100 ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿ ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿದ್ದ ನಟಿ ಆಶಾಲತಾ ಏನಾದ್ರು? ನಟನೆಗೆ ಗುಡ್ ಬೈ ಹೇಳಿದ್ರಾ?
ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದ ಪ್ರತಿಭಾವಂತ ಕಲಾವಿದರಲ್ಲಿ ನಮ್ಮೆಲ್ಲರ ನೆಚ್ಚಿನ ಆಶಾಲತಾ ಅವರು ಕೂಡ ಒಬ್ಬರು. ನಟಿ ಆಶಾಲತಾ ಅವರು ನೂರಕ್ಕೂ ಹೆಚ್ಚಿನ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾಗಿ ಹೋಗಿದ್ದರು.
ಸ್ನೇಹಿತರೆ 80-90ರ ದಶಕದಲ್ಲಿ ಕನ್ನಡ ಸಿನಿಮಾ ರಂಗಕ್ಕೆ (Kannada Cinema Industry) ಅಸಂಖ್ಯಾತ ಕಲಾವಿದರು ಪ್ರವೇಶ ಮಾಡಿ ತಮ್ಮ ಅಮೋಘ ಅಭಿನಯದ ಮೂಲಕ ಬಣ್ಣದ ಲೋಕದಲ್ಲಿ ತಮ್ಮ ಬದುಕನ್ನು ಸುಂದರವಾಗಿಸಿಕೊಂಡರು.
ಆಗಿನ ಸಿನಿಮಾಗಳಲ್ಲಿ ಸಂಭಾವನೆ ಕಡಿಮೆ ಇದ್ದರೂ ಜನಪ್ರಿಯತೆ ಎಂಬುದು ಬಹು ದೊಡ್ಡ ಮಟ್ಟದಲ್ಲಿ ದೊರಕುತ್ತಿತ್ತು. ಕೆಲವೇ ಕೆಲವು ನಿಮಿಷಗಳ ಪಾತ್ರದಲ್ಲಿ ಕಾಣಿಸಿಕೊಂಡು ಭಾರಿ ಪ್ರಖ್ಯಾತಿ ಪಡೆದಿದ್ದಂತಹ ಸಾಕಷ್ಟು ನಟರು ನಮ್ಮ ಕನ್ನಡ ಸಿನಿಮಾರಂಗದಲ್ಲಿ (Kannada Films) ಇಂದಿಗೂ ಪೋಷಕ ನಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೀಗೆ ಸ್ಟಾರ್ ನಟಿ ಆಗದೆ ಹೋದರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದ ಪ್ರತಿಭಾವಂತ ಕಲಾವಿದರಲ್ಲಿ ನಮ್ಮೆಲ್ಲರ ನೆಚ್ಚಿನ ಆಶಾಲತಾ (Actress Ashalatha) ಅವರು ಕೂಡ ಒಬ್ಬರು. ಹೌದು ಸ್ನೇಹಿತರೆ ನಟಿ ಆಶಾಲತಾ ಅವರ ತಾಯಿ ಬಿ ರಾಜಮ್ಮ ಅವರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಕಾರಣ ಬಿ ಆರ್ ಪಂತಾಲೂ ಅವರ ಕೃಷ್ಣದೇವರಾಯ ಸಿನಿಮಾದ ಬಾಲ ನಟಿಯಾಗಿ ತಮ್ಮ ಹತ್ತನೇ ವಯಸ್ಸಿಗೆ ಸಿನಿಮಾರಂಗವನ್ನು ನಟಿ ಆಶಾಲತಾ ಪ್ರವೇಶಿಸಿದರು.
ಆನಂತರ ಒಂದು ಪ್ರೇಮ ಕಥೆ, ಬಂಡ ನನ್ನ ಗಂಡ, ಭೈರವಿ ಮುಂತಾದ ಯಶಸ್ವಿ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿ ಪ್ರಖ್ಯಾತಿ ಪಡೆದುಕೊಳ್ಳುತ್ತಾರೆ. ಹೀಗೆ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾ ರಂಗದಲ್ಲಿಯೂ ಅವಕಾಶ ಪಡೆದುಕೊಂಡ ನಟಿ ಆಶಾಲತಾ ಅವರು ನೂರಕ್ಕೂ ಹೆಚ್ಚಿನ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾಗಿ ಹೋಗಿದ್ದರು.
ಹೀಗೆ ಸಾಕಷ್ಟು ನೆಗೆಟಿವ್ ಪಾತ್ರಗಳ ಮೂಲಕವೇ ಭಾರಿ ಮಟ್ಟದ ಅವಕಾಶ ಗಿಟ್ಟಿಸಿಕೊಂಡು ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ ಆಶಾಲತಾ ಪೀಕ್ನಲ್ಲಿ ಇರುವಾಗಲೇ ಸಿನಿಮಾರಂಗದ ಕೆಳ ವರ್ಗದ ಕಲಾವಿದರೊಬ್ಬರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮದುವೆಯಾದ ನಂತರವೂ ಸಿನೆಮಾ ರಂಗದಲ್ಲಿ ಸಕ್ರಿಯರಾದ್ದ ಆಶಾಲತಾ ತಮ್ಮ ಕೊನೆಯ ಸಮಯದವರೆಗೂ ಸಿನಿಮಾ ರಂಗಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿ ಇಟ್ಟಿದ್ದರು ಎಂದರೆ ತಪ್ಪಾಗಲಾರದು.
Interesting Facts About Kannada Actress Ashalatha
Follow us On
Google News |