ತೆಲುಗಿನ ಅರುಂಧತಿ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಎಂದ ಪ್ರೇಮ! ಅವಕಾಶ ಕೈ ತಪ್ಪಿ ಹೋಗಲು ಕಾರಣವೇನು ಗೊತ್ತಾ?

ಸಂದರ್ಶನ ಒಂದರಲ್ಲಿ ಮಾತನಾಡಿದಂತಹ ನಟಿ ಪ್ರೇಮ ಅರುಂಧತಿ ಸಿನಿಮಾದ ನಾಯಕನಟಿ ನಾನಾಗಬೇಕಿತ್ತು. ಆದರೆ ಆ ಅದೃಷ್ಟ ಕರಾವಳಿ ಚೆಲುವೆಯ ಪಾಲಾಯಿತು ಎಂದಿದ್ದಾರೆ.

Bengaluru, Karnataka, India
Edited By: Satish Raj Goravigere

ಸ್ನೇಹಿತರೆ, ಬಾಹುಬಲಿ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬೆನ್ನಲ್ಲೇ ತೆಲುಗಿನ ಅರುಂಧತಿ ಸಿನಿಮಾವು ಬ್ಲಾಕ್ಬಸ್ಟರ್ ಹಿಟ್ ಎಂಬ ಪಟ್ಟಿಗೆ ಸೇರಿಕೊಂಡಿತು. ಆಗಿನ ಟಾಲಿವುಡ್ (Tollywood) ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಅರುಂಧತಿ ಸಿನಿಮಾದ (Arundathi Cinema) ನಾಯಕನಟಿ ಅನುಷ್ಕಾ ಶೆಟ್ಟಿ (Anushka Shetty) ಅವರಿಗೆ ಬಹುದೊಡ್ಡ ಅಭಿಮಾನಿಗಳ ಸೃಷ್ಟಿಯಾದರು.

ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದಂತಹ ನಟಿ ಪ್ರೇಮ (Kannada Actress Prema) ಅರುಂಧತಿ ಸಿನಿಮಾದ ನಾಯಕನಟಿ ನಾನಾಗಬೇಕಿತ್ತು. ಆದರೆ ಆ ಅದೃಷ್ಟ ಕರಾವಳಿ ಚೆಲುವೆಯ ಪಾಲಾಯಿತು ಎಂದಿದ್ದಾರೆ.

Do you know the reason why Actress Prema missed the opportunity of Acting in Telugu Arundhati movie

ಅಷ್ಟಕ್ಕೂ ಈ ಒಂದು ಅವಕಾಶವನ್ನು ನಟಿ ಪ್ರೇಮ ಕೈಚಲ್ಲಿದ್ದು ಯಾಕೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಪೂರ್ಣವಾಗಿ ಓದಿ.

ಹಾರ್ಟ್ ಅಟ್ಯಾಕ್ ಆದಾಗ ಯಾರು ಮೂಸಿ ನೋಡಲಿಲ್ಲ, ನನ್ನ ಮದುವೆ ವಿಚಾರ ಮಾತಾಡೋಕೆ ಊರ್ ತುಂಬಾ ಜನರಿದ್ದಾರೆ; ಸಿಟ್ಟಾದ ವಿನೋದ್ ರಾಜ್

ಹೌದು ಗೆಳೆಯರೇ ತೆಲುಗು ಸಂದರ್ಶನ (Telugu Interview) ಒಂದರಲ್ಲಿ ಮಾತನಾಡಿದಂತಹ ಪ್ರೇಮ ಅವರು ಸಿನಿ ಬದುಕಿನ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟಿ ಪ್ರೇಮ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ಆರಂಭಿಕ ದಿನದಲ್ಲಿ ಒಂದರ ಮೇಲೊಂದುರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿ ಇದ್ದಂತಹ ನಟಿ.

ಇಂತಹ ನಟಿಗೆ ಅನಾರೋಗ್ಯ ಸಮಸ್ಯೆ ಬಾದಿಸಿದ ಕಾರಣ ಸಿನಿಮಾ ರಂಗದಿಂದ ಬ್ರೇಕ್ ಪಡೆದು ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದರು. ಚಿತ್ರರಂಗದಲ್ಲಿ (Cinema Industry) ಸಿಕ್ಕ ಒಳ್ಳೆಯ ಅವಕಾಶಗಳು ಇಷ್ಟವಾದ ಪಾತ್ರಗಳು ಎಲ್ಲವನ್ನು ಪ್ರೇಮ ಅವರು ಕಳೆದುಕೊಳ್ಳಬೇಕಾಗಿತ್ತು.

