ಅತಿ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡ ರಘುವೀರ್ ಮಗಳು ಈಗ ಹೇಗಿದ್ದಾಳೆ.. ಎಲ್ಲಿದ್ದಾಳೆ ಗೊತ್ತಾ?

ರಘುವೀರ್ ಹಾಗೂ ಸಿಂಧೂರವರ ಮದುವೆ ಕುರಿತು ನಿಮ್ಮೆಲ್ಲರಿಗೂ ಮಾಹಿತಿ ತಿಳಿದೆ ಇರುತ್ತದೆ. ಹೌದು, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ತೆರೆಯ ಮೇಲೆ ಬಹು ದೊಡ್ಡ ಹೆಸರು ಮಾಡಿದಂತಹ ರಘುವೀರ್ ಹಾಗೂ ಸಿಂಧು ಜೋಡಿ...

ಸ್ನೇಹಿತರೆ ಅದೊಂದು ಕಾಲದಲ್ಲಿ ಬಹು ದೊಡ್ಡ ಚರ್ಚೆಗೆ ಗುರಿಯಾಗಿದ್ದಂತಹ ರಘುವೀರ್ (Actor Raghuveer) ಹಾಗೂ ಸಿಂಧೂರವರ (Sindhu Raghuveer) ಮದುವೆ ಕುರಿತು ನಿಮ್ಮೆಲ್ಲರಿಗೂ ಮಾಹಿತಿ ತಿಳಿದೆ ಇರುತ್ತದೆ.

ಹೌದು, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ತೆರೆಯ ಮೇಲೆ ಬಹು ದೊಡ್ಡ ಹೆಸರು ಮಾಡಿದಂತಹ ರಘುವೀರ್ ಹಾಗೂ ಸಿಂಧು ಜೋಡಿ, ನಿಜ ಜೀವನದಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂಬ ಹಂಬಲದಿಂದ ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಕೂಡ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮನೆಯನ್ನು ಬಿಟ್ಟು ಬಂದು ಮದುವೆಯಾದರು.

ಐಶ್ವರ್ಯ ರೈ ಅವರ ಸ್ಥಾನವನ್ನು ತುಂಬಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುತ್ತಿರುವ ಕನ್ನಡದ ಸ್ಟಾರ್ ನಟಿ ಯಾರು ಗೊತ್ತಾ?

ಅತಿ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡ ರಘುವೀರ್ ಮಗಳು ಈಗ ಹೇಗಿದ್ದಾಳೆ.. ಎಲ್ಲಿದ್ದಾಳೆ ಗೊತ್ತಾ? - Kannada News

ಆದರೆ ಮದುವೆಯಾದ ಮೇಲೆ ಈ ಇಬ್ಬರಿಗೂ ಬಂದಂತಹ ಕಷ್ಟಗಳ ಸೆರೆಮಾಲೆಯಲ್ಲಿ ಸಿಲುಕಿಕೊಂಡು ಎದ್ದೇಳಲು ಆಗದೆ ಬಾರದ ಲೋಕಕ್ಕೆ ಮರಳಿಬಿಟ್ಟರು ಎಂದರೆ ತಪ್ಪಾಗಲಾರದು. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾಗಿ ಬೆಳೆದಂತಹ ಮಗಳು (Actor Raghuveer Daughter) ಈಗ ಹೇಗಿದ್ದಾಳೆ? ಎಲ್ಲಿದ್ದಾಳೆ? ಅಪ್ಪ ಅಮ್ಮನಂತೆ ಸಿನಿ ಬದುಕಿಗೆ ಪ್ರವೇಶ ಮಾಡಲಿದ್ದಾರಾ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

ಹೌದು ಗೆಳೆಯರೇ ರಘುವೀರ್ ೧೯೯೦ ರಲ್ಲಿ ಅಜಯ್ ವಿಜಯ್ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದರು. ಕೇವಲ ನಟನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ ಗುರುತಿಸಿಕೊಂಡಂತಹ ರಘುವೀರ್ ಆಗರ್ಭ ಶ್ರೀಮಂತನ ಮಗನಾಗಿದ್ದ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಆನಂತರ 1993ರಲ್ಲಿ ನಟಿ ಸಿಂಧು ಅವರೊಂದಿಗೆ ಚೈತ್ರದ ಪ್ರೇಮಾಂಜಲಿ ಸಿನಿಮಾ ಮಾಡಿದರು..

