ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ

I-T Raid at Kannada Actor Rashmika Mandanna’s House - Film News

ಕನ್ನಡ ನ್ಯೂಸ್ ಟುಡೇSandalwood News

ಸ್ಯಾಂಡಲ್ ವುಡ್ : ಕೊಡಗು ಜಿಲ್ಲೆಯ ವಿರಾಜ್‌ಪೇಟೆ ಹೊರವಲಯದಲ್ಲಿರುವ ಕನ್ನಡ ಮತ್ತು ತೆಲುಗು ನಟಿ ರಶ್ಮಿಕಾ ಮಂದಣ್ಣ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಸುಮಾರು 10 ಆದಾಯ ತೆರಿಗೆ ಅಧಿಕಾರಿಗಳು ಬೆಳಿಗ್ಗೆ 7: 30 ಕ್ಕೆ ನಟಿ ನಿವಾಸದ ಮೇಲೆ ದಾಳಿ ನಡೆಸಿದರು.

ಕಿರಿಕ್ ಪಾರ್ಟಿ ಚಲನಚಿತ್ರದ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಪ್ರವೇಶಿಸಿದ್ದರು ಮತ್ತು ತೆಲುಗು ಚಿತ್ರರಂಗದಲ್ಲೂ ಚಿರಪರಿಚಿತರಾಗಿದ್ದಾರೆ. ಅಧಿಕಾರಿಗಳು ಆಕೆಯ ಮನೆ ಮತ್ತು ಅವರ ತಂದೆಯ ಒಡೆತನದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸಧ್ಯ ಈ ನಟಿ ಪ್ರಸ್ತುತ ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ - Kannada News

ರಶ್ಮಿಕಾ ತಾವು ಚಿತ್ರರಂಗದಿಂದ ಸಂಪಾದಿಸಿದ ಹಣವನ್ನು ಕುಟುಂಬಸ್ಥರೊಂದಿಗೆ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣದಲ್ಲಿ ತೊಡಗಿಸಲು ಮುಂದಾಗಿದ್ದರು. ಇದಕ್ಕಾಗಿಯೇ ವಿರಾಜಪೇಟೆ-ಮೈಸೂರು ರಸ್ತೆಯ ಬಿಟ್ಟಂಗಾಲ ಬಳಿ 5 ಎಕರೆ ಜಾಗವನ್ನು ನೋಡಿದ್ದರು. ಅಲ್ಲದೇ ಅದೇ ಮಾರ್ಗದಲ್ಲಿ ಪೆಟ್ರೋಲ್ ಬಂಕ್ ತೆರೆಯಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ರಶ್ಮಿಕಾ ಹಾಗೂ ಕುಟುಂಬದವರ ಈ ಉದ್ದಿಮೆಯ ಕನಸೇ ಈಗ ಐಟಿ ದಾಳಿಗೆ ಕಾರಣವಾಗಿದೆ ಎನ್ನಲಾಗಿದೆ.

ಈಗಾಗಲೇ ವಿರಾಜಪೇಟೆ ನಿವಾಸದ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳ ಒಂದು ತಂಡ ರಶ್ಮಿಕಾ ಮನೆಯಲ್ಲಿ ಪರಿಶೀಲನೆ ನಡೆಸಿದರೆ, ಇನ್ನೊಂದು ತಂಡ ವಿರಾಜಪೇಟೆಯ ಕಲ್ಯಾಣ ಮಂಟಪದಲ್ಲಿ ಪರಿಶೀಲನೆ ನಡೆಸಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ರಶ್ಮಿಕಾಗೆ ಐಟಿ ಇಲಾಖೆ ಸಮನ್ಸ್ ನೀಡುವ ಸಾಧ್ಯತೆ ಇದೆ ಎನ್ನಾಲಾಗಿದೆ.

2016 ರ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ನಟನೆಗೆ ಪಾದಾರ್ಪಣೆ ಮಾಡಿದರು. 2017 ರಲ್ಲಿ ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಎರಡು ಚಿತ್ರಗಳಾದ ಅಂಜನಿ ಪುತ್ರ ಮತ್ತು ಚಮಕ್ ನಲ್ಲಿ ನಟಿಸಿದರು. ನಂತರ ಅವರು 2018 ರಲ್ಲಿ ತೆಲುಗಿಗೆ ಪಾದಾರ್ಪಣೆ ಮಾಡಿದರು. ಮಹೇಶ್ ಬಾಬು ಜೊತೆ ಅವರ ಹೊಸ ತೆಲುಗು ಚಿತ್ರ ‘ಸರಿಲೇರು ನೀಕೇವರು’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗೂ ನಿರ್ದೇಶಕ ಸುಕುಮಾರ್ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.////

Quick Links : Sandalwood News Kannada | Kannada Film News


 

Follow us On

FaceBook Google News