ಹೀಗೆ ಸಂದರ್ಶನ ಒಂದರಲ್ಲಿ ಅರುಂಧತಿ ಸಿನಿಮಾದ ಕುರಿತು ಬೇಸರ ವ್ಯಕ್ತಪಡಿಸಿದ ಪ್ರೇಮ ಅವರು “ಹೌದು ಅರುಂಧತಿ ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು, ಡೇಟ್ಸ್ ಇಲ್ಲದ ಕಾರಣ ನನಗೆ ನಟಿಸಲು ಸಾಧ್ಯವಾಗಲಿಲ್ಲ” ಎಂದರು.

Kannada Actress Prema Viral Comment on Arundathi Movie

ಆ ಸಮಯದಲ್ಲಿ ಯಾವುದೋ ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದೆ. ಒಟ್ಟಿಗೆ ಹೆಚ್ಚು ಡೇಟ್ಸ್ ಕೇಳಿದರು ಆದರೆ ಅಷ್ಟು ಸುದೀರ್ಘವಾದ ಡೇಟ್ಸ್ ಇಲ್ಲ ಸರ್ ಎಂದು ನಿರ್ದೇಶಕ ಕೋಡಿ ರಾಮಕೃಷ್ಣ ಅವರಿಗೆ ಹೇಳಿದ್ದೆ ಎಂದರು.

ನಂತರ ಅವರು ಅನುಷ್ಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಂಡರು. ಆಕೆ ಕೂಡ ಮಂಗಳೂರಿನ ಹುಡುಗಿ ಅವರ ಅಭಿನಯ ನೋಡಿ ನಾನು ಈ ಸಿನಿಮಾದ ನಾಯಕ ನಟಿ ಆಗಬೇಕಿತ್ತು, ಚಿತ್ರಕಥೆ ಬಹಳ ಚೆನ್ನಾಗಿದೆ ಅವಕಾಶವನ್ನು ಕಳೆದುಕೊಂಡೆ ಎಂದು ಬೇಸರವಾಯಿತು.

ಅತಿ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡ ರಘುವೀರ್ ಮಗಳು ಈಗ ಹೇಗಿದ್ದಾಳೆ.. ಎಲ್ಲಿದ್ದಾಳೆ ಗೊತ್ತಾ?

ಆದರೆ ನನಗೆ ಸಿಗುವ ಪಾತ್ರಕ್ಕೆ ನಾನು ನ್ಯಾಯ ಒದಗಿಸುತ್ತೇನೆ, ಅನುಷ್ಕಾ ಶೆಟ್ಟಿಗೆ ಅದೃಷ್ಟ ಇತ್ತು ಆ ಸಿನಿಮಾ ಆಕೆಗೆ ಸಿಕ್ತು. ನಾನು ಕನ್ನಡ ತೆಲುಗಿನಲ್ಲಿ ಸಾಕಷ್ಟು ಒಳ್ಳೆ ಸಿನಿಮಾಗಳನ್ನು ಮಾಡಿದ್ದೇನೆ. ಅದರಲ್ಲೂ ನಮ್ಮೂರ ಮಂದಾರ ಹೂವೆ ಸಿನಿಮಾದ ಸಕ್ಸಸ್ ನನಗೆ ಈಗಲೂ ತೃಪ್ತಿಯನ್ನು ತಂದು ಕೊಡುತ್ತದೆ” ಎಂದು ಪ್ರೇಮ ಅರುಂಧತಿ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Actress Prema

ಅಷ್ಟೇ ಅಲ್ಲದೆ ಕನ್ನಡ ಹಾಗೂ ತೆಲುಗು ಎರಡು ಇಂಡಸ್ಟ್ರಿಯನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಹಾಗಾಗಿ ನಾನು ಸಿಕ್ಕಂತಹ ಅವಕಾಶಗಳನ್ನು ಸಮಯದ ಅಭಾವದಿಂದ ಕೈ ಚೆಲ್ಲಿದ್ದೇನೆ. ಶಿವಣ್ಣ ಹಾಗೂ ವಿಷ್ಣು ಸರ್ ಜೊತೆ ನಟಿಸಿದ್ದನ್ನು ಎಂದಿಗೂ ಮರೆಯುವುದಿಲ್ಲ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಪ್ರೇಮ ಹೇಳಿದ್ದಾರೆ.

Do you know the reason why Actress Prema missed the opportunity of Acting in Telugu Arundhati movie