1000 ಕೋಟಿ ರೂಪಾಯಿ ಗಳಿಸಿ KGF2 ದಾಖಲೆ
KGF Chapter-2 Record: ಇತ್ತೀಚೆಗಷ್ಟೇ KGF2 ಚಿತ್ರ 1000 ಕೋಟಿ ರೂಪಾಯಿ ಗಳಿಸಿ ದಾಖಲೆ ನಿರ್ಮಿಸಿದೆ.
ಕೆಜಿಎಫ್ ಚಾಪ್ಟರ್-2 ದಾಖಲೆ (KGF Chapter-2 Record) : ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ‘ಕೆಜಿಎಫ್-2’ ಮತ್ತೊಂದು ದಾಖಲೆ ಸೃಷ್ಟಿಸಿದೆ. ಉತ್ತರದಿಂದ ದಕ್ಷಿಣಕ್ಕೆ ಕಲೆಕ್ಷನ್ ನಲ್ಲಿ ದಾಖಲೆ ಸೃಷ್ಟಿಸಿದೆ.
ಚಿತ್ರವು ಈಗಾಗಲೇ ಬ್ರೇಕ್ ಈವನ್ ಅನ್ನು ಪೂರ್ಣಗೊಳಿಸಿದೆ. ಹಿಂದಿಯಲ್ಲಿ ಈ ಚಿತ್ರ ಕಾಸಿನ ಮಳೆಯನ್ನೇ ತನ್ನ ಮುಡಿಗೇರಿಸಿಕೊಂಡಿದೆ. ಇದುವರೆಗೆ ಬಾಲಿವುಡ್ನಲ್ಲಿ 350 ಕೋಟಿ ಗಳಿಕೆ ದಾಖಲೆ ಮಾಡಿದೆ.
ಎರಡು ತೆಲುಗು ರಾಜ್ಯಗಳಲ್ಲಿ ಇದುವರೆಗೆ 77 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿದೆ. ಒಂದು ಡಬ್ಬಿಂಗ್ ಚಿತ್ರಕ್ಕೆ ಈ ಮಟ್ಟದ ಕಲೆಕ್ಷನ್ ಆಗಿರುವುದು ವಿಶೇಷ. ಪ್ರಶಾಂತ್ ನೀಲ್ ಟೇಕಿಂಗ್ ಮತ್ತು ವಿಷನ್ ಗೆ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ಯಶ್ ಅಭಿನಯಕ್ಕೆ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಇತ್ತೀಚೆಗೆ ಈ ಚಿತ್ರ ಮತ್ತೊಂದು ಅಪರೂಪದ ದಾಖಲೆಯನ್ನು ಸಾಧಿಸಿದೆ.
ಇತ್ತೀಚೆಗಷ್ಟೇ ಈ ಚಿತ್ರ 1000 ಕೋಟಿ ರೂಪಾಯಿ ಗಳಿಸಿ ದಾಖಲೆ ನಿರ್ಮಿಸಿದೆ. ‘ಬಾಹುಬಲಿ-2’, ‘RRR’ ಮತ್ತು ‘ದಂಗಲ್’ ನಂತರ ‘ಕೆಜಿಎಫ್-2’ ಈ ಮಾರ್ಕ್ ತಲುಪಿದ ನಾಲ್ಕನೇ ಚಿತ್ರವಾಗಿದೆ.
ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದು, ಬಾಲಿವುಡ್ ಸ್ಟಾರ್ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವುರಮೇಶ್, ರವೀನಾ ತಂಡನ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
Fourth Indian Movie Crossed 1000crore Collections At Ww Box Office
#KGFChapter2 has crossed ₹ 1,000 Crs Gross Mark at the WW Box Office..
Only the 4th Indian Movie to do so after #Dangal , #Baahubali2 and #RRRMovie
— Ramesh Bala (@rameshlaus) April 30, 2022
Follow Us on : Google News | Facebook | Twitter | YouTube