ಅಂದು ಸಾಮಾನ್ಯ ನಟನಾಗಿದ್ದ ರಾಮಕುಮಾರ್ ಅಣ್ಣಾವ್ರ ಮಗಳನ್ನು ಮದುವೆಯಾದದ್ದು ಹೇಗೆ? ಆನಂತರ ನಡೆದದ್ದು ಏನು ಗೊತ್ತಾ?

ಆಗಾಗ ಶೂಟಿಂಗ್ ಸೆಟ್ಗೆ ಹೋಗುತ್ತಿದ್ದಂತಹ ಪೂರ್ಣಿಮಾ ಮತ್ತು ರಾಮಕುಮಾರ್ ನಡುವೆ ಸ್ನೇಹ ಶುರುವಾಗುತ್ತದೆ ಇವರಿಬ್ಬರ ಸ್ನೇಹ ಪ್ರೀತಿಯಾಗಿ ತಿರುಗಲು ಹೆಚ್ಚಿನ ಕಾಲ ಹಿಡಿಯಲಿಲ್ಲ.

ನಟಸಾರ್ವಭೌಮ, ಕರ್ನಾಟಕ ರತ್ನ ಎಂದೆಲ್ಲಾ ಕರಿಯಲ್ಪಡುತ್ತಿದ್ದಂತಹ ಡಾ. ರಾಜಕುಮಾರ್ (Dr Rajkumar) ಅವರ ಮನೆಯ ಅಳಿಯನಾಗುವುದು ಸಾಮಾನ್ಯವಾದ ಮಾತಾ? ಡಾ. ರಾಜಕುಮಾರ್ ರಂತಹ ದಿಗ್ಗಜರ ಮನಸ್ಸನ್ನು ಗೆದ್ದು ಅವರ ಮಗಳನ್ನು (Dr Rajkumar Daughter) ಮದುವೆಯಾದಂತಹ ರಾಮ್ ಕುಮಾರ್ ಮದುವೆಯಾದ ನಂತರ ಅವಕಾಶಗಳನ್ನು ಕಳೆದುಕೊಂಡರು ಎಂಬ ಮಾತು ಇವತ್ತಿಗೂ ಕೂಡ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತದೆ.

ಇದರ ಅಸಲಿಯತ್ತೇನು? ಅಣ್ಣಾವ್ರ ಮಗಳನ್ನು (Rajkumar Daughter Poornima) ರಾಮ್ ಕುಮಾರ್ ವರಿಸಿದ್ದಾದರೂ ಹೇಗೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಾಗರಹಾವು ಸಿನಿಮಾದ ನಂತರ ಪುಟ್ಟಣ್ಣ ತನ್ನ ಪ್ರಿಯ ಶಿಷ್ಯ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳದಿರಲು ಕಾರಣವೇನು? ಕೊನೆಗೂ ಬಯಲಾಯಿತು ಅಸಲಿ ಸತ್ಯ!

ಅಂದು ಸಾಮಾನ್ಯ ನಟನಾಗಿದ್ದ ರಾಮಕುಮಾರ್ ಅಣ್ಣಾವ್ರ ಮಗಳನ್ನು ಮದುವೆಯಾದದ್ದು ಹೇಗೆ? ಆನಂತರ ನಡೆದದ್ದು ಏನು ಗೊತ್ತಾ? - Kannada News

ಹೌದು ಗೆಳೆಯರೇ, 1990 ರಲ್ಲಿ ಆವೇಶ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ವುಡ್ (Sandalwood) ಪ್ರವೇಶ ಮಾಡಿದಂತಹ ರಾಮಕುಮಾರ್ 1993ರಲ್ಲಿ ತೆರೆ ಕಂಡ ಗೆಜ್ಜೆನಾದ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ.

ಆನಂತರ 2006ರಲ್ಲಿ ಪಾಂಡವರು ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಂತಹ ರಾಮಕುಮಾರ್ ಚಿತ್ರರಂಗದಲ್ಲಿ ಬಹಳನೇ ಆಕ್ಟಿವ್ ಆಗಿ ಇರುತ್ತಾರೆ.

ಇನ್ನು ತಮ್ಮ ತಾಯಿಯೊಂದಿಗೆ ಆಗಾಗ ಶೂಟಿಂಗ್ ಸೆಟ್ಗೆ ಹೋಗುತ್ತಿದ್ದಂತಹ ಪೂರ್ಣಿಮಾ ಮತ್ತು ರಾಮಕುಮಾರ್ ನಡುವೆ ಸ್ನೇಹ ಶುರುವಾಗುತ್ತದೆ ಇವರಿಬ್ಬರ ಸ್ನೇಹ ಪ್ರೀತಿಯಾಗಿ ತಿರುಗಲು ಹೆಚ್ಚಿನ ಕಾಲ ಹಿಡಿಯಲಿಲ್ಲ.

