ಕಿವಿ ಕೇಳಿಸದಿದ್ರು ಅಮೋಘ ಅಭಿನಯ ಮಾಡ್ತಿದ್ರು ನಟ ಬಾಲಕೃಷ್ಣ, ಕಿಂಚಿತ್ತು ಕೇಳಿಸದೆ ಹೋದರು 560 ಸಿನಿಮಾಗಳಲ್ಲಿ ಅಭಿನಯಿಸಿದ್ದಾದರೂ ಹೇಗೆ?

ಸುಮಾರು 560ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ವಿಶಿಷ್ಟ ಬೇಡಿಕೆಯನ್ನು ಗಿಟ್ಟಿಸಿಕೊಂಡಂತಹ ಟಿ ಎನ್ ಬಾಲಕೃಷ್ಣ ಅವರ ಕುರಿತು ಯಾರಿಗೂ ತಿಳಿದ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ, ನಮ್ಮ ಕನ್ನಡ ಸಿನಿಮಾರಂಗ ಕಂಡಂತಹ ದಿಗ್ಗಜ, ಧೀಮಂತ ನಟರ ಪಟ್ಟಿಯಲ್ಲಿ ಬಾಲ ಕೃಷ್ಣ (Kannada Senior Actor Balakrishna) ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಗೆಳೆಯರೇ 70-80ರ ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಡಾ. ರಾಜಕುಮಾರ್ ವಜ್ರಮುನಿಯಂತಹ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಧೀಮಂತ ನಟರು ಬಾಲ ಕೃಷ್ಣ.

ಸುಮಾರು 560ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ವಿಶಿಷ್ಟ ಬೇಡಿಕೆಯನ್ನು ಗಿಟ್ಟಿಸಿಕೊಂಡಂತಹ ಟಿ ಎನ್ ಬಾಲಕೃಷ್ಣ (Actor TN Balakrishna) ಅವರ ಕುರಿತು ಯಾರಿಗೂ ತಿಳಿದ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸಾಹಸಸಿಂಹ ವಿಷ್ಣುದಾದಾ ಯಾವಾಗಲೂ ಧರಿಸುತ್ತಿದ್ದ ಕೈ ಖಡಗ ಸದ್ಯ ಯಾರ ಬಳಿ ಇದೆ ಗೊತ್ತಾ?

ಕಿವಿ ಕೇಳಿಸದಿದ್ರು ಅಮೋಘ ಅಭಿನಯ ಮಾಡ್ತಿದ್ರು ನಟ ಬಾಲಕೃಷ್ಣ, ಕಿಂಚಿತ್ತು ಕೇಳಿಸದೆ ಹೋದರು 560 ಸಿನಿಮಾಗಳಲ್ಲಿ ಅಭಿನಯಿಸಿದ್ದಾದರೂ ಹೇಗೆ? - Kannada News

ನಿಮಗೂ ಕೂಡ ಈ ಧೀಮಂತ ಹಿರಿಯ ನಟನ ಕುರಿತು ಕೆಲ ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ನಟನೆ ಎಂಬುದು ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವಂತದ್ದಲ್ಲ, ಯಾವುದೇ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ, ಲೀಲಾಜಾಲವಾಗಿ ಅಭಿನಯಿಸಬೇಕು ಎಂದರೆ ಅನುಭವದ ಜೊತೆಗೆ ಕಲಾದೇವಿಯ ಆಶೀರ್ವಾದವು ಒಲಿದಿರಬೇಕು.

ಅಂತಹದ್ದೇ ಓರ್ವ ವಿಶಿಷ್ಟ ನಟ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಇದ್ದದ್ದು ನಮ್ಮೆಲ್ಲರ ಹೆಮ್ಮ. ಹೌದು ಸ್ನೇಹಿತರೆ ಎದುರು ಅದೆಂತ ದಿಗ್ಗಜ ನಟರಿದ್ದರು ಕೂಡ ಬಹಳ ಸುಗಮವಾಗಿ ಎಲ್ಲರೂ ಭೇಷ್ ಎನ್ನುವಂತಹ ಅಭಿನಯ ಮಾಡುತ್ತಿದ್ದಂತಹ ಸರ್ವ ಶ್ರೇಷ್ಠ ಕಲಾವಿದ ಟಿ‌.ಎನ್ ಬಾಲಣ್ಣನವರು.

Kannada Senior Actor Balakrishna - Balanna

Actress Jayaprada: ಬೇರೊಬ್ಬರ ಗಂಡನನ್ನು ಮದುವೆಯಾದ ನಟಿ ಜಯಪ್ರದಾ ಅವರ ಸ್ಥಿತಿ ಈಗ ಹೇಗಿದೆ ಗೊತ್ತಾ ??