ಮೊಗ್ಗಿನ ಜಡೆಯಲ್ಲಿ ಮಿಂಚುತ್ತಿರುವ ಕನ್ನಡದ ಈ ಸ್ಟಾರ್ ನಟಿ ಯಾರೆಂದು ಹೇಳಿ ನೋಡೋಣ? ಇವರು ಆಕ್ಟಿಂಗ್ ನಲ್ಲಿಯೂ ಸೈ, ಆಂಕರಿಂಗ್ ನಲ್ಲಿಯೂ ಸೈ!

 Actor Raghuveer daughter

ಈ ಒಂದು ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂಬುದನ್ನು ಯಾರು ಊಹಿಸಿಯು ಇರಲಿಲ್ಲ, ಆನಂತರ ಶೃಂಗಾರ ಕಾವ್ಯ, ಕಾವೇರಿ, ತುಂಗಭದ್ರಾ, ಮೌನದ ಹೋರಾಟ ಹೀಗೆ ಮುಂತಾದ ಯಶಸ್ವಿ ಸಿನಿಮಾಗಳನ್ನು ನೀಡಿ ಕನ್ನಡದ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದರು.

ಅದರಂತೆ 1995 ರಲ್ಲಿ ತಮ್ಮ ಸಿನಿಮಾದ ನಾಯಕ ನಟಿಯಾದಂತಹ ಸಿಂಧು ಅವರನ್ನು ಪ್ರೀತಿಸಿ ಮನೆಯವರು ಒಪ್ಪದೇ ಇದ್ದರೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಲ್ಲವನ್ನು ಭೇದಿಸಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖವಾಗಿ ಜೀವನ ನಡೆಸುತ್ತಿದ್ದರು.

ಆದರೆ ಕಾಲ ಕ್ರಮೇಣ ಸಿನಿಮಾಗಳ ಅವಕಾಶ ಕೈತಪ್ಪಿ ಹೋದಾಗ ಉತ್ತುಂಗದ ಶಿಖರದಲ್ಲಿದ್ದಂತಹ ನಟಿ ಸಿಂದು ಸಣ್ಣಪುಟ್ಟ ಸೀರಿಯಲ್ ಗಳ ಅವಕಾಶಕ್ಕಾಗಿ ಪರದಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿಂಧೂ ಅವರು ಅನಾರೋಗ್ಯ ಪೀಡಿತರಾಗುತ್ತಾರೆ. ಮಗು ಶ್ರೇಯಾ ಜನಿಸಿದ ನಂತರ ಇವರ ಆರೋಗ್ಯ ಸಮಸ್ಯೆ ಇನ್ನಷ್ಟು ಕ್ಷೀಣಿಸಿ ಬಾರದ ಲೋಕಕ್ಕೆ ಮರಳಿದರು. ಆನಂತರ ರಘುವೀರ್ ಹಲವಾರು ವರ್ಷಗಳ ಕಾಲ ತಮ್ಮ ಮಗಳನ್ನು ನೋಡಿಕೊಂಡು ಒಬ್ಬಂಟಿಯಾಗಿ ಜೀವನ ಕಳೆಯುತ್ತಾರೆ.

 Actor Raghuveer daughter with Her Husband

ಹೀಗೆ ಶ್ರೇಯಾಳನ್ನು ಅಜ್ಜಿಯ ಮನೆಯಲ್ಲಿ ಬಿಟ್ಟು ಗೌರಿ ಎಂಬ ತಮ್ಮ ಸಂಬಂಧಿಕರೊಂದಿಗೆ ರಘು ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಹಾಗೂ ಇವರು ಕೂಡ ಅನಾರೋಗ್ಯದಿಂದಾಗಿ 51 ವರ್ಷಕ್ಕೆ ಬಾರದ ಲೋಕಕ್ಕೆ ಮರಳಿದರು.

ಅತಿ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾಗಿ ಅಜ್ಜಿ ತಾತನ ಆಶ್ರಯದಲ್ಲಿ ಬೆಳೆದಂತಹ ಶ್ರೇಯಾ ಅವರು ಇತ್ತೀಚಿನ ಕೆಲವು ದಿನಗಳ ಹಿಂದೆ ಯುವ ನಿರ್ದೇಶಕನೆಂದೇ ಕರೆಯಲ್ಪಡುವ ಅಶ್ವಿನ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Do you know where Kannada Actor Raghuveer daughter is now

Follow us On

FaceBook Google News

Do you know where Kannada Actor Raghuveer daughter is now

Read More News Today