Sandalwood News

‘ಪುಷ್ಪಾ 2’ ಸಿನಿಮಾದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ, ಚಿತ್ರದಿಂದ ಸಮಂತಾಗೆ ಗೇಟ್ ಪಾಸ್! ಐಟಂ ಸಾಂಗ್ ಗೆ ಹೊಸ ನಟಿ ಆಯ್ಕೆ

Pushpa 2 Update : ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರಕ್ಕೆ ಸಂಬಂಧಿಸಿದ ದೊಡ್ಡ ಅಪ್‌ಡೇಟ್‌ ಹೊರಬಿದ್ದಿದೆ. ಈ ಬಾರಿ ಸಮಂತಾ (Actress Samantha) ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಆದರೆ ಬಾಲಿವುಡ್‌ನ ಖ್ಯಾತ ನಟಿ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಸಮಂತಾ ರುತ್ ಪ್ರಭು ಬದಲಿಗೆ ಬಾಲಿವುಡ್ ನ ಖ್ಯಾತ ನಟಿ ಅಲ್ಲು ಅರ್ಜುನ್ ಜೊತೆ ಐಟಂ ಸಾಂಗ್ ನಲ್ಲಿ ಡ್ಯಾನ್ಸ್ ಮಾಡಲಿದ್ದಾರೆ. ಈ ನಟಿ ಬೇರೆ ಯಾರೂ ಅಲ್ಲ ಊರ್ವಶಿ ರೌಟೇಲಾ (Actress Urvashi Rautela). ‘ಪುಷ್ಪ 2’ ಜನಪ್ರಿಯತೆಯನ್ನು ಪರಿಗಣಿಸಿ ಊರ್ವಶಿ ಮೂರು ನಿಮಿಷದ ಐಟಂ ಸಾಂಗ್ ಗೆ ಕೋಟ್ಯಂತರ ರೂಪಾಯಿ ಸಂಭಾವನೆ ಕೇಳುತ್ತಿದ್ದಾರಂತೆ.

Big Update From Pushpa 2 Cinema Team, Actress Urvashi Rautela For Item Song

ಚಿರಂಜೀವಿ ಅಭಿನಯದ ತೆಲುಗು ಚಿತ್ರ ‘ವಾಲ್ಟರ್ ವೀರಯ್ಯ’ದಲ್ಲಿ ಐಟಂ ಸಾಂಗ್ ಮಾಡಿದ ನಂತರ, ಈಗ ‘ಪುಷ್ಪ 2’ ನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ಊರ್ವಶಿ ರೌಟೇಲಾ ಸಂಭಾವನೆ ಕೇಳಿ ಸಿನಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾಗೆ ತೆಗೆದುಕೊಂಡಿದ್ದ ಸಂಭಾವನೆ ಎಷ್ಟು? ಪ್ರಸ್ತುತ ಈಗ ಪಡೀತಿರುವ ಸಂಭಾವನೆ ಎಷ್ಟು ಗೊತ್ತಾ?

ಹೌದು, ಕೋಟಿ ಕೋಟಿ ಬೇಡಿಕೆಯಿಟ್ಟ ನಟಿ, ಕಡಿಮೆ ಸಂಭಾವನೆಗೆ ಒಪ್ಪಲೇ ಇಲ್ಲವಂತೆ.. 3 ನಿಮಿಷದ ಈ ಹಾಡಿಗೆ ಸುಮಾರು ಎರಡರಿಂದ ಮೂರು ಕೋಟಿ ಸಂಭಾವನೆ ಕೇಳಿರುವ ಬಗ್ಗೆ ವರದಿಯಾಗಿದೆ. ಆದರೆ, ಈ ಚಿತ್ರದಲ್ಲಿ ಊರ್ವಶಿ ಐಟಂ ಸಾಂಗ್ ಮಾಡುತ್ತಾರೋ ಇಲ್ಲವೋ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. ಅವರ ಸಂಭಾವನೆಯ ಬಗ್ಗೆಯೂ ಯಾವುದೇ ಅಧಿಕೃತ ಹೇಳಿಕೆ ಇಲ್ಲ.

Do You Know The Actress Samantha Remuneration for the song of Pushpa Movie2021 ರಲ್ಲಿ ಬಿಡುಗಡೆಯಾದ ‘ಪುಷ್ಪ: ಭಾಗ 1’ ಚಿತ್ರದಲ್ಲಿಸಮಂತಾ ರುತ್ ಪ್ರಭು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. ವರದಿಗಳನ್ನು ನಂಬುವುದಾದರೆ, ಈ 3 ನಿಮಿಷದ ಹಾಡಿಗೆ ಅವರು 5 ಕೋಟಿ ರೂ. ಸಂಭಾವನೆ ಪಡೆದುಕೊಂಡರಂತೆ.

ಅವರ ‘ಊ ಅಂಟವಾ..’ ಹಾಡು ಎಲ್ಲರಿಗೂ ಹುಚ್ಚು ಹಿಡಿಸಿತ್ತು. ‘ಪುಷ್ಪ’ಕ್ಕಿಂತ ಸಮಂತಾ ಮತ್ತು ಅಲ್ಲು ಜೋಡಿಯ ಐಟಂ ಸಾಂಗ್ ಹೆಚ್ಚು ಹಿಟ್ ಆಗಿತ್ತು.

Big Update From Pushpa 2 Cinema Team, Actress Urvashi Rautela For Item Song

Our Whatsapp Channel is Live Now 👇

Whatsapp Channel

Related Stories