ಕೇರ್ ಆಫ್ ಫುಟ್‌ಪಾತ್ ಸಿನಿಮಾ ನಟ ಕಿಶನ್ ಈಗ ಹೇಗಾಗಿದ್ದಾರೆ ಗೊತ್ತಾ? ಅತಿ ಚಿಕ್ಕ ವಯಸ್ಸಿನಲ್ಲಿ ಮಿಂಚಿದ್ದ ಕಿಶನ್ ಸಿನಿಮಾ ರಂಗದಿಂದ ಮರೆಯಾಗಿದ್ದೇಕೆ?

ಸ್ನೇಹಿತರೆ, 2009ರಲ್ಲಿ ತೆರೆಕಂಡ ಕನ್ನಡದ ಕೇರ್ ಆಫ್ ಫುಟ್‌ಪಾತ್ ಸಿನಿಮಾ (Care of Footpath Kannada Cinema) ಬಹು ದೊಡ್ಡ ಮಟ್ಟದ ಯಶಸ್ಸನ್ನು ಗಳಿಸುವುದರ ಜೊತೆಗೆ ವಿಮರ್ಶಕರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಅದರಲ್ಲೂ ಅತಿ ಚಿಕ್ಕ ವಯಸ್ಸಿನಲ್ಲಿ ಮಾಸ್ಟರ್ ಕಿಶನ್ (Master Kishan Shrikanth) ಸಿನಿಮಾದಲ್ಲಿ ಮಾಡಿದಂತಹ ಅಭಿನಯ ಹಾಗೂ ನಿರ್ದೇಶನ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಹೌದು ಗೆಳೆಯರೇ ಅನಾಥ ಕೊಳಗೇರಿ ಹುಡುಗನ ಪಾತ್ರದಲ್ಲಿ ನಟ ಕಿಶನ್ (Kishan Shrikanth) ನಟಿಸುವ ಮೂಲಕ ಬಾಲ ಕಲಾವಿದನಾಗಿ ಎಂಟ್ರಿಕೊಟ್ಟು ಅನಂತರ ಇತರೆ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿಯೂ ತಮ್ಮ ಅಮೋಘ ಕಲೆಯನ್ನು ಪ್ರದರ್ಶಿಸಿದ್ದರು. ಹಾಗಾದ್ರೆ ಕಿಶನ್ ಈಗ ಹೇಗಿದ್ದಾರೆ? ಸ್ಯಾಂಡಲ್ವುಡ್ನಿಂದ ದೂರ ಉಳಿದಿರುವುದು ಯಾಕೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಅನಾಥ ಕೊಳಗೇರಿ ಹುಡುಗನೊಬ್ಬ ಪುಟ್ಪಾತ್ ನಲ್ಲಿ ಇದ್ದದ್ದನ್ನು ನೋಡಿ ವೃದ್ಧೆ ಒಬ್ಬಳು ದತ್ತು ಪಡೆದು ಅವನನ್ನು ಸಾಕುತ್ತಾಳೆ, ಹೀಗೆ ಬೆಳೆದು ದೊಡ್ಡವನಾದ ಮೇಲೆ ಚಿಂದಿ ಆಯುತ್ತ ರಸ್ತೆಯಲ್ಲಿ ಓಡಾಡುವಾಗ ಶಾಲಾ ವಿದ್ಯಾರ್ಥಿಗಳನ್ನು ನೋಡಿ ಅವರಂತೆ ತಾನು ಶಾಲೆಗೆ ಹೋಗಬೇಕು, ಬೂಟ್ಸ್ ಧರಿಸಬೇಕು ಎಂಬ ಹುಚ್ಚು ಆಸೆ ಹೇಗೆ ಹುಡುಗನಲ್ಲಿ ಚಿಗುರೊಡೆಯುತ್ತದೆ ಎಂಬುದರ ವಿಲಕ್ಷಣಾಧಾರಿತ ಸಿನಿಮಾದ ಕಥೆಯನ್ನು ನಟ ಕಿಶನ್ ಶ್ರೀಕಾಂತ್ ಹೇಳ ಹೊರಟಿದ್ದರು.
24 ನವೆಂಬರ್ 2006 ರಂದು ತೆರೆಗೆ ಬಂದ ಈ ಸಿನಿಮಾ ಕೇವಲ 80 ಕೋಟಿ ಬಜೆಟ್ ನಲ್ಲಿ ತಯಾರಾಗಿ ಆಗಿನ ಕಾಲಕ್ಕೆ ಬರೋಬ್ಬರಿ 26.8 ಕೋಟಿ ಅಧಿಕ ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುವ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿಕೊಳ್ಳುತ್ತದೆ.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಒಲವಿನ ಉಡುಗೊರೆ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
ತಮ್ಮ ಅಪ್ರತಿಮ ಅಭಿನಯದ ಚಾಪನ್ನು ತೆಲುಗು ಹಾಗೂ ಹಿಂದಿ ಸಿನಿಮಾರಂಗದಲ್ಲಿಯೂ ತೋರ್ಪಡಿಸುತ್ತ ಬಹಳಷ್ಟು ಬೇಡಿಕೆ ಗಿಟ್ಟಿಸಿಕೊಂಡಿದ್ದ ಈ ನಟನಿಗೆ ಕಾಲಕ್ರಮೇಣ ಸಿನಿಮಾಗಳ ಅವಕಾಶ ಕಡಿಮೆಯಾದ ಬೆನ್ನಲ್ಲೇ ಸದ್ಯ ತಮ್ಮ ತಂದೆಯ ಬಿಸಿನೆಸ್ ಕೆಲಸಗಳನ್ನು ನೋಡಿಕೊಂಡು ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಇರುವಂತಹ ಕಿಶನ್ ಶ್ರೀಕಾಂತ್ ಅವರು ಆಗಾಗ ಜನರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳೊಟ್ಟಿಗೆ ಒಡನಾಟದಲ್ಲಿದ್ದಾರೆ.
ವಿಪರ್ಯಾಸಾ ಏನಂದ್ರೆ ಕೇವಲ ಹತ್ತನೆಯ ವರ್ಷಕ್ಕೆ ನಿರ್ದೇಶಕನ ಕ್ಯಾಪ್ ಹಾಕಿ ಕೇರ್ ಆಫ್ ಫುಟ್ಪಾತ್ ಎಂಬ ಅದ್ಭುತ ಸಿನಿಮಾಗೆ ಆಕ್ಷನ್ ಕಟ್ ಹೇಳಿ ನಟನೆಯನ್ನು ಮಾಡಿ ಸಾಕಷ್ಟು ಪ್ರಶಸ್ತಿ ಪುರಸ್ಕಾರವನ್ನು ತಮ್ಮ ಮುಡಿಗೇರಿಸಿಕೊಂಡಂತಹ ಕಿಶನ್ ಅವರಂತಹ ಅಪ್ರತಿಮ ನಟನಿಗೆ ಸಿನಿಮಾ ರಂಗದಲ್ಲಿ (Kannada Film Industry) ಅವಕಾಶ ಸಿಗದಿರುವುದು ಬೇಸರದ ಸಂಗತಿ.
Interesting Facts About Kannada Care of Footpath Cinema Fame Master Kishan Shrikanth



