ಕೆಜಿಎಫ್ ಅಲ್ಲ, ಕಾಂತಾರ ಅಲ್ಲ.. ಬಾಹುಬಲಿಯಂತೂ ಅಲ್ವೇ ಅಲ್ಲ, ಮೊದಲ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಯಾವುದು ಗೊತ್ತಾ?
ಅತಿ ಕಡಿಮೆ ಬಜೆಟ್ನಲ್ಲಿ ತಯಾರಾದ ಪೌರಾಣಿಕ ಕಥಾ ಹಂದರ ಹೊಂದಿದ್ದಂತಹ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಕೊಳ್ಳೆ ಹೊಡೆಯುವುದರ ಜೊತೆಗೆ ಭಾರತೀಯ ಚಿತ್ರರಂಗ ಮಹಿಷಾಸುರ ಮರ್ದಿನಿ ಸಿನಿಮಾವನ್ನು ಭಾರತದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂದು ಪರಿಗಣಿಸಿದೆ.
ಸ್ನೇಹಿತರೆ, ಕಳೆದ ಕೆಲವು ವರ್ಷಗಳಿಂದ ಪ್ಯಾನ್ ಇಂಡಿಯಾ ಸಿನಿಮಾದ ಹಬ್ಬ ದೇಶದಾದ್ಯಂತ ದೊಡ್ಡ ಮಟ್ಟದಾಗಿದೆ. ಯಾವುದೇ ಸಿನಿಮಾ ಮಾಡಿದರು ಅದು ಪಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಕಲಾವಿದರ ಚಿಂತನೆ ಆಗಿಬಿಟ್ಟಿದೆ.
ಅದರಂತೆ ಅದಾಗಲೇ ಸದ್ದು ಮಾಡಿದ ಬಾಹುಬಲಿ ಸೀರೀಸ್, ಕೆಜಿಎಫ್ ಸೀರೀಸ್ ಮತ್ತು ಕಾಂತಾರ ಸಿನಿಮಾಗಳು ಸೆನ್ಸೇಶನ್ ಕ್ರಿಯೆಟ್ ಮಾಡಿದೆ. ಆದರೆ ಅಸಲಿಗೆ ಪ್ಯಾನ್ ಇಂಡಿಯಾ ಎಂಬ ಬ್ರ್ಯಾಂಡ್ ಸೃಷ್ಟಿ ಮಾಡಿದ ಕನ್ನಡದ (First Kannada Pan India Cinema) ಮೊದಲ ಚಿತ್ರ ಯಾವುದು?
ಯಾವ ನಟನ ಅಭಿನಯದ್ದು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್ನಲ್ಲಿ ತಯಾರಾದ ಕೆಜಿಎಫ್ ಚಾಪ್ಟರ್ 1 ಚಿತ್ರ ಬಿಡುಗಡೆಯಾಗುವವರೆಗೂ ಫ್ಯಾನ್ ಇಂಡಿಯಾ ಎಂಬ ಪದವನ್ನು ಕನ್ನಡಿಗರು ಎಲ್ಲಿಯೂ ಕೇಳಿರಲಿಲ್ಲ.
ಆದರೆ ಈ ಚಿತ್ರ ಜಗತ್ತಿನಾದ್ಯಂತ ಸದ್ದು ಮಾಡುವ ಮೂಲಕ ಫ್ಯಾನ್ ಇಂಡಿಯಾದ ಕ್ರೇಜ್ ಎಷ್ಟರಮಟ್ಟಿಗೆ ಇರುತ್ತದೆ ಎಂಬುದನ್ನು ತೋರಿಸಿಕೊಟ್ಟಿವೆ. ಅದೇ ಹಾದಿಯಲ್ಲಿ ಬಾಹುಬಲಿ, ಪುಷ್ಪ, ಸೈರಾ, ಆರ್ ಆರ್ ಆರ್, ಚಾರ್ಲಿ ತ್ರಿಪಲ್ ಸೆವೆನ್ ಸೇರಿದಂತೆ ಸಾಕಷ್ಟು ಚಿತ್ರ ಕಥೆಗಳು ಪ್ಯಾನ್ ಇಂಡಿಯಾ ಲಿಸ್ಟಿಗೆ ಸೇರ್ಪಡೆಯಾಗಿವೆ.
