ಅಪ್ಪು ತಮ್ಮ ಹೆಂಡತಿ ಮಕ್ಕಳಿಗಾಗಿ ಎಷ್ಟು ಕೋಟಿ ಆಸ್ತಿ ಬಿಟ್ಟು ಹೋಗಿದ್ದಾರೆ ಗೊತ್ತಾ? ಪಾಪ ಅವರೇ ಇಲ್ಲದ ಮೇಲೆ ಆಸ್ತಿ ಯಾಕೆ ಅಂತೀರಾ!
ಪುನೀತ್ ರಾಜಕುಮಾರ್ ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಾ ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ, ಹೆಣ್ಣು ಮಕ್ಕಳ ಅಭಿವೃದ್ಧಿ ಹಾಗೂ ಗೋಶಾಲೆಗಳಿಗೆ ದಾನ ನೀಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Actor Puneeth Rajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉರುಳಿದರು ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಇಂದಿಗೂ ಅದೆಷ್ಟೋ ಅಭಿಮಾನಿಗಳಿಗೆ ಆರಗಿಸಿಕೊಳ್ಳಲು ಸಾಧ್ಯವಾಗುತ್ತಲೆ ಇಲ್ಲ.
ಹೀಗೆ ಕೇವಲ ಥಿಯೇಟರ್, ಟಿವಿ ಹಾಗೂ ಮೊಬೈಲ್ನಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಂಡಂತಹ ನಮ್ಮ ನಿಮ್ಮೆಲ್ಲರಿಗೂ ಅವರ ಅಗಲಿಕೆ ಅಗಾಧವಾದ ನೋವನ್ನು ತಂದೊಡ್ಡಿರುವಾಗ ಅವರ ಕುಟುಂಬಸ್ಥರಿಗೆ ಈ ದುಃಖ ಅದೆಷ್ಟರ ಮಟ್ಟಿಗಿದೆ ಎಂಬುದನ್ನು ನೀವೇ ಯೋಚಿಸಿ.
ಕೇವಲ 200 ರೂಪಾಯಿಗೆ ಸ್ಟಂಟ್ ಮಾಡ್ತಾಯಿದ್ದ ದುನಿಯಾ ವಿಜಯ್, ಹೀರೋ ಆಗಿ ಬೆಳೆದದ್ದು ಹೇಗೆ ಗೊತ್ತಾ?
ಪುನೀತ್ ರಾಜಕುಮಾರ್ ಅಗಲಿದ ದಿನದಿಂದ ಹಿಡಿದು ಇಂದಿನವರೆಗೂ ಅವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಲೇ ಇರುತ್ತದೆ. ಅದರಂತೆ ನಾವಿವತ್ತು ಬಾಲ್ಯದಿಂದಲೂ ಸಿನಿಮಾ ರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಂತಹ ಪುನೀತ್ ರಾಜಕುಮಾರ್ ಅವರು ತಮ್ಮ ಹೆಂಡತಿ ಮಕ್ಕಳಿಗಾಗಿ ಸಂಪಾದಿಸಿದಂತಹ ಆಸ್ತಿ (Property) ಮೌಲ್ಯ ಎಷ್ಟು ಎಂಬುದನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಪುನೀತ್ ರಾಜಕುಮಾರ್.. ನಮ್ಮ ಪ್ರೀತಿಯ ಅಪ್ಪು (Appu) ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಾ ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ, ಹೆಣ್ಣು ಮಕ್ಕಳ ಅಭಿವೃದ್ಧಿ ಹಾಗೂ ಗೋಶಾಲೆಗಳಿಗೆ ದಾನ ನೀಡಿದ್ದಾರೆ.
ಕನ್ನಡ ಸಿನಿಮಾದಿಂದಲೇ ಈ ಮಟ್ಟಕ್ಕೆ ಬೆಳೆದ ರಶ್ಮಿಕಾ ಮಂದಣ್ಣ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದು ಹೇಗೆ ಗೊತ್ತಾ?