Actor Ramkumar with his Wife Poornima and Family

ಸ್ವತಃ ಪಾರ್ವತಮ್ಮನವರಿಗೆ ಈ ಒಂದು ವಿಚಾರ ಗೊತ್ತಾಗಿ ನಿನ್ನ ತಂದೆಗೆ ಈ ಒಂದು ವಿಚಾರವನ್ನು ಯಾವುದೇ ಕಾರಣಕ್ಕೂ ಕೂಡ ಹೇಳಬೇಡ ಎಂದು ಹೇಳಿದರಂತೆ. ಆದರೆ ರಾಜಕುಮಾರ್ ಅವರಿಗೆ ರಾಮಕುಮಾರ್ ಅವರನ್ನು ಅಳಿಯನ್ನಾಗಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ.

ಅರ್ಧಕ್ಕೆ ನಿಂತು ಹೋಗಿರುವ ಶಿವಣ್ಣನ ಈ ಸಿನಿಮಾ ಮತ್ತೆ ರಿಲೀಸ್ ಆದರೆ ಕೋಟಿ ಕೋಟಿ ಹಣ ಬಾಚುವುದು ಪಕ್ಕಾ! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?

ಅವರ ಸುತ್ತಮುತ್ತ ಇದ್ದವರು ಚಿತ್ರರಂಗಕ್ಕೆ ಸೇರಿದವರನ್ನು ಮನೆಯ ಅಳಿಯನಾಗಿ ತರುವುದು ಬೇಡ ಎಂದು ಯಾವಾಗಲೂ ಹೇಳುತ್ತಿದ್ದರಂತೆ. ಈ ಕಾರಣದಿಂದ ರಾಜಕುಮಾರ್ ತಮ್ಮ ದೊಡ್ಡ ಮಗಳಾದ ಲಕ್ಷ್ಮಿ ಅವರನ್ನು ತಮ್ಮ ಸಹೋದರನಿಗೆ ಕೊಟ್ಟು ಮದುವೆ ಮಾಡಿದರು, ಅವರ ಸಂಸಾರ ಬಹಳ ಸುಗಮವಾಗಿ ಚೆನ್ನಾಗಿತ್ತು. ಆದರೆ ತನ್ನ ಎರಡನೇ ಮಗಳು ಪೂರ್ಣಿಮಾಳನ್ನು ಸಿನಿ ಕ್ಷೇತ್ರದಲ್ಲಿ ಇರುವವರಿಗೆ ಕೊಡುವುದು ಬೇಡ ಎಂದು ಆಲೋಚನೆ ಮಾಡಿದ್ದರಂತೆ.

ಅಷ್ಟರಲ್ಲಿ ಆಗಲೇ ಪೂರ್ಣಿಮಾ ಅವರು ರಾಮಕುಮಾರ್ ಅವರನ್ನು ಕರೆದುಕೊಂಡು ಹೋಗಿ ಮದುವೆಯಾಗಿ ಬಿಟ್ಟಿದ್ದರು. ಇದು ಪಾರ್ವತಮ್ಮ ಹಾಗೂ ರಾಜಕುಮಾರ್ ಅವರಿಗೆ ಬಹಳಾನೇ ಬೇಸರವನ್ನು ತಂದಿತ್ತು.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಳಉಡುಪು ಇಲ್ಲದೆ ಬಂದಿದ್ದ ಖ್ಯಾತ ನಟಿ… ಅಭಿಮಾನಿಗಳಿಗೆ ಶಾಕ್!

ಎರಡು ವರ್ಷಗಳ ಕಾಲ ರಾಮ್ ಕುಮಾರ್ ಮತ್ತು ಪೂರ್ಣಿಮಾ ರಾಜಕುಮಾರ್ ಅವರ ಮನೆಗೆ ಹೋಗುತ್ತಿರಲಿಲ್ಲ. ಕೇವಲ ಶಿವಣ್ಣ ಮಾತ್ರ ತಮ್ಮ ತಂಗಿಯನ್ನು ಆಗಾಗ ಭೇಟಿ ಮಾಡಿ ಬರುತ್ತಿದ್ದರು.

ಈ ಘಟನೆ ಆದ ನಂತರ ರಾಮಕುಮಾರ್ ಅವರು ಕೂಡ ಸಿನಿಮಾಗಳ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ತಮ್ಮ ವೈಯಕ್ತಿಕ ಜೀವನದತ್ತ ಸಂಪೂರ್ಣ ಗಮನಹರಿಸಿ ಸದ್ಯ ಮಕ್ಕಳ ಸಿನಿ ಬದುಕಿನ ಜವಾಬ್ದಾರಿಯನ್ನು ಹೊತ್ತಿದ್ದಾರೆ.

How did Actor Ramkumar marry Rajkumar’s Daughter, Here is the Story

Follow us On

FaceBook Google News

How did Actor Ramkumar marry Rajkumar's Daughter, Here is the Story

Read More News Today