ಕೇವಲ 200 ರೂಪಾಯಿಗೆ ಸ್ಟಂಟ್ ಮಾಡ್ತಾಯಿದ್ದ ದುನಿಯಾ ವಿಜಯ್, ಹೀರೋ ಆಗಿ ಬೆಳೆದದ್ದು ಹೇಗೆ ಗೊತ್ತಾ?

ದುನಿಯಾ ಸಿನಿಮಾಗೆ ವಿಜಯ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಚಿತ್ರ 2007ರಲ್ಲಿ ಪ್ರದರ್ಶನಗೊಂಡು ಬ್ಲಾಕ್ ಬಾಸ್ಟರ್ ಹಿಟ್ ಪಟ್ಟಿಗೆ ಸೇರಿಕೊಳ್ಳುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಚರಿತ್ರೆಯನ್ನು ಸೃಷ್ಟಿಸುತ್ತದೆ.

ಬದುಕಿನ ನಾನಾ ಒತ್ತಡ ಸೋಲು ಭಯಗಳು ನಮ್ಮನ್ನು ಸಾಧನೆಯ ಹಾದಿಯಿಂದ ವಿಮುಖರಾಗುವಂತೆಯೂ ಮಾಡಿಬಿಡುತ್ತದೆ‌. ಅದೆಷ್ಟೋ ಜನರು ಇಂತಹ ಭಯಗಳಿಂದ ಏನನ್ನು ಸಾಧಿಸಲಾರದೆ ಹೊರಟು ಹೋಗುತ್ತಾರೆ.

ಆದರೆ ಬದುಕಿನ ಇಂತಹ ಅಗ್ನಿಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಿ ನಿಲ್ಲುವವರು ಮಾತ್ರವೇ ಗೆಲುವಿನ ಶಿಖರಕ್ಕೆ ಎರುತ್ತಾರೆ. ಇಂತಹ ಬದುಕಿನ ಹಲವು ವೈಪರಿತ್ಯ ಸೋಲುಗಳನ್ನು ತಮ್ಮ ಮಜಲ್ ಪವರ್ನಿಂದಲೇ ಎದುರಿಸಿ ಇವತ್ತು ಆಗಸದ ಎತ್ತರಕ್ಕೆ ಬೆಳೆದಂತಹ ಸೆಲೆಬ್ರಿಟಿಗಳಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು.

ನಟ ದುನಿಯಾ ವಿಜಯ್ (Actor Duniya Vijay) ಇವತ್ತು ಈ ಸ್ಥಾನಕ್ಕೆ ಬರಲು ನಡೆದು ಬಂದ ಹಾದಿ ಇದೆಯಲ್ಲ ಅದು ಅಷ್ಟು ಸುಲಭವಾಗಿರಲಿಲ್ಲ. ಸಿನಿಮಾ ರಂಗವಾಗಲಿ ಅಥವಾ ಯಾವುದೇ ಕ್ಷೇತ್ರವಾಗಲಿ ಓರ್ವ ಸಾಮಾನ್ಯ ವ್ಯಕ್ತಿಗೆ ಯಶಸ್ಸೆಂಬುದು ಅಷ್ಟು ಸುಲಭವಾಗಿ ಸಿಗುವಂತದ್ದಲ್ಲ.

ಕೇವಲ 200 ರೂಪಾಯಿಗೆ ಸ್ಟಂಟ್ ಮಾಡ್ತಾಯಿದ್ದ ದುನಿಯಾ ವಿಜಯ್, ಹೀರೋ ಆಗಿ ಬೆಳೆದದ್ದು ಹೇಗೆ ಗೊತ್ತಾ? - Kannada News

ಕನ್ನಡ ಸಿನಿಮಾದಿಂದಲೇ ಈ ಮಟ್ಟಕ್ಕೆ ಬೆಳೆದ ರಶ್ಮಿಕಾ ಮಂದಣ್ಣ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದು ಹೇಗೆ ಗೊತ್ತಾ?

ಹೌದು ಗೆಳೆಯರೆ ಓರ್ವ ಸ್ಟಂಟ್ ಆರ್ಟಿಸ್ಟ್ (Stunt Artist) ಆಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಂತಹ ದುನಿಯಾ ವಿಜಯ್ ಅವರು ಬೆಂಗಳೂರಿನ ಆಸು ಪಾಸಿನಲ್ಲಿ ತಮ್ಮ ದೈಹಿಕ ಕಸರತ್ತುಗಳನ್ನು ಅಭ್ಯಾಸಿಸಿದವರು.

ಆನಂತರ ನಾನು ಸಿನಿಮಾದಲ್ಲಿ ಎಲ್ಲೋ ಮೂಲೆಯಲ್ಲಿ ಕಾಣಿಸುವಂತಹ ಸ್ಟಂಟ್ ಆರ್ಟಿಸ್ಟ್ ಆಗಬಾರದು ಓರ್ವ ಕಲಾವಿದನಾಗಬೇಕೆಂಬ ಆಸೆಯಿಂದ ದುನಿಯಾ ವಿಜಯ್ ಅವರು ಸಿಕ್ಕ ಸಿಕ್ಕ ಪಾತ್ರದಲ್ಲೆಲ್ಲಾ ಅಭಿನಯಿಸುತ್ತ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುತ್ತಾರೆ.

ಹೀಗೆ ಸಹ ನಟನಾಗಿ ಸ್ಟಂಟ್ ಆರ್ಟಿಸ್ಟ್ ಆಗಿ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಕೆಲಸ ಮಾಡುತ್ತಿದ್ದಂತಹ ದುನಿಯಾ ವಿಜಯ್ ಅವರು ಪ್ರತಿನಿತ್ಯ ಕೈಕಾಲನ್ನು ಮುರಿಸಿಕೊಂಡು ಕೇವಲ 200 ಹಣವನ್ನು ಸಂಪಾದನೆ ಮಾಡುತ್ತಿದ್ದರು.

Kannada Actor Duniya Vijayಹೀಗೆ 2002ರಲ್ಲಿ ಅನೇಕ ಸಿನಿಮಾಗಳಲ್ಲಿ ಕ್ಯಾಮರಾ ಕಣ್ಣಿನ ಹಿಂದೆ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಂತಹ ದುನಿಯಾ ವಿಜಯ್ ಅವರು ರಂಗ ಎಸ್ ಎಸ್ ಎಲ್ ಸಿ ಸಿನಿಮಾದ ಮೂಲಕ ಮೊಟ್ಟ ಮೊದಲ ಪೂರ್ಣ ಪಾತ್ರದಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಹಾಗೆ ನೋಡಿದರೆ ಸೂರಿಯವರ ದುನಿಯಾ ಸಿನಿಮಾಗೆ ವಿಜಯವರನ್ನು ನಾಯಕನಾಗಿ ಆಯ್ಕೆ ಮಾಡಿಕೊಳ್ಳುವಂತಹ ಸಲಹೆ ನೀಡಿದವರೇ ಯೋಗರಾಜ್ ಭಟ್.

ಬಿಡುಗಡೆಯಾದ ಮೂರೇ ದಿನಕ್ಕೆ ‘ಜೈಲರ್’ ಸಿನಿಮಾ OTT ಬಿಡುಗಡೆ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್

ಹೀಗಾಗಿ ಸೂರಿ ಅವರು ದುನಿಯಾ ಸಿನಿಮಾಗೆ ವಿಜಯ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಚಿತ್ರ 2007ರಲ್ಲಿ ಪ್ರದರ್ಶನಗೊಂಡು ಬ್ಲಾಕ್ ಬಾಸ್ಟರ್ ಹಿಟ್ ಪಟ್ಟಿಗೆ ಸೇರಿಕೊಳ್ಳುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಚರಿತ್ರೆಯನ್ನು ಸೃಷ್ಟಿಸುತ್ತದೆ. ಈ ಸಿನಿಮಾದ ಅಭಿನಯಕ್ಕಾಗಿ ದುನಿಯಾ ವಿಜಯ್ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ. ನಟಿಸಿದ ಮೊದಲ ಸಿನಿಮಾದಲ್ಲಿಯೇ ಸುಪ್ರಸಿದ್ಧಿ ಹೊಂದಿದ್ದರು.

ಈ ಮೂಲಕ ಎಲ್ಲೋ ಮೂಲೆಗುಂಪಾಗಿದ್ದಂತಹ ದುನಿಯಾ ವಿಜಯ್ ಮನೆ ಮಾತಾಗಿ ಹೋದರು. ಆನಂತರ ದುನಿಯಾ ಸಿನಿಮಾದಿಂದ ಆಚೆಗೆ ಅವರೆಂದು ಹಿಂದಿರುಗಿ ನೋಡಲೇ ಇಲ್ಲ. ಹೌದು ಗೆಳೆಯರೇ ಚಂಡ, ಕಂಠೀರವ, ಭೀಮಾ ತೀರದಲ್ಲಿ, ಕರಿ ಚಿರತೆ, ಜಂಗ್ಲಿ, ಜರಾಸಂಧ, ಸಲಗ ಹೀಗೆ ಮುಂತಾದ ಸಿನಿಮಾಗಳಿಂದ ಮುಂದುವರೆದ ಇವರ ಕರಿಯರ್ ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಲ್ಲೂ ಒಬ್ಬರನ್ನಾಗಿ ಮಾಡಿದೆ.

ಹೀಗೆ ಸುಮಾರು ಹತ್ತು ವರ್ಷಗಳ ಕಾಲ ಪಟ್ಟಂತಹ ಶ್ರಮಕ್ಕೆ ದುನಿಯಾ ವಿಜಯ್ ಅವರು ಸದ್ಯ ಚಿನ್ನದ ಗೋಪುರದ ಮೇಲೆ ಕುಳಿತಿದ್ದಾರೆ.

Kannada Actor Duniya Vijay Cinema Journey

Follow us On

FaceBook Google News

Kannada Actor Duniya Vijay Cinema Journey