ಶಿವಣ್ಣ ಬಿಎಸ್ಸಿ ಡಿಗ್ರಿ ಓದುತ್ತಿರುವಾಗ ಅಣ್ಣಾವ್ರು ಬಸ್ ಚಾರ್ಜ್‌ಗೆ ಕೊಡುತ್ತಿದ್ದ ಹಣ ಎಷ್ಟು ಗೊತ್ತಾ? ವೈರಲ್ ಆಯ್ತು ಶಿವಣ್ಣನ ಪಾಕೆಟ್ ಮನಿ

ಕನ್ನಡ ಸಿನಿಮಾ ರಂಗದ ಗಾಡ್ ಫಾದರ್ ಆಗಿ ಬೆಳೆದಿದ್ದ ಡಾಕ್ಟರ್ ರಾಜಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದು ಅಣ್ಣಾವ್ರು ತಮ್ಮ ಮಕ್ಕಳಿಗೆ ಕಲಿಸಿದಂತಹ ಸಂಸ್ಕಾರ ಎಂತದ್ದು ಎಂಬುದನ್ನು ಎತ್ತಿ ತೋರಿಸುತ್ತದೆ.

ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಕುಟುಂಬ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ನೀಡಿರುವಂತಹ ಕೊಡುಗೆ ಅಷ್ಟಿಷ್ಟಲ್ಲ. ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಕನ್ನಡ ಸಿನಿಮಾ ರಂಗದ ಯಶಸ್ವಿಗೆ ಮೈಲುಗಲ್ಲನ್ನು ಹಾಕಿದ ರಾಜ್ ಮನೆತನ ಅದೆಷ್ಟೋ ನಟ ನಟಿಯರನ್ನು ಸಿನಿಮಾ ರಂಗಕ್ಕೆ ಕರೆತಂದರು..

ಹಾಗೂ ಅಣ್ಣಾವ್ರು ತಮ್ಮ ಮನೆ ಮಕ್ಕಳು ಕೂಡ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಆಸೆಪಟ್ಟು ಮಕ್ಕಳ ಸಿನಿ ಬದುಕಿಗೂ ಪ್ರೋತ್ಸಾಹಿಸಿದರು. ಹೀಗೆ ಯಾರನ್ನು ಗದರದೆ ಯಾರ ಮೇಲೂ ಕೋಪಿಸಿಕೊಳ್ಳದೆ ಸದಾ ಶಾಂತ ಮೂರ್ತಿಯಂತಿರುತ್ತಿದ್ದ ಅಣ್ಣಾವ್ರು ತಮ್ಮ ಐವರು ಮಕ್ಕಳನ್ನು ಬಹಳನೇ ಪ್ರೀತಿ ಗೌರವದಿಂದ ಬೆಳೆಸಿ ಸಾಕಿದರು.

ಇದುವರೆಗೂ ಒಮ್ಮೆಯೂ ಅಣ್ಣಾವ್ರು ತಮ್ಮ ಐದು ಮಕ್ಕಳ ಮೇಲೆ ಕೈ ಮಾಡಿಲ್ಲವಂತೆ. ಈ ಒಂದು ಮಾಹಿತಿಯನ್ನು ಸ್ವತಹ ಶಿವರಾಜ್ ಕುಮಾರ್ ಅವರೇ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದುಂಟು, ಹೀಗಿರುವಾಗ ಅಣ್ಣಾವ್ರ ಕಾಲದ ಖ್ಯಾತ ನಿರ್ದೇಶಕನಾಗಿದ್ದ ಶ್ರೀ ಆದಿತ್ಯ ಚಿಕ್ಕಣ್ಣನವರು ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಣ್ಣಾವ್ರು ಶಿವಣ್ಣನಿಗೆ (Actor Shiva Rajkumar) ಕಾಲೇಜಿಗೆ ಹೋಗಲು ಕೊಡುತ್ತಿದ್ದ ಹಣ ಎಷ್ಟು ಎಂಬುದನ್ನು ರಿವಿಲ್ ಮಾಡಿದ್ದಾರೆ.

ಶಿವಣ್ಣ ಬಿಎಸ್ಸಿ ಡಿಗ್ರಿ ಓದುತ್ತಿರುವಾಗ ಅಣ್ಣಾವ್ರು ಬಸ್ ಚಾರ್ಜ್‌ಗೆ ಕೊಡುತ್ತಿದ್ದ ಹಣ ಎಷ್ಟು ಗೊತ್ತಾ? ವೈರಲ್ ಆಯ್ತು ಶಿವಣ್ಣನ ಪಾಕೆಟ್ ಮನಿ - Kannada News

ಅಂದು ಮಲಗಿದ್ದ ತನ್ನ ಎಳೆ ಕಂದನನ್ನು ಲೀಲಾವತಿ ಅಮ್ಮನವರು ಸಾಯಿಸಲು ಮುಂದಾದದ್ದು ಏಕೆ? ಇಂದು ನಟ ವಿನೋದ್ ರಾಜ್ ಬದುಕುಳಿದಿದ್ದಾರೆ ಎಂದರೆ ಅದಕ್ಕೆ ಆ ವ್ಯಕ್ತಿಯೇ ಕಾರಣ?

