು, ಕನ್ನಡಕ್ಕೆ ಓರ್ವ ಕ್ಯೂಟ್ ಲುಕಿಂಗ್ ಹೀರೋಯಿನ್ ಸಿಕ್ಕಳು ಎಂದು ಕನ್ನಡಿಗರ ಸಂಭ್ರಮವನ್ನೇ ಪಟ್ಟಿದ್ದರು. ಈ ಒಂದು ಸಂದರ್ಭದಲ್ಲಿ ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ಎಂಗೇಜ್ಮೆಂಟ್ ಕೂಡ ನಡೆಯುತ್ತದೆ.

ಕೆಲವೇ ಕೆಲವು ದಿನಗಳಲ್ಲಿ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿದ್ದವು. ಜನ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಅವರ ಮೇಲೆ ಅಸಮಾಧಾನ ಹೊಂದಲು ಮುಖ್ಯ ಕಾರಣ ರಕ್ಷಿತ್ ಶೆಟ್ಟಿ ಅವರೊಂದಿಗಿನ ಮದುವೆ ಬ್ರೇಕ್ ಅಪ್.

ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ಆಫರ್

ಹೌದು ಗೆಳೆಯರೇ ಕಿರಿಕ್ ಪಾರ್ಟಿ ಯಶಸ್ಸಿನ ನಂತರ 2018ರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗಿನಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ.

ಮದುವೆಗೂ ಮುನ್ನ ಒಂದು ಸಾರಿ ಸೆ’ಕ್ಸ್ ಮಾಡಿ ಗಂಡನನ್ನು ಟೆಸ್ಟ್ ಮಾಡಿ ಎಂದ ನಟಿ ಶ್ರೀ ರಾಪಕಾ!

ಈ ಸಿನಿಮಾದ ಸೀನ್ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ವಿಜಯ್ ಅವರೊಂದಿಗೆ ಹಸಿ ಬಿಸಿ ಸೀನ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ರಕ್ಷಿತ್ ಹಾಗೂ ರಶ್ಮಿಕಾ ಬ್ರೇಕ್ ಅಪ್ ಆಯ್ತು ಎಂಬ ವರದಿ ಇದೆ. ಈ ಕಾರಣದಿಂದ ರಶ್ಮಿಕಾ ಮಂದಣ್ಣ ಚಿತ್ರ ವಿಚಿತ್ರವಾಗಿ ಟ್ರೋಲ್ ಆದರು, ಹೀಗೆ ಟ್ರೋಲ್ ಮೆಟೀರಿಯಲ್ ಆಗಿದ್ದಂತಹ ರಶ್ಮಿಕಾ ಮಂದಣ್ಣ ಅವರ ವಿವಾದಿತ ನಡೆಗಳು ಅವರಿಗೆ ಗೊತ್ತೊ ಗೊತ್ತಿಲ್ಲದೆ ಗುರಿಯಾಗುತ್ತಾರೆ.

ಇನ್ನು ಎರಡನೇದಾಗಿ ಸೋಶಿಯಲ್ ಮೀಡಿಯಾದ ಲೈವ್ಗೆ ಬಂದಂತಹ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಯೊಬ್ಬರು ಕನ್ನಡ ಬಳಸಿ ಎಂದು ಹೇಳಿದಾಗ ರಶ್ಮಿಕಾ ಮಂದಣ್ಣ ‘ಕನ್ನಡವನ್ನು ಖಂಡಿತವಾಗಿಯೂ ಬಳಸುತ್ತೇನೆ ಆದರೆ ಇಲ್ಲಿ ಇಂಗ್ಲಿಷ್ ಇರಲಿ ಪ್ಲೀಸ್’ ಎನ್ನುವ ಮೂಲಕ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ಇದಾದ ನಂತರ ಕನ್ನಡಿಗರ ಬಳಿ ಸೌಜನ್ಯಕ್ಕಾಗಿಯೂ ರಶ್ಮಿಕಾ ಮಂದಣ್ಣ ಕ್ಷಮೆಯನ್ನು ಕೇಳಲಿಲ್ಲ.