ಇದೆಲ್ಲದರ ಜೊತೆಗೆ 1800 ಹೆಣ್ಣು ಮಕ್ಕಳ ಶಿಕ್ಷಣದ (Education) ಖರ್ಚನ್ನು ಹೊತ್ತಿದಂತಹ ಸಾಕಷ್ಟು ನಿಸ್ವಾರ್ಥ ಸೇವೆಗಳನ್ನು ಮಾಡುವುದರ ಜೊತೆಗೆ ತಮ್ಮ ಹೆಂಡತಿ ಹಾಗೂ ಮಕ್ಕಳಿಗಾಗಿಯು ಸ್ವಲ್ಪ ಮಟ್ಟದ ಆಸ್ತಿಯನ್ನು ಕೂಡಿಸಿದ್ದರು. ಸದಾಶಿವ ನಗರದಲ್ಲೊಂದು ಬೃಹತ್ತಾದ ಮನೆ, ಡಾಕ್ಟರ್ ರಾಜಕುಮಾರ್ ಅವರ ಹುಟ್ಟುರಾದ ಗಾಜಿನೂರಿನಲ್ಲೊಂದು ಬಂಗಲೆ, ಇದರ ಜೊತೆಗೆ ಎರಡು ಲ್ಯಾಂಬೋರ್ಗಿನಿ (Lamborghini) ಮತ್ತು ಒಂದೊಂದು ವೋಲ್ವೋ ಫಾರ್ಚುನರ್ ಕಾರುಗಳು (Cars), ಕೋಟಿಗಟ್ಟಲೆ ಬೆಲೆ ಬಾಳುವ ಬೈಕ್ಗಳು (Bikes)..
ಬಿಡುಗಡೆಯಾದ ಮೂರೇ ದಿನಕ್ಕೆ ‘ಜೈಲರ್’ ಸಿನಿಮಾ OTT ಬಿಡುಗಡೆ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್
ಪತ್ನಿ ಅಶ್ವಿನಿ ಅವರ ಬಳಿ ಒಂದು ಕೆಜಿ ಚಿನ್ನ ಹೀಗೆ ಒಟ್ಟಾರೆಯಾಗಿ ನೂರು ಕೋಟಿಗೂ ಅಧಿಕ ಆಸ್ತಿಯನ್ನು ಬಿಟ್ಟು ಹೋಗಿರುವ ಮಾಹಿತಿ ತಿಳಿದು ಬಂದಿದೆ. ಅದಕ್ಕೂ ಮಿಗಿಲಾಗಿ ಅಪ್ಪು ಗಳಿಸಿರುವುದು ಅಭಿಮಾನಿಗಳ ಅಭಿಮಾನವನ್ನ (Appu Fans) ಹಾಗೂ ಕೋಟ್ಯಾಂತರ ಜನರ ಪ್ರೀತಿಯನ್ನ. ಇಷ್ಟೆಲ್ಲಾ ಆಸ್ತಿಯನ್ನು ಹೊಂದಿದ್ದರು ದೊಡ್ಮನೆ ಸದ್ಯ ನಗುವಿನ ರಾಜಕುಮಾರನನ್ನು ಕಳೆದುಕೊಂಡು ಅನಾಥವಾಗಿದೆ. ಪಾಪ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ಅಪ್ಪನೇ ಇಲ್ಲದ ಮೇಲೆ ಇಷ್ಟೆಲ್ಲಾ ಆಸ್ತಿ ಯಾಕೆ ಅಂತೀರಾ?
ಆದರೆ ಅಪ್ಪು ನಮ್ಮೊಂದಿಗೆ ಇಲ್ಲದೆ ಇರಬಹುದು, ಅವರ ಗುಣಗಳು ಹಾಗೂ ಅವರ ನಿಸ್ವಾರ್ಥ ಸಮಾಜ ಸೇವೆ, ಅವರು ಹೇಳಿಕೊಟ್ಟು ಹೋಗಿರುವ ಬದುಕಿನ ಪಾಠ ಮುಂದಿನ ಪೀಳಿಗೆಯ ಯುವಕರಿಗೂ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಇನ್ನು ಅವರೇ ಕರುನಾಡ ಆಸ್ತಿ ಅಂದಮೇಲೆ ಅವರ ಆಸ್ತಿ ಏಕೆ ಬೇಕು… ಅಲ್ಲವೇ ಸ್ನೇಹಿತರೆ
Kannada Actor Puneeth Rajkumar Earned Property and Social Services