KGF Chapter 2 : ‘ಕೆಜಿಎಫ್-2’ ಚಿತ್ರತಂಡಕ್ಕೆ ಶುಭಾಶಯ ಕೋರಿದ ಅಲ್ಲು ಅರ್ಜುನ್.. ವೈರಲ್ ಟ್ವೀಟ್

Allu Arjun Praises Kgf2 Team : KGF ತಂಡವನ್ನು ಹೊಗಳಿದ ಅಲ್ಲು ಅರ್ಜುನ್ ಟ್ವೀಟ್ ಮಾಡಿ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.

Bengaluru, Karnataka, India
Edited By: Satish Raj Goravigere

KGF ತಂಡವನ್ನು ಹೊಗಳಿದ ಅಲ್ಲು ಅರ್ಜುನ್ : ಇದೀಗ ಎಲ್ಲಿ ನೋಡಿದರೂ ಕೆಜಿಎಫ್-2 ಹವಾ… ಬಿಡುಗಡೆಗೊಂಡ ಕೆಲವೇ ಕೆಲವು ದಿನಗಳಲ್ಲಿ ಚಿತ್ರವು ಉತ್ತರದಿಂದ ದಕ್ಷಿಣಕ್ಕೆ ಕಲೆಕ್ಷನ್ ನಲ್ಲಿ ದಾಖಲೆ ಸೃಷ್ಟಿಸಿದೆ.

ಚಿತ್ರವು ಈಗಾಗಲೇ ಬ್ರೇಕ್ ಈವನ್ ಅನ್ನು ಪೂರ್ಣಗೊಳಿಸಿದೆ. ಹಿಂದಿಯಲ್ಲಿ ಈ ಚಿತ್ರ ಕಾಸಿನ ಮಳೆಯನ್ನೇ ದೋಚಿದೆ. ಇದುವರೆಗೆ ಬಾಲಿವುಡ್‌ನಲ್ಲಿ 250 ಕೋಟಿ ರೂಪಾಯಿ ಗಳಿಸುವ ಮೂಲಕ ಬಾಲಿವುಡ್ ಖಾನ್ ಮತ್ತು ಕಪೂರ್ ಅವರ ಚಿತ್ರಗಳನ್ನು ಹಿಂದಿಕ್ಕಿದೆ.

Allu Arjun Praises Kgf2 Team in his Twitter

ಪ್ರಶಾಂತ್ ನೀಲ್ ಟೇಕಿಂಗ್ ಮತ್ತು ವಿಷನ್ ಗೆ ಚಿತ್ರರಂಗದ ಗಣ್ಯರು ಸಹ ವಾವ್ ಎಂದಿದ್ದಾರೆ. ಯಶ್ ಅಭಿನಯಕ್ಕೆ ಪ್ರೇಕ್ಷಕರು ಪಿಧಾ ಆಗಿದ್ದಾರೆ. ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಹಲವು ಟಾಲಿವುಡ್ ಸೆಲೆಬ್ರಿಟಿಗಳು ಚಿತ್ರತಂಡಕ್ಕೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಇತ್ತೀಚೆಗೆ ಚಿತ್ರ ವೀಕ್ಷಿಸಿದ ಅಲ್ಲು ಅರ್ಜುನ್ ಸಹ ಟ್ವಿಟರ್ ನಲ್ಲಿ ಚಿತ್ರತಂಡವನ್ನು ಹೊಗಳಿದ್ದಾರೆ.

KGF Chapter 2 : 'ಕೆಜಿಎಫ್-2' ಚಿತ್ರತಂಡಕ್ಕೆ ಶುಭಾಶಯ ಕೋರಿದ ಅಲ್ಲು ಅರ್ಜುನ್.. ವೈರಲ್ ಟ್ವೀಟ್

‘ಕೆಜಿಎಫ್-2 ಚಿತ್ರತಂಡಕ್ಕೆ ಅಭಿನಂದನೆಗಳು. ಈ ಚಿತ್ರದಲ್ಲಿ ಯಶ್ ಅವರ ಅಭಿನಯ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ತಂಡನ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯ ಸಹ ಅದ್ಭುತವಾಗಿದೆ. ಚಿತ್ರದ ಹಿನ್ನೆಲೆ ಸಂಗೀತ ಅತ್ಯುತ್ತಮವಾಗಿದೆ.

ಸಿನಿಮಾಟೋಗ್ರಾಫರ್ ಭುವನಾ ಗೌಡ ದೃಶ್ಯಗಳು ಅದ್ಭುತವಾಗಿವೆ. ಈ ಚಿತ್ರಕ್ಕೆ ಕೆಲಸ ಮಾಡಿದ ಎಲ್ಲಾ ತಂತ್ರಜ್ಞರಿಗೆ ನನ್ನ ನಮನಗಳನ್ನು ಸಲ್ಲಿಸಲು ಬಯಸುತ್ತೇನೆ. ನಾನು ಪ್ರಶಾಂತ್ ನೀಲ್ ವಿಷನ್ ಮತ್ತು ಕನ್ವಿಕ್ಷನ್ ಅನ್ನು ತುಂಬಾ ಇಷ್ಟಪಡುತ್ತೇನೆ. ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಬನ್ನಿ ಟ್ವೀಟ್ ಮಾಡಿದ್ದಾರೆ. ಸದ್ಯ ಬನ್ನಿ ‘ಪುಷ್ಪ-2’ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದ್ದಾರೆ.

Allu Arjun Praises Kgf2 Team in his Twitter

KGF 2 Movie Trailer

Allu Arjun Praises Kgf2 Team – Web Story

KGF Chapter 2 : ‘ಕೆಜಿಎಫ್-2’ ಚಿತ್ರತಂಡಕ್ಕೆ ಶುಭಾಶಯ ಕೋರಿದ ಅಲ್ಲು ಅರ್ಜುನ್.. ವೈರಲ್ ಟ್ವೀಟ್