ಹೌದು ಗೆಳೆಯರೇ ಆಗಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಬಹಳನೆ ಪೀಕ್ನಲ್ಲಿ ಇದ್ದಂತಹ ನಟ, ವರ್ಷವೊಂದರಲ್ಲಿ ಹತ್ತರಿಂದ ಹದಿನೈದು ಸಿನಿಮಾಗಳಲ್ಲಿ (Kannada Cinema) ನಟಿಸುತ್ತಾ ಸದಾ ಕಾಲ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರುತ್ತಿದ್ದ ಅಣ್ಣಾವ್ರು ಸಿನಿಮಾದ ಕುರಿತು ಯಾವುದೇ ವಿಚಾರವನ್ನು ಚರ್ಚೆ ಮಾಡಬೇಕಿದ್ದರೂ ನಿರ್ದೇಶಕ ನಿರ್ಮಾಪಕರನ್ನು ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು.

ಅಲ್ಲದೆ ತಮ್ಮ ಮನೆಯ ಸದಸ್ಯರಂತೆ ಅವರನ್ನು ಪ್ರೀತಿಸಿ ಸತ್ಕರಿಸುತ್ತಿದ್ದರು. ಹೀಗಿರುವಾಗ ಒಮ್ಮೆ ಸಿನಿಮಾದ ಕಥೆಯ ಕುರಿತು ಮಾತನಾಡುವ ಸಲುವಾಗಿ ಅಣ್ಣಾವ್ರ ಮನೆಗೆ ಹೋದ ಆದಿತ್ಯ ಚಿಕ್ಕಣ್ಣ ಚಿತ್ರದ ಕುರಿತು ಚರ್ಚೆ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಶಿವಣ್ಣ ಬಂದು ಅಪ್ಪಾಜಿ ಬಸ್ ಚಾರ್ಜ್ ಎಂದು ಕೇಳಿದರಂತೆ.

ಹೌದು ಗೆಳೆಯರೇ ಆ ಸಮಯದಲ್ಲಿ ಬಿ ಎಸ್ ಸಿ ಡಿಗ್ರಿ ಓದುತ್ತಿದ್ದಂತಹ ಶಿವಣ್ಣ ಮನೆಯಲ್ಲಿ ಐಷಾರಾಮಿ ಕಾರುಗಳಿದ್ದರೂ ಸಹ ಸಾರ್ವಜನಿಕವಾಗಿ ಬಸ್ನಲ್ಲಿ ಓಡಾಡುತ್ತಿದ್ದರು‌.

Kannada Actor Shiva Rajkumar

1,500 ಚಿತ್ರಗಳ ಒಡತಿ ಪಂಡರಿಬಾಯಿ ಅವರು ಆಗಿನ ಕಾಲದಲ್ಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ?

ಅಣ್ಣವರಿಗೆ ತಾನು ಓರ್ವ ಸೆಲೆಬ್ರಿಟಿ ಮಗ ಎಂಬ ಹಂಗು ಮಕ್ಕಳ ತಲೆಗೆ ಬರಬಾರದೆಂಬ ಉದ್ದೇಶ ಇತ್ತಂತೆ ಹಿಗಾಗಿ ಶಿವಣ್ಣ ಅದಾಗಲೇ ಹಲವರು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಕೂಡ ಪ್ರತಿನಿತ್ಯ ತಮ್ಮ ತಂದೆಯವರಿಂದ ಎರಡು ರೂಪಾಯಿ ಕೆಂಪು ನೋಟುಗಳನ್ನು ಪಡೆದು ಸಾರ್ವಜನಿಕರಂತೆ ಬಸ್ನಲ್ಲಿ ಪ್ರಯಾಣ ಮಾಡಿ ಕಾಲೇಜಿಗೆ ಹೋಗುತ್ತಿದ್ದರಂತೆ.

ಹೀಗೆ ಸಣ್ಣ ಪುಟ್ಟ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಅಭಿನಯಿಸಿ ತಕ್ಕಮಟ್ಟದ ಜನಪ್ರಿಯತೆ ಪಡೆದುಕೊಳ್ಳುವಂತಹ ಈಗಿನ ಕಲಾವಿದರ ಮಕ್ಕಳು ಬಿಎಂಡಬ್ಲ್ಯೂ ಫಾರ್ಚುನರ್ನಂತಹ ಕಾರುಗಳಲ್ಲಿ ಶಾಲೆಗೆ ಕಾಲೇಜಿಗೆ ಓದಲು ಹೋಗುತ್ತಾರೆ.

ಅಂತಹದರಲ್ಲಿ ಕನ್ನಡ ಸಿನಿಮಾ ರಂಗದ ಗಾಡ್ ಫಾದರ್ ಆಗಿ ಬೆಳೆದಿದ್ದ ಡಾಕ್ಟರ್ ರಾಜಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದು ಅಣ್ಣಾವ್ರು ತಮ್ಮ ಮಕ್ಕಳಿಗೆ ಕಲಿಸಿದಂತಹ ಸಂಸ್ಕಾರ ಎಂತದ್ದು ಎಂಬುದನ್ನು ಎತ್ತಿ ತೋರಿಸುತ್ತದೆ.

ಅಪ್ಪನ ನೆನಪಿಗಾಗಿ ಪುನೀತ್ ರಾಜಕುಮಾರ್ ಪುತ್ರಿ ಮಾಡಿರುವ ಕೆಲಸ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ! ದೊಡ್ಮನೆ ಮಕ್ಳು ನಿಜಕ್ಕೂ ಗ್ರೇಟ್!

Kannada Actor Shiva Rajkumar Bus Charge and pocket money when He Was Study Bsc Degree Goes Viral

Follow us On

FaceBook Google News

Kannada Actor Shiva Rajkumar Bus Charge and pocket money when He Was Study Bsc Degree Goes Viral