ಅಭಿನಯ ಮಾಡುವುದಕ್ಕೆ ಕಣ್ಣು, ಕಿವಿ ಹಾಗೂ ನಾಲಿಗೆ ಎಲ್ಲವು ಬಹಳ ಚುರುಕಾಗಿರಬೇಕು ಎಂಬ ಮಾತಿದೆ. ಆದರೆ ಇದನ್ನು ಬಾಲಣ್ಣನವರು ತಮ್ಮ ಅದ್ಭುತ ಅಭಿನಯದ ಮೂಲಕ ಅಕ್ಷರಶಃ ಸುಳ್ಳಾಗಿಸಿದರು.

ಹೌದು ಗೆಳೆಯರೇ ನವಂಬರ್ ಎರಡನೇ ತಾರೀಕು 1911ರಂದು ಹಾಸನದ ಅರಸೀಕೆರೆಯಲ್ಲಿ ಜನಿಸಿದಂತಹ ಬಾಲಣ್ಣನವರು ಅತಿ ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡರು. ದುರದೃಷ್ಟವೇನೆಂದರೆ ಬಾಲಣ್ಣನವರಿಗೆ ಚಿಕ್ಕ ವಯಸ್ಸಿನಿಂದಲೂ ಕಿವಿ ಕೇಳುತ್ತಿರಲಿಲ್ಲ.

ಆದರೂ ಸಹ ತಮ್ಮೊಳಗಿದ್ದಂತಹ ಅಘಾದ ಕಲೆಯನ್ನು ಬಾಲಣ್ಣನವರು ಎಂದಿಗೂ ಕುಗ್ಗಲು ಬಿಡಲಿಲ್ಲ. ಹೌದು ಗೆಳೆಯರೇ ತಮ್ಮ ತಂದೆ ತಾಯಿಯ ಅಗಲಿಕೆಯ ನಂತರ ಸಂಬಂಧಿಕರ ಮನೆಯಲ್ಲಿ ಆಡಿ ಬೆಳೆದಂತಹ ಬಾಲಣ್ಣನವರು ಹೆಚ್ಚಿನದಾಗಿ ಓದಲು ಹೋಗಲಿಲ್ಲ.

ಅಂದು ಟಾಪ್ ನಟನಾಗಿ ಮಿಂಚುತ್ತಿದ್ದ ಅಂಬರೀಶ್ ಅವರಿಗೆ ಮಂಡ್ಯದ ಗಂಡು ಎಂಬ ಬಿರುದನ್ನು ಕೊಟ್ಟವರು ಯಾರು ಗೊತ್ತಾ ?? 

ಬದಲಿಗೆ ಊರಿಗೆ ಬಂದಂತಹ ನಾಟಕ ಕಂಪನಿಯತ್ತ ಆಕರ್ಷಣೆಗೊಳಗಾಗಿ ಅದರ ಗೇಟು ಕಾಯುವ ಮೂಲಕ ನಾಟಕ ಕಂಪನಿಯ ಒಳ ಪ್ರವೇಶ ಮಾಡುತ್ತಾರೆ. ಹೌದು ಆರಂಭಿಕ ದಿನಗಳಲ್ಲಿ ಪೋಸ್ಟರ್ ಅಂಟಿಸುವುದು, ಬೋರ್ಡ್ ಬರೆಯುವುದು, ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ತಮ್ಮ ಕಲಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತಹ ಬಾಲಣ್ಣನವರು ಕಿವಿ ಕೇಳಿಸದೆ ಇದ್ದರೂ ಕೂಡ ನೀಡಿದಂತಹ ಪಾತ್ರಕ್ಕೆ ಅದ್ಭುತ ಅಭಿನಯ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಾರೆ.

ಹೀಗೆ ಊರೂರಿನಲ್ಲಿ ನಡೆಯುತ್ತಿದ್ದಂತಹ ಸಣ್ಣಪುಟ್ಟ ನಾಟಕಗಳ ಮೂಲಕ ತಮ್ಮ ಬಣ್ಣದ ಬದುಕಿನ ಆಸೆಯನ್ನು ದುಪ್ಪಟ್ಟಾಗಿಸಿಕೊಂಡ ಇವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ. ಹೌದು ಕಿವಿ ಕೇಳಿಸದೆ ಇದ್ದರೂ ತುಟಿಗಳ ಚಲನೆ ಮತ್ತು ಅಂಗೀಕ ಸಂಭಾಷಣೆಯನ್ನೇ ಗಮನಿಸುತ್ತಾ ತಮ್ಮೆದುರಿಗೆ ಇರುವವರು ಯಾವ ಪಾತ್ರದ ಪರಿಚಯ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ತಮ್ಮದೇ ವಿಭಿನ್ನ ಮ್ಯಾನರಿಸಂನ ಅಭಿನಯದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.

Interesting Facts About Kannada Senior Actor Balakrishna who acted in 560 movies in Sandalwood

Follow us On

FaceBook Google News

Interesting Facts About Kannada Senior Actor Balakrishna who acted in 560 movies in Sandalwood