Kannada Actress Rashmika Mandannaಮತ್ತೊಮ್ಮೆ ತಮಿಳಿನ ಸಂದರ್ಶನ ಒಂದರಲ್ಲಿ ಮಾತನಾಡುತ್ತಿದ್ದಾಗ ರಶ್ಮಿಕ ಮಂದಣ್ಣ ಅವರಿಗೆ ನಿಮಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತೆ ತಾನೆ ಎಂದು ಕೇಳಿದಾಗ ‘ಇಲ್ಲ ನನಗೆ ಕನ್ನಡ ಅಷ್ಟಾಗಿ ಬರೋದಿಲ್ಲ ಎಂದು ಹೇಳುವುದರ ಜೊತೆಗೆ ನನಗೆ ಯಾವುದೇ ಸೌತ್ ಇಂಡಿಯನ್ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡೋದಕ್ಕೆ ಬರಲ್ಲ, ನನಗೆ ನನ್ನ ಮಾತೃಭಾಷೆಯ ಜೊತೆ ಎಲ್ಲ ಭಾಷೆಯೂ ಕಷ್ಟ’ ಎಂದು ರಶ್ಮಿಕಾ ಮಂದಣ್ಣ ಸ್ಪಷ್ಟವಾದ ತಮಿಳಿನಲ್ಲಿ ಉತ್ತರಿಸಿದರು.

ಇನ್ನು ಖಾಸಗಿ ಸಂದರ್ಶನ ಒಂದರಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ‘ಸ್ಯಾಂಡಲ್ವುಡ್ನಲ್ಲಿ (Sandalwood) ಅತಿಯಾಗಿ ಶೋ ಆಫ್ ಮಾಡುವ ನಟ ಯಾರು? ಎಂದು ಕೇಳಿದಾಗ ರಶ್ಮಿಕ ಹಿಂದೆ ಮುಂದೆ ಯೋಚಿಸಿದೆ ಯಶ್’ ಎಂಬ ಉತ್ತರ ನೀಡಿದರು.

ನಟಿ ಶಕೀಲಾ ನೀಲಿ ಚಿತ್ರದಲ್ಲಿ ನಟಿಸಲು ಕಾರಣವೇನು ಗೊತ್ತಾ? ಅವರ ರಿಯಲ್ ಲೈಫ್ ಸ್ಟೋರಿ ಕೇಳಿದ್ರೆ ಕಣ್ಣೀರು ತರಿಸುತ್ತೆ

ಇದು ಯಶ್ ಅವರ ಅಭಿಮಾನಿಗಳನ್ನು (Actor Yash Fans) ಕೆಣಕಿತ್ತು, ಹೀಗೆ ಅಲ್ಪಾವಧಿಯಲ್ಲಿಯೇ ಉತ್ತುಂಗದ ಶಿಖರವನ್ನು ಏರಿರುವ ರಶ್ಮಿಕಾ ಮಂದಣ್ಣ ಯಾವುದೇ ಸಂದರ್ಶನದಲ್ಲಿ ಭಾಗಿಯಾದರೂ ಹಿಂದೆ ಮುಂದೆ ಯೋಚಿಸದೆ ಮಾತನಾಡುವ ಮೂಲಕ ಇಲ್ಲಸಲ್ಲದ ಸಮಸ್ಯೆಗಳನ್ನು ತಮ್ಮ ಮೈ ಮೇಲೆ ಹಾಕಿಕೊಂಡು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಅನೇಕ ಬಾರಿ ಕನ್ನಡಿಗರ ವಿರುದ್ಧವಾಗಿಯೇ ಆಗಿವೆ.

Actress Rashmika Mandanna Kannada To Bollywood Cinema Journey and Reason For Troll

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories