Jailer Cinema On OTT : ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಜೈಲರ್’ ಸಿನಿಮಾ OTT ನಲ್ಲಿ ಬಿಡುಗಡೆಯಾಗಲಿದೆ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಗೆ ಸಿದ್ಧವಾಗುತ್ತಿದೆ. ಥಿಯೇಟರ್‌ಗಳಲ್ಲಿ ಅದಾಗಲೇ ಧೂಳೆಬ್ಬಿಸಿರುವ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಶೀಘ್ರದಲ್ಲೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ನೆಟ್‌ಫ್ಲಿಕ್ಸ್‌ನೊಂದಿಗೆ ಚಿತ್ರದ ಒಪ್ಪಂದವು ಪೂರ್ಣಗೊಂಡಿದೆ, ಆದರೆ ಅದರ ಸ್ಟ್ರೀಮಿಂಗ್ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಶೀಘ್ರದಲ್ಲೇ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಗೆ ಸಿದ್ಧವಾಗುತ್ತಿದೆ.
ಸೂಪರ್ ಹಿಟ್ ಸಿನಿಮಾವನ್ನು ನಿಮ್ಮ ಮನೆಯಲ್ಲಿಯೇ ಕೂತು ನೋಡಬಹುದು. ಆದರೆ ಥಿಯೇಟರ್ ನಲ್ಲಿ ನೋಡುವ ಅನುಭವವೇ ಬೇರೆ ಇರುತ್ತದೆ, ಆದರೆ ಕೆಲ್ಸದ ಒತ್ತಡ, ನೋಡಲು ಸಮಯ ಇಲ್ಲದವರು ಮನೆಯಲ್ಲೇ ನೋಡಬಹುದು.
ಆಗಸ್ಟ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಜೈಲರ್ ಇದುವರೆಗೆ ವಿಶ್ವದಾದ್ಯಂತ 400 ಕೋಟಿಗಳನ್ನು ದಾಟಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಮೊದಲ ದಿನ 48.35 ಕೋಟಿ ಗಳಿಸಿದೆ.
.@NimmaShivanna watched the power-packed #Jailer with the fans in Karnataka🔥#Jailer rampage in theatres near you. 💥@rajinikanth @Nelsondilpkumar @anirudhofficial @Mohanlal @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi… pic.twitter.com/SR8qRHywdJ
— Sun Pictures (@sunpictures) August 14, 2023
ಎರಡನೇ ದಿನ ಚಿತ್ರ 25 ಕೋಟಿ ಕಲೆಕ್ಷನ್ ಮಾಡಿದೆ. ಎರಡೂ ದಿನ ತಮಿಳು ಭಾಷೆಯ ಕಲೆಕ್ಷನ್ ಬಾರೀ ಆಗಿತ್ತು. ಜೈಲರ್ ಮೂರನೇ ದಿನ 34 ಕೋಟಿ ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ, ನಾಲ್ಕನೇ ದಿನ, ಗಳಿಕೆ ಸಂಖ್ಯೆ ಸುಮಾರು 42 ಕೋಟಿ ಆಗಿತ್ತು. ಚಿತ್ರವು ಐದನೇ ದಿನಕ್ಕೆ 28 ಕೋಟಿ ಗಳಿಸಿದೆ ಮತ್ತು ಈಗ ವರದಿಯ ಪ್ರಕಾರ, ಚಿತ್ರವು ತನ್ನ ಆರನೇ ದಿನ ಅಂದರೆ ಮಂಗಳವಾರ 38 ಕೋಟಿ ಗಳಿಸಬಹುದು ಎನ್ನಲಾಗಿದೆ.
ಮದುವೆಗೂ ಮುನ್ನ ಒಂದು ಸಾರಿ ಸೆ’ಕ್ಸ್ ಮಾಡಿ ಗಂಡನನ್ನು ಟೆಸ್ಟ್ ಮಾಡಿ ಎಂದ ನಟಿ ಶ್ರೀ ರಾಪಕಾ!
ಬಹಳ ದಿನಗಳ ನಂತರ ತೆರೆಗೆ ಮರಳಿದ ರಜನಿಕಾಂತ್ ಜೊತೆಗೆ ತಮನ್ನಾ ಭಾಟಿಯಾ ಕೂಡ ಈ ಚಿತ್ರದಲ್ಲಿ ಇದ್ದಾರೆ. ಚಿತ್ರದಲ್ಲಿ ಜಾಕಿ ಶ್ರಾಫ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಹಾಗೂ ಕನ್ನಡದ ಸೂಪರ್ ಸ್ಟಾರ್ ಶಿವರಾಜಕುಮಾರ್ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Rajinikanth Starrer Jailor Cinema to be released on OTT, streaming on Netflix
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.