ಆದರೆ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಯಾವುದೆಂಬುದನ್ನು ನೋಡುವುದಾದರೆ ಅದು ಮತ್ಯಾವುದೂ ಅಲ್ಲ ಕನ್ನಡದ ಸರ್ವ ಶ್ರೇಷ್ಠ ನಟ ಡಾ. ರಾಜ್ ಕುಮಾರ್ ಅಭಿನಯದ 1959ರಲ್ಲಿ ತೆರೆಕಂಡ ಮಹಿಶಾಸುರ ಮರ್ದಿನಿ ಸಿನಿಮಾ.
ಹೌದು ಗೆಳೆಯರೇ ಅಣ್ಣಾವ್ರ ಹಲವಾರು ದಾಖಲೆಗಳಲ್ಲಿ ಇದು ಒಂದು. ಮಹಿಷಾಸುರ ಮರ್ದಿನಿ ಸಿನಿಮಾ ಬಿಡುಗಡೆಯಾಗಿ ಕನ್ನಡದಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡ ನಂತರ ಎಂಟು ಭಾಷೆಗಳಿಗೆ ಡಬ್ ಮಾಡಲಾಗಿತ್ತು.
ತಾಯಿ ಚಾಮುಂಡೇಶ್ವರಿಯ ಪಾತ್ರದಲ್ಲಿ ಜಯಲಲಿತಾ ಹಾಗೂ ಮಹಿಷಾಸುರನ ಪಾತ್ರದಲ್ಲಿ ಡಾಕ್ಟರ್ ರಾಜಕುಮಾರ್ ಅಬ್ಬರಿಸಿ ಬೊಬ್ಬೆರಿದಿದ್ದರು. ನಟ ಕೆ ಎಸ್ ಅಶ್ವತ್ ನಾರದನಾಗಿ ಸಾಹುಕಾರ್ ಜಾನಕಿ ಎಂಬ ನಟಿ ಮಹೀಶನ ಪತ್ನಿಯ ಪಾತ್ರದಲ್ಲಿ ಅಭಿನಯಿಸಿದರು.
ಇನ್ನು ವಿಶೇಷವೆಂದರೆ ಡಾಕ್ಟರ್ ರಾಜಕುಮಾರ್ ಪ್ರಪ್ರಥಮ ಬಾರಿಗೆ ಗಾಯಕನಾಗಿ ಸಿನಿಮಾ ರಂಗದಲ್ಲಿ ಪರಿಚಯಗೊಂಡದ್ದು ಇದೇ ಮಹಿಶಾಸುರ ಮರ್ದಿನಿ ಚಿತ್ರದ ಮೂಲಕ. ಆಗಿನ ಕಾಲದಲ್ಲಿ ಈ ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗಿತ್ತೆಂದರೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲೆಲ್ಲಾ ಡಾಕ್ಟರ್ ರಾಜಕುಮಾರ್ ಅವರ ಕಟೌಟ್ ಹಾಕಿಸಿ ಅಭಿಷೇಕ ಮಾಡಿದರಂತೆ.
ಅತಿ ಕಡಿಮೆ ಬಜೆಟ್ನಲ್ಲಿ ತಯಾರಾದ ಪೌರಾಣಿಕ ಕಥಾ ಹಂದರ ಹೊಂದಿದ್ದಂತಹ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಕೊಳ್ಳೆ ಹೊಡೆಯುವುದರ ಜೊತೆಗೆ ಭಾರತೀಯ ಚಿತ್ರರಂಗ ಮಹಿಷಾಸುರ ಮರ್ದಿನಿ ಸಿನಿಮಾವನ್ನು ಭಾರತದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂದು ಪರಿಗಣಿಸಿದೆ.
Do you know which is First Kannada Pan India movie