ಕನ್ನಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಲಿಸ್ಟ್! ಈ ಬಾರಿ ದೊಡ್ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ?
Kannada Bigg Boss Season 10 : ಹೌದು ಗೆಳೆಯರೇ 2013ರಲ್ಲಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಶುರುವಾದಂತಹ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಒಂಬತ್ತು ಸೀಸನ್ಗಳನ್ನು ಮುಗಿಸಿ 10ನೇ ಆವೃತ್ತಿಗೆ ಕಾಲಿಡಲು ಸಕಲ ಸಿದ್ಧತೆಯನ್ನು ನಡೆಸುತ್ತಿದೆ.
Kannada Bigg Boss Season 10 : ಸ್ನೇಹಿತರೆ, ಕನ್ನಡದ ಅತಿ ದೊಡ್ಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಹತ್ತು (Bigg Boss Season 10) ಪ್ರಸಾರವಾಗಲು ದಿನಗಣನೆ ಪ್ರಾರಂಭವಾಗಿದ್ದು, ಕಾರ್ಯಕ್ರಮ ಪ್ರಸಾರ ಮಾಡಲು ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ.
ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸದ್ಯ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳು ಯಾರಿರಬಹುದು ಎಂಬುದರ ಲೆಕ್ಕಾಚಾರವನ್ನು ಅಭಿಮಾನಿಗಳು ಜೋರಾಗಿಯೇ ಹಾಕುತ್ತಿದ್ದರು.
ಇದರ ಅಂಗವಾಗಿ ಟಾಪ್ ಫೈವ್ ಸ್ಟಾರ್ ಸೆಲೆಬ್ರೆಟಿಗಳ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಕಲಾವಿದರು ದೊಡ್ಮನೆ ಪ್ರವೇಶ ಮಾಡುವುದು ಬಹುತೇಕ ಫೈನಲ್ ಆಗಿದೆಯಂತೆ.
ಹಾಗಾದರೆ ಬಿಬಿಕೆ ಹತ್ತರ ಸ್ಪರ್ಧಿಯಾಗಿ ಮನೆಯೊಳಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ತಿಳಿದು ಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ 2013ರಲ್ಲಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಶುರುವಾದಂತಹ ಕನ್ನಡದ ಬಿಗ್ ಬಾಸ್ (Kannada Bigg Boss Show) ಕಾರ್ಯಕ್ರಮ ಈಗಾಗಲೇ ಒಂಬತ್ತು ಸೀಸನ್ಗಳನ್ನು ಮುಗಿಸಿ 10ನೇ ಆವೃತ್ತಿಗೆ ಕಾಲಿಡಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದು, ಕಿಚ್ಚ ಸುದೀಪ್ (Kiccha Sudeep) ಯಥಾಪ್ರಕಾರ ಈ ಬಾರಿಯ ಕಾರ್ಯಕ್ರಮವನ್ನು ಬರದಿಂದ ನಡೆಸಿಕೊಳ್ಳಲು ತಯಾರಿ ನಡೆಸುತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಳೆದ ಸೀಸನ್ನಂತೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವುದೇ ಓಟಿಟಿ ಶೋ ಇರುವುದಿಲ್ಲ ಹಾಗೂ ನವೀನರು ಪ್ರವೀಣರು ಎಂಬ ಕ್ಯಾಟಗರಿಯನ್ನು ಕೂಡ ತೆಗೆದು ಹಾಕಲಾಗಿದೆ ಎಂಬ ಮಾಹಿತಿಯು ಮೂಲಗಳಿಂದ ತಿಳಿದುಬಂದಿದೆ.
ಇನ್ನು ಸೆಲೆಬ್ರಿಟಿಗಳನ್ನಾಗಿ ಬಿಗ್ ಬಾಸ್ ತಂಡದವರು ಆಯ್ಕೆ ಮಾಡಿರುವ 15 ಕಲಾವಿದರ ಪೈಕಿ ಐವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ.
ತಮ್ಮ ಅದ್ಭುತ ಡ್ಯಾನ್ಸ್ ವಿಡಿಯೋಗಳ ಮೂಲಕವೇ ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಸ್ಟಾರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡು ಅತಿ ಹೆಚ್ಚಿನ ಫಾಲೋವರ್ಸ್ಗಳನ್ನು ಹೊಂದಿರುವ ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಬಸವರಾಜ್ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ವರ್ಷ ಕಾವೇರಿ,
ಕಿಚ್ಚ ಸುದೀಪ್ ಅವರ ಸಿನಿ ಬದುಕಿಗೆ ಮಹತ್ತರವಾದ ಬ್ರೇಕ್ ನೀಡಿದಂತಹ ಹುಚ್ಚ ಸಿನಿಮಾ ನಟಿ ರೇಖಾ, ಅಗ್ನಿಸಾಕ್ಷಿ ಧಾರಾವಾಹಿಯ ಸಹನಟ ರಾಜೇಶ್ ಧ್ರುವ, ಹಾಗೂ ಶನಿ ಸೀರಿಯಲ್ ಮುಖಾಂತರ ಪ್ರಸಿದ್ಧಿ ಪಡೆದಿದ್ದಂತಹ ನಟ ಸುನಿಲ್ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಫೈನಲ್ ಆಗಿದೆ.
Kannada Bigg Boss Season 10 Contestant List Goes Viral on Social Media
Follow us On
Google News |