ನಟ ಶಂಕರ್ ನಾಗ್ (Actor Shankar Nag) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರೊಳಗೆ ಅಡಕವಾಗಿದ್ದ ಬಹುಮುಖ ಪ್ರತಿಭೆ ನಮ್ಮೆಲ್ಲರ ಕಣ್ಣೆದುರು ಬಾಸವಾಗುತ್ತದೆ. ನಿರ್ದೇಶಕನಾಗಿ ನಟನಾಗಿ ಬರಹಗಾರನಾಗಿ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ತಮ್ಮದೇ ಆದ ವಿಶೇಷ ಕೊಡುಗೆ ನೀಡಿದಂತಹ ಶಂಕರ್ ನಾಗ್ ಅವರ ವೃತ್ತಿ ಬದುಕಿಗೆ ಮಹತ್ತರವಾದ ಮೈಲುಗಲ್ಲನ್ನು ಹಾಕಿದಂತಹ ಸಿನಿಮಾ ಎಂದರೆ ಅದು ಗೀತಾ (Kannada Geetha Cinema).
ಈ ಸಿನಿಮಾ ಎಂದರೆ ಇಂದಿಗೂ ಕೂಡ ಶಂಕ್ರಣ್ಣನ ಅಭಿಮಾನಿಗಳು ಅವರ ಹೆಸರು ಕೇಳಿದ ತಕ್ಷಣ ಸಂತೋಷಕ್ಕೆ ಹಾಡು ಸಂತೋಷಕ್ಕೆ ಎಂದು ಗುನುಗುತ್ತಾರೆ.
ಒಂದೊಳ್ಳೆ ಪ್ರೇಮ ಕಥೆಯನ್ನು ಹೊಂದಿದ್ದ ಗೀತಾ ಸಿನಿಮಾ ಆಗಿನ ಕಾಲದಲ್ಲಿ ಸಿನಿಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದಿತ್ತು. ಇನ್ನು ಈ ಚಿತ್ರದ ಮೂಲಕ ಜನಪ್ರಿಯತೆ ಪಡೆದಂತಹ ನಟಿ ಗೀತಾ ಅಲಿಯಾಸ್ ಪದ್ಮಾವತಿ ರಾವ್ (Actress Padmavati Rao) ಈಗ ಹೇಗಿದ್ದಾರೆ? ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಯಾವ ವಿಷಯ ಏನೇ ಇರಲಿ, ಆ ಒಂದು ವಿಷಯಕ್ಕೆ ಸೈ ಎನಿಸಿಕೊಂಡಿದ್ದರಂತೆ ನಟಿ ಕಲ್ಪನಾ! ಅಷ್ಟಕ್ಕೂ ಆ ವಿಷಯ ಏನು ಗೊತ್ತಾ?
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ 1981 ರಲ್ಲಿ ತೆರೆಕಂಡ ಗೀತಾ ಸಿನಿಮಾ ಆಗಿನ ಯುವ ಪ್ರೇಮಿಗಳ ಮನಸ್ಸನ್ನು ಸೆಳೆದು ಹಾಡುಗಳ ಮೂಲಕ ಎಲ್ಲರ ಕಿವಿಯನ್ನು ಇಂಪು ಮಾಡಿತ್ತು. ಇನ್ನು ಈ ಚಿತ್ರದಲ್ಲಿ ನಾಯಕ ನಟಿಯಾಗಿ ಪದ್ಮಾವತಿ ರಾವ್ ಅಭಿನಯಿಸಿದರು.
ಈಕೆ ಮತ್ಯಾರು ಅಲ್ಲ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಅವರ ತಂಗಿ. ಶಂಕರಣ್ಣನವರ ಒಂದಾನೊಂದು ಕಾಲದಲ್ಲಿ ಎಂಬ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಈ ನಟಿ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಪ್ರಸಿದ್ಧಿ ಪಡೆದರು.
ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಂತಹ ಗೀತಾ ಸಿನಿಮಾ ಬೆಳ್ಳಿ ಪರದೆಯ ಮೇಲೆ ಮಿಂಚನ್ನು ಹರಿಸಿತು, ಒಂದೊಳ್ಳೆ ಕಥಾ ಅಂದರ ಹೊಂದಿದಂತಹ ಗೀತಾ ಸಿನಿಮಾವನ್ನು ಥಿಯೇಟರ್ನಲ್ಲಿ ಕಣ್ತುಂಬಿಕೊಂಡಂತಹ ಪ್ರೇಕ್ಷಕರು ಕಣ್ಣೀರಿನ ದಾರೆಯನ್ನೇ ಹರಿಸಿದರು.
ಹೀಗೆ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ನಟಿ ಪದ್ಮಾವತಿ ರಾವ್ ಎರಡು ಸಿನಿಮಾಗಳ ನಂತರ ಮಾಲ್ಗುಡಿ ಡೇಸ್ ಸೀರೀಸ್ನಲ್ಲಿ ಅಭಿನಯಿಸಿದರು.
ಯಾವುದೇ ಡೈಲಾಗ್ ಕೊಟ್ಟರು ಪಟಪಟ ಅಂತ ಹೇಳುತ್ತಿದ್ದ ನಟಿ ಮಂಜುಳಾ ಓದಿದ್ದು ಎಷ್ಟನೇ ತರಗತಿ ಗೊತ್ತೇ?
ಅದನ್ನು ಹೊರತುಪಡಿಸಿ ಯಾವುದೇ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲಿಲ್ಲ, ಬದಲಿಗೆ ಮರಾಠಿ ಹಾಗೂ ಹಿಂದಿ ಸಿನಿಮಾದಲ್ಲಿ ಪದ್ಮಾವತಿ ನೆಲೆ ಕಂಡುಕೊಂಡರು. ಹೀಗೆ ವೃತ್ತಿ ಬದುಕಿನಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಣ್ಣಂತಹ ಪದ್ಮಾವತಿ ರಾವ್ ಅವರು ವೈಯಕ್ತಿಕ ಬದುಕಿನ ನಿರ್ಧಾರವನ್ನು ಇಂದಿಗೂ ತತೆಗೆದುಕೊಂಡಿಲ್ಲ.
ಹೌದು ಗೆಳೆಯರೇ ಮೂಲವೊಂದರ ಮಾಹಿತಿಯ ಪ್ರಕಾರ ಪದ್ಮಾವತಿಯವರು ಮದುವೆಯಾಗದೆ ಒಬ್ಬಂಟಿಯಾಗಿ ಸಮಾಜ ಸೇವೆ ಹಾಗೂ ಮಾನವೀಯ ಕೆಲಸಗಳನ್ನು ಮಾಡುತ್ತ ಜೀವನ ನಡೆಸುತ್ತಿದ್ದಾರೆ.
Kannada Geetha Cinema Fame Actress Padmavati Rao Interesting Facts
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.