ಟಾಪ್ ಬಾಲನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಸಿನಿಮಾ ರಂಗಕ್ಕೆ ಬೇಡವಾದ್ರ? ಅಷ್ಟಕ್ಕೂ ಈಕೆ ಈಗ ಹೇಗಿದ್ದಾರೆ, ಎಲ್ಲಿದ್ದಾರೆ?

ವಿಪರ್ಯಾಸವೆನೆಂದರೆ ಇಂತಹ ಬಹು ಬೇಡಿಕೆ ಇದ್ದಂತಹ ಸ್ಟಾರ್ ಕಲಾವಿದರು ಬೆಳೆದು ದೊಡ್ಡವರಾದ ಮೇಲೆ ಅವಕಾಶಕ್ಕಾಗಿ ಪರದಾಡಿದ್ದಂತಹ ಉದಾಹರಣೆಗಳು ಸಾಕಷ್ಟಿವೆ. ಹೀಗಿರುವಾಗ ನಾವಿವತ್ತು ಅತಿ ಪುಟ್ಟ ವಯಸ್ಸಿನಲ್ಲಿ ಮನಮೋಹಕ ಅಭಿನಯವನ್ನು ತೋರಿ ಕನ್ನಡಿಗರ ಮನಸ್ಸನ್ನು ಸೆಳೆದ ಪುಟ್ಟ ಪೋರಿಯ ಕುರಿತು ಹೇಳ ಹೊರಟಿದ್ದೇವೆ.

Bengaluru, Karnataka, India
Edited By: Satish Raj Goravigere

ಸ್ನೇಹಿತರೆ, ಅತಿ ಚಿಕ್ಕ ವಯಸ್ಸಿನಲ್ಲಿಯೇ ಬರೋಬ್ಬರಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸ್ಟಾರ್ ನಟ ನಟಿಯರಿಗೆ ಸೆಡ್ಡು ಹೊಡೆಯುವಂತಹ ಅಭಿನಯವನ್ನು ತನ್ನ ಐದು ವರ್ಷದಲ್ಲಿಯೇ ಮಾಡುತ್ತಿದ್ದಂತಹ ಬೇಬಿ ಶ್ಯಾಮಿಲಿ (actress Baby Shamlee) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ?

ತಮ್ಮ ಮುದ್ದು ಮುದ್ದು ಮಾತಿನ ಮೂಲಕ ಎಂಥವರನ್ನು ತನ್ನ ಅಭಿನಯದ ಮೂಲಕವೇ ಮೋಡಿ ಮಾಡುತ್ತಿದ್ದಂತಹ ಈ ಸ್ಟಾರ್ ಬಾಲ ಕಲಾವಿದೆ ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

How is the top child actress Baby Shamlee now, where is she

ಸಾಹಸಸಿಂಹ ವಿಷ್ಣುದಾದಾ ಯಾವಾಗಲೂ ಧರಿಸುತ್ತಿದ್ದ ಕೈ ಖಡಗ ಸದ್ಯ ಯಾರ ಬಳಿ ಇದೆ ಗೊತ್ತಾ?

ದೊಡ್ಡವರಾದ ಬಳಿಕ ಸಿನಿಮಾರಂಗ ಇವರನ್ನು ಕೈ ಬಿಡ್ತಾ? ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ 80-90 ರ ದಶಕದಲ್ಲಿ ಸಾಕಷ್ಟು ಸ್ಟಾರ್ ಚೈಲ್ಡ್ ಆಕ್ಟರ್ಗಳು ಸಿನಿಮಾ ರಂಗವನ್ನು ಪ್ರವೇಶ ಮಾಡಿ ಅಲ್ಪಾವಧಿಯಲ್ಲಿಯೇ ಹಾಗೂ ಅತಿ ಚಿಕ್ಕ ವಯಸ್ಸಿನಲ್ಲಿಯೇ ಬಹುದೊಡ್ಡ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು.

ಕಿವಿ ಕೇಳಿಸದಿದ್ರು ಅಮೋಘ ಅಭಿನಯ ಮಾಡ್ತಿದ್ರು ನಟ ಬಾಲಕೃಷ್ಣ, ಕಿಂಚಿತ್ತು ಕೇಳಿಸದೆ ಹೋದರು 560 ಸಿನಿಮಾಗಳಲ್ಲಿ ಅಭಿನಯಿಸಿದ್ದಾದರೂ ಹೇಗೆ?

ಅಂತಹ ಬಾಲನಟರಲ್ಲಿ ಮಾಸ್ಟರ್ ಆನಂದ್, ಮಾಸ್ಟರ್ ಮಂಜುನಾಥ್ ಹಾಗೂ ಬೇಬಿ ಶ್ಯಾಮಿಲಿರಂತಹ ಕಲಾವಿದರು ಅಗ್ರಸ್ಥಾನವನ್ನು ಅಲಂಕರಿಸುತ್ತಾರೆ.

actress Baby Shamlee Chilhood Photoವಿಪರ್ಯಾಸವೆನೆಂದರೆ ಇಂತಹ ಬಹು ಬೇಡಿಕೆ ಇದ್ದಂತಹ ಸ್ಟಾರ್ ಕಲಾವಿದರು ಬೆಳೆದು ದೊಡ್ಡವರಾದ ಮೇಲೆ ಅವಕಾಶಕ್ಕಾಗಿ ಪರದಾಡಿದ್ದಂತಹ ಉದಾಹರಣೆಗಳು ಸಾಕಷ್ಟಿವೆ. ಹೀಗಿರುವಾಗ ನಾವಿವತ್ತು ಅತಿ ಪುಟ್ಟ ವಯಸ್ಸಿನಲ್ಲಿ ಮನಮೋಹಕ ಅಭಿನಯವನ್ನು ತೋರಿ ಕನ್ನಡಿಗರ ಮನಸ್ಸನ್ನು ಸೆಳೆದ ಪುಟ್ಟ ಪೋರಿಯ ಕುರಿತು ಹೇಳ ಹೊರಟಿದ್ದೇವೆ.

ಹೌದು ಗೆಳೆಯರೇ ಅಣ್ಣಾವ್ರಿಗೆ ಸಿಹಿ ಮುತ್ತನ್ನು ನೀಡಿ ತಮ್ಮ ಅಭಿನಯದ ಮೂಲಕ ಎಂತವರನ್ನು ಮರಳು ಮಾಡುತ್ತಿದ್ದಂತಹ ಬೇಬಿ ಶ್ಯಾಮಿಲಿ ಪುಟ್ಟ ಫ್ರಾಕ್, ಎರಡು ಕೋಳಿಪುಕ್ಕ ಹಾಗೂ ತುಟಿ ಅಂಚಿನ ನಗುವಿನಿಂದ ತೆರೆಯ ಮೇಲೆ ಬಂದರೆ ಸಾಕು ಜನ ಮನಸೋತು ಹೋಗುತ್ತಿದ್ದರು. ಹೀಗೆ ಆಗಿನ ಕಾಲದಲ್ಲಿ ಕನ್ನಡ ಮಾತ್ರವಲ್ಲದೆ (Kannada Films) ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಬಾಲಕಲಾವಿದೆ ಆಕೆ.

actress Baby Shamleeಆಫರ್ಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಡಾಡುತ್ತಿದ್ದಂತಹ 4 ವರ್ಷದ ಪುಟ್ಟ ಪೋರಿ ಇದೀಗ 33 ವರ್ಷದ ನಟಿಯಾಗಿ ಹೊರಹೊಮ್ಮಿದ್ದಾರೆ. ಹೌದು ಗೆಳೆಯರೇ 2009ರಲ್ಲಿ ‘ಓಯ್’ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ ಶ್ಯಾಮಿಲಿ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

ಅದೊಂದು ಕಾಲದಲ್ಲಿ ಅವಕಾಶಗಳ ಸುರಿಮಳೆಯನ್ನು ಹೊತ್ತು ತಿರುಗುತ್ತಿದ್ದಂತಹ ಬೇಬಿ ಶ್ಯಾಮಿಲಿ ಬೆಳೆದು ದೊಡ್ಡವರಾದ ಮೇಲೆ ಅಲ್ಲೊಂದು ಇಲ್ಲೊಂದು ಪೋಷಕ ಪಾತ್ರಗಳನ್ನು ಮಾಡುತ್ತಾ ತಮಿಳುನಾಡಿನಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಬಾಲನಟಿಯಾಗಿದ್ದಾಗ ಇದ್ದಂತಹ ಬೇಡಿಕೆ ಈಗ ಇಲ್ಲದಾಗಿದೆ. ಇದು ಕೇವಲ ಇವರೊಬ್ಬರೇ ಕತೆ ಮಾತ್ರವಲ್ಲ, ಅದೆಷ್ಟೋ ಬಾಲನಟರ ಸ್ಥಿತಿ ಇದೆ ಆಗಿದೆ.

How is the top child actress Baby Shamlee now, where is she