ಸ್ನೇಹಿತರೆ ಪುಟ್ಟಣ್ಣ ಕಣಗಾಲ್ (Puttanna Kanagal) ಹಾಗೂ ವಿಷ್ಣುವರ್ಧನ್ (Actor Dr Vishnuvardhan) ಅವರ ಹೆಸರು ಕೇಳುತ್ತಿದ್ದ ಹಾಗೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದಂತಹ ಡೈನಮಿಕ್ ಹಿಟ್ ಸಿನಿಮಾ ನಾಗರಹಾವು (Nagarahavu Movie) ನಮ್ಮೆಲ್ಲರ ತಲೆಗೆ ಬಂದು ಬಿಡುತ್ತದೆ.
ವಿಷ್ಣುವರ್ಧನ್ ಅವರ ಅಭಿನಯ ಹಾಗೂ ಸಿನಿಮಾದ ಪ್ರತಿಯೊಂದು ಹಂತವನ್ನು ಬೇಸರ ಪಡಿಸದೆ ಪೈಸಾ ವಸೂಲ್ ಮನರಂಜನೆ ನೀಡುವಂತಹ ಕಥೆ ಹಂದರ ಆಗಿನ ಕಾಲದ ಸಿನಿ ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.
ಹೌದು ಗೆಳೆಯರೇ ಹಲವಾರು ತಿಂಗಳುಗಳ ಕಾಲ ತೆರೆಯ ಮೇಲೆ ರಾರಾಜಿಸಿದ ಈ ಒಂದು ಸಿನಿಮಾ ಈಗಿನ ಅದೆಷ್ಟೋ ಕನ್ನಡಿಗರ ಫೆವರೇಟ್ ಚಿತ್ರ ಎಂದರೆ ತಪ್ಪಾಗಲಾರದು. ಇಂತಹ ಶ್ರೇಷ್ಠ ಕಲಾವಿದರು ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಎಷ್ಟೋ ಗಾಳಿ ಸುದ್ದಿಗಳು ಬಂದರೂ ಕೂಡ ಪುಟ್ಟಣ್ಣ ಹಾಗೂ ವಿಷ್ಣು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ.
ಇದರ ಅಸಲಿ ಕಾರಣವೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದೆ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಸಿನಿಮಾದ ಮೂಲಕ.
ವಿಷ್ಣು ದಾದಾನ ಸಿನಿ ಬದುಕಿಗೆ ಶುಭಾರಂಭ ನೀಡಿದಂತಹ ನಿರ್ದೇಶಕರು.. ಈ ಕಾರಣದಿಂದಲೇ ಪುಟ್ಟಣ್ಣ ಕಣಗಾಲ್ ಅವರು ಸದಾ ಕಾಲ ವಿಷ್ಣುವರ್ಧನ್ ಅವರನ್ನು ತನ್ನ ಪ್ರಿಯ ಶಿಷ್ಯ ಎಂದು ಬಾಯಿ ತುಂಬಾ ಹಾಡಿ ಹೊಗಳುತ್ತಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಳಉಡುಪು ಇಲ್ಲದೆ ಬಂದಿದ್ದ ಖ್ಯಾತ ನಟಿ… ಅಭಿಮಾನಿಗಳಿಗೆ ಶಾಕ್!
ವಿಷ್ಣು ದಾದಾ ಕೂಡ ಪುಟ್ಟಣ್ಣನನ್ನು ತಮ್ಮ ಸಿನಿ ಜೀವನದ ಗುರುಗಳು ಎಂದು ಒಪ್ಪಿಕೊಳ್ಳುತ್ತಿದ್ದರು. ಹೀಗೆ ನಾಗರಹಾವು ಸಿನಿಮಾದಲ್ಲಿ ಒಂದಾದಂತಹ ಈ ಜೋಡಿ ಮತ್ತೊಂದು ಒಟ್ಟಿಗೆ ಕೆಲಸ ಮಾಡಲಿಲ್ಲ ಎಂಬುದೇ ವಿಪರ್ಯಾಸ.
ಇನ್ನು ಮುಂತಾದ ಕಡೆಗಳಲ್ಲಿ ಶುಭ ಮಂಗಳ ಸೇರಿದಂತೆ ಅನೇಕ ಸಿನಿಮಾಗಳಿಗೆ ವಿಷ್ಣುವರ್ಧನ್ ಅವರನ್ನು ನಾಯಕ ನಟನಾಗಿ ಮಾಡಿಕೊಳ್ಳುವ ಹಂಬಲ ಪುಟ್ಟಣ್ಣ ಅವರಿಗೆ ಇರುತ್ತದೆ. ಆದರೆ ಆ ಸಮಯದಲ್ಲಿ ವಿಷ್ಣುವರ್ಧನ್ ಅವರ ಬ್ಯುಸಿ ಶೆಡ್ಯೂಲ್ ಹಾಗೂ ಡೇಟ್ಸ್ಗಳ ಹೊಂದಾಣಿಕೆ ಇರದ ಕಾರಣ ಈ ಇಬ್ಬರು ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಆಗಲಿಲ್ಲ.
ಮತ್ತೊಮ್ಮೆ ಈ ಡೈನಮಿಕ್ ಜೋಡಿಯನ್ನು ತೆರೆಯ ಮೇಲೆ ನೋಡಬೇಕು ಎಂದು ಹಂಬಲಿಸುತ್ತಿದ್ದಂತಹ ಪ್ರೇಕ್ಷಕರ ಕನಸು ನನಸಾಗಲೇ ಇಲ್ಲ. ನೀವು ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದಲ್ಲಿ ಅವರು ಅಭಿನಯಿಸಿದ ನಾಗರಹಾವು ಸಿನಿಮಾ ಈಗಾಗಲೇ ನಿಮ್ಮ ಕಣ್ಮುಂದೆ ಬಂದಿರುತ್ತದೆ. ಅವರ ಕಾಂಬಿನೇಷನ್ ನಲ್ಲಿ ಸಿನಿಮಾ ಮತ್ತೆ ಬಾರದೇ ಇರುವುದು ಅದೆಷ್ಟೋ ಅಭಿಮಾನಿಗಳಿಗೆ ಬೇಸರ ತರಿಸದ್ದು ಸುಳ್ಳಲ್ಲ. ಅದನ್ನು ಹೊರತು ಪಡಿಸಿ ಅವರಿಬ್ಬರ ನಡುವೆ ಯಾವುದೇ ದ್ವೇಷ ಇರಲಿಲ್ಲ.
ಆಗ ತಾನೇ ಸಿನಿ ರಂಗದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದ ವಿಷ್ಣು ಅವರ ಬ್ಯುಸಿ ಶೆಡ್ಯೂಲ್ ನಿಂದ ಮತ್ತೆ ಅವರ ಜೋಡಿ ಸಿನಿಮಾ ಮಾಡಲು ಆಗಲಿಲ್ಲ ಎಂಬುದು ನಿಜ ಸಂಗತಿ.
why Puttanna Kanagal and Vishnuvardhan did not make another movie after Nagarahavu
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.