ಕಷ್ಟ ಎಂದು ನವರಸ ನಾಯಕ ಜಗ್ಗೇಶ್ ರವಿಚಂದ್ರನ್ ಮನೆ ಬಳಿ ಹೋಗಿ 200 ಕೇಳಿದ್ದಕ್ಕೆ, ರವಿಚಂದ್ರನ್ ಅದೆಂತ ಕೆಲಸ ಮಾಡಿದ್ರು ಗೊತ್ತಾ?
ಕನ್ನಡ ಚಿತ್ರರಂಗದ ನವರಸ ನಾಯಕ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕ ಮಾತ್ರವಲ್ಲದೆ ರಾಜಕೀಯದಲ್ಲಿ ಸಕ್ರಿಯರಾಗಿರುವ ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಸ್ನೇಹಿತರೆ, ನಮ್ಮ ಚಂದನವನದಲ್ಲಿ ಕಾಣಸಿಗುವಂತಹ ಸ್ನೇಹ ಪ್ರೀತಿ ಮಧುರವಾದ ಬಾಂಧವ್ಯಗಳು ಬೇರೆ ಯಾವ ಸಿನಿಮಾಗಳಲ್ಲಿಯೂ ನೋಡಲು ಸಾಧ್ಯವಿಲ್ಲ. ಒಬ್ಬ ನಟ ಕಷ್ಟದಲ್ಲಿದ್ದಾನೆ ಎಂದರೆ ಅದಕ್ಕೆ ಮತ್ತೊಬ್ಬ ನಟ ಪ್ರತಿಕ್ರಿಯಿಸುತ್ತಾರೆ.
ಸ್ನೇಹ ಎಂಬ ಪದಕ್ಕೆ ಸಾಕ್ಷಿ ಎಂಬಂತೆ ಘಟನೆ ಒಂದು ನಡೆದಿತ್ತು, ಅದುವೆ ನವರಸ ನಾಯಕ ಜಗ್ಗೇಶ್ ಅವರ ವಿಚಾರದಲ್ಲಿ. ಹೌದು ಗೆಳೆಯರೇ ಅದೊಂದು ದಿನ ನವರಸ ನಾಯಕ ಜಗ್ಗೇಶ್ (Kannada Actor Jaggesh) ಅವರದು ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇತ್ತು,
ಈ ಕಾರಣದಿಂದ ತಮ್ಮ ಆತ್ಮೀಯ ಗೆಳೆಯ ರವಿಚಂದ್ರನ್ (Actor Ravichandran) ಅವರನ್ನು ಸಾಲ ಕೇಳಿದರಂತೆ ಇದಕ್ಕೆ ರವಿ ಚಂದ್ರನ್ ಅದೆಂತ ಕೆಲಸ ಮಾಡಿದ್ದರು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲಿದ್ದೇವೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ಓದಿ.
ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ (Kannada Film Industry) ನವರಸ ನಾಯಕ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕ ಮಾತ್ರವಲ್ಲದೆ ರಾಜಕೀಯದಲ್ಲಿ ಸಕ್ರಿಯರಾಗಿರುವ ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಹೀಗಿರುವಾಗ ಜಗ್ಗೇಶ್ ತಮ್ಮ ರಂಗನಾಯಕ ಚಿತ್ರದ ಪ್ರಮೋಷನ್ ಸಮಯದಲ್ಲಿ ತಾವು ಜೀವನದಲ್ಲಿ ಅನುಭವಿಸಿದ ಕಷ್ಟದ ದಿನಗಳ ಕುರಿತು ಮೆಲುಕು ಹಾಕುತ್ತಾ ರವಿಚಂದ್ರನ್, ಅಂಬರೀಶ್, ಪ್ರಭಾಕರ್ ಅವರ ಕುರಿತು ಒಂದಿಷ್ಟು ನವಿರಾದ ಮಾತುಗಳನ್ನಾಡಿದ್ದಾರೆ.
ಹೌದು ಸ್ನೇಹಿತರೆ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟ ಜಗ್ಗೇಶ್ ತಮ್ಮ ಹಾಸ್ಯ ಪ್ರತಿಭೆಯ ಮೂಲಕ ಹಂತ ಹಂತವಾಗಿ ಕನ್ನಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಕಂಡಂತಹ ನಟ, ಆರಂಭಿಕ ದಿನಗಳಲ್ಲಿ ಇವರನ್ನು ಸಿನಿಮಾದಲ್ಲಿ ಹಾಕಿಕೊಳ್ಳಲು ಸಾಕಷ್ಟು ನಿರ್ದೇಶಕ ನಿರ್ಮಾಪಕರು ಹಿಂದೇಟಾಕುತ್ತಿದ್ದರು.
ಯಾವ ವಿಷಯ ಏನೇ ಇರಲಿ, ಆ ಒಂದು ವಿಷಯಕ್ಕೆ ಸೈ ಎನಿಸಿಕೊಂಡಿದ್ದರಂತೆ ನಟಿ ಕಲ್ಪನಾ! ಅಷ್ಟಕ್ಕೂ ಆ ವಿಷಯ ಏನು ಗೊತ್ತಾ?
ಅಂತಹ ಸಮಯದಲ್ಲಿ ತಮ್ಮ ಸಹಾಯಕ್ಕೆ ಬಂದಂತಹ ಕೆಲ ನಟರ ಹೆಸರನ್ನು ನಮೂದಿಸಿ ಜಗ್ಗೇಶ್ ಅವರ ಗುಣಗಾನ ಮಾಡಿದ್ದಾರೆ.”ನಾವು ಆಗಿನ ಕಾಲದಲ್ಲಿ 200 ರೂಪಾಯಿ ಸಂಪಾದಿಸಲು ಎಷ್ಟು ಕಷ್ಟ ಪಡುತ್ತಿದ್ದೆವು. ಮನೆಯಲ್ಲಿ ರೇಷನ್ಗೂ ಕಾಸಿಲ್ಲದೆ ಇದ್ದಾಗ ನಿರ್ಮಾಪಕರು ಕೂಡ ಕೆಲಸ ಮಾಡಿದರೂ, ಪೇಮೆಂಟ್ ಕೊಡುವುದರಲ್ಲಿ ಸಕ್ಕತ್ ಲೇಟ್ ಮಾಡುತ್ತಿದ್ದರು. ಒಮ್ಮೆ ಗಣೇಶ ಹಬ್ಬದ ದಿನ ಮನೆಯಲ್ಲಿ ಒಂದು ರೂಪಾಯಿ ಕಾಸಿಲ್ಲ, ರವಿಚಂದ್ರನ್ ಬಳಿ ಹೋಗಿ ನಾನು 200 ರುಪಾಯಿ ಕೇಳಿದೆ ಎಂಬುದಾಗಿ ತಿಳಿಸಿದ್ದಾರೆ.
ರವಿಚಂದ್ರನ್ ಅವರು ತಮ್ಮ ಮ್ಯಾನೇಜರ್ ಬಳಿ ಈತನಿಗೆ 500 ರೂಪಾಯಿ ಕೊಡಪ್ಪಾ” ಎಂದು ಹೇಳಿದರು.. ಎನ್ನುತ್ತ ಜಗಣ್ಣ ತಮ್ಮ ಕಷ್ಟದ ದಿನಗಳನ್ನು ನೆನೆದು ರಂಗನಾಯಕ ಸಿನಿಮಾದ ಪ್ರಮೋಷನ್ ವೇಳೆ ಭಾವಿಕರಾದರು.
ಅಲ್ಲದೆ ತಾವು ಕಷ್ಟದಲ್ಲಿದ್ದಾಗ ತಮ್ಮ ಕಷ್ಟಕ್ಕೆ ಸ್ಪಂದಿಸಿದಂತಹ ರೆಬೆಲ್ ಸ್ಟಾರ್ ಅಂಬರೀಶ್, ಟೈಗರ್ ಪ್ರಭಾಕರ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹಾಡಿ ಹೊಗಳಿದರು.
ಯಾವುದೇ ಡೈಲಾಗ್ ಕೊಟ್ಟರು ಪಟಪಟ ಅಂತ ಹೇಳುತ್ತಿದ್ದ ನಟಿ ಮಂಜುಳಾ ಓದಿದ್ದು ಎಷ್ಟನೇ ತರಗತಿ ಗೊತ್ತೇ?
Unknown Facts About Kannada Actor Jaggesh Real